ಮಾನ್ಯ ಮುಖ್ಯಮಂತ್ರಿಗಳು 2011-12ನೇ ಸಾಲಿನಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಗುವಿಗೊಂದು ಮರ ಶಾಲೆಗೊಂದು ವನ ಎಂಬ ವಿನೂತನವಾದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದರು. ಇದರ ಕ್ರಕಾರ 5ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಇಷ್ಟದಂತೆ ಶಾಲೆಯ ಆವರಣದೊಳಕ್ಕೆ ಹಾಗೂ ತಮ್ಮ ಮನೆಯ ಸುತ್ತಮುತ್ತ ಒಂದೊಂದು ಸಸಿ ನೆಡುವುದು. ನಿರಂತರವಾಗಿ ಆ ಸಸಿಯನ್ನು ತನ್ನದೇ ಎಂಬಂತೆ ನೀರೆರೆದು ಪೋಷಣೆ ಮಾಡುವುದು. ಹೀಗೆ ವಿದ್ಯಾರ್ಥಿಗಳೇ ಸ್ವಯಂ ಸಸಿ ನೆಡುವುದರಿಮದ ಶಾಲೆಯಲ್ಲಿ ಒಂದು ವನವನ್ನೇ ಸೃಷ್ಟಿ ಮಾಡಬಹುದು, ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಬಹುದು.
ಶಿಕ್ಷಕ ಮಿತ್ರರೇ ನನ್ನ ಒಂದು ಸ್ವಾನುಭವವನ್ನು ನಾನಿಲ್ಲಿ ಒಂದಿನಿತು ಪ್ರಸ್ತಾಪಿಸುತ್ತೇನೆ. ನಾನು 3ನೇ ವರ್ಗದಲ್ಲಿದ್ದಾಗ ನಮ್ಮ ಶಿಕ್ಷಕರ ಆಣತಿಯಂತೆ ನಮ್ಮ ಶಾಲೆ(ಸರ್ಕಾರಿ ರನ್ನ ಮಾದರಿಯ ಪ್ರಾಥಮಿಕ ಶಾಲೆ ಮುಧೋಳ)ದಲ್ಲಿ ಒಂದು ಸಸಿ ನೆಟ್ಟು ಅದಕ್ಕೇ ನಮ್ಮದೇ ಹೆಸರನ್ನಿಟ್ಟು ಅದನ್ನು ಪೋಷಿಸುತ್ತ ಬಂದೆವು. ನಾನು 5ನೇ ತರಗತಿ ಮುಗಿಸುವ ಹೊತ್ತಿಗೆ ಅದು ನನ್ನಷ್ಟು ಎತ್ತರ ಬೆಳೆದಿತ್ತು. ಈಗ ಆ ಶಾಲೆ ತೊರೆದು ಸುಮಾರು 15ವರ್ಷಗಳಾಗಿವೆ.ಈಗಲೂ ಆ ಮರವನ್ನು ಕಂಡಾಗ ಎಲ್ಲಿಲ್ಲದ ಖುಷಿಯಾಗುತ್ತದೆ. ಇದೇ ರೀತಿ ನಾವು ನಮ್ಮ ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳಿಂದ ಸಸಿ ನೆಡಿಸಿದಾಗ ವಿದ್ಯಾರ್ಥಿಗಳಲ್ಲಿ ನೈಜವಾದ ಪರಿಸರ ಪ್ರೇಮ ಒಡಮೂಡುತ್ತದೆ.
ಉತ್ತಮವಾದ ಶಾಲಾ ಕಾಂಪೌಂಡ್ ಹೊಂದಿದ ಶಾಲೆಗಳಂತೂ ನಿಜವಾಗಿಯೂ ಒಂದು ಸುಂದರ ವನದಂತೆ ತೋರುತ್ತವೆ.
ನಮ್ಮ ಕೊಡಚಿ ಶಾಲೆಯ ವಾತಾವರಣ ಹೀಗಿಲ್ಲ. ನಮ್ಮ ಶಾಲಾ ಕಟ್ಟಡಗಳು ಅಲ್ಲಲ್ಲಿ ಹಂಚಿ ಹೋಗಿರುವುದರಿಂದ ಆಯಾ ತರಗತಿ ಗಳಮುಂದೆಯೇ ನಮ್ಮ ವಿದ್ಯಾರ್ಥಿಗಳು ಸಸಿ ನೆಡಲು ಸಿದ್ಧರಾಗಿದ್ದಾರೆ. ಎಲ್ಲ ಶಿಕ್ಷಕರುಈಒಂದು ಸುಂದರ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಿ.. Best of luck Teachers....
---ಸಚಿನ್ ಕುಮಾರ ಬ.ಹಿರೇಮಠ
No comments:
Post a Comment