Saturday 24 December 2011

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...ಮಂಕು ತಿಮ್ಮ..



ಕುಣಿಯೋಣು ಬಾರಾ...


ತರಗತಿಯಲ್ಲಿ ವಿದ್ಯಾರ್ಥಿಗಳು ಎಂದು ಸುಮ್ಮನೆ ಕೂಡುವುದಿಲ್ಲ. ದ.ರಾ.ಬೇಂದ್ರೆಯವರ 'ಪಾತರಗಿತ್ತಿ ಪಕ್ಕಾ' ಹಾಡಿಗೆ ಕುಣಿದಿದ್ದು ಹೀಗೆ..
ಬಣ್ಣದ ತಗಡಿನ ತುತ್ತೂರಿ ಗೀತ ಪಂಚಶಿಲಾ ಕುಣಿದಿದ್ದು ಹೀಗೆ

ದರ್ಪಣಗಳು ; ಒಂದು ಪ್ರಾಯೋಗಿಕ ಕಲಿಕೆ


ರ್ಪಣಗಳಲ್ಲಿ ಉಂಟಾಗುವ ಪ್ರತಿಬಿಂಬಗಳ ಬಗ್ಗೆ ಅಂದು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿತ್ತು. ಅದಕ್ಕೆಂದೇ ನಿಮ್ನ ದರ್ಪಣ, ಸ್ಟ್ಯಾಂಡ್, ಬೇಸ್ ಬೋರ್ಡ್ ಮೇಣದ ಬತ್ತಿ ಪರದೆ ಎಲ್ಲವನ್ನು ಸಿದ್ಧಪಡಿಸಿಕೊಂಡು ತರಗತಿಗೆ ಹೋದೆ.

 ನಿಮ್ನ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬಗಳನ್ನು ಪ್ರಯೋಗ ಮಾಡಿ ತೋರಿಸಿದಾಗ ವಿದ್ಯಾರ್ಥಿಗಳಲ್ಲಿ ಎಲ್ಲಿಲ್ಲದ ಖುಷಿ.
 ಸತ್ಯ ಪ್ರತಿಬಿಂಬ ಮಿಥ್ಯ ಪ್ರತಿಬಿಂಬಗಳ ನಡುವಿನ ಕನ್ ಫ್ಯೂಷನ್ ಗಳೆಲ್ಲ ಅಂದು ದೂರವಾದವು. ಪ್ರತಿಬಿಂಬವನ್ನು ಪರದೆಯ ಮೇಲೆ ಹಿಡಿದ ವಿದ್ಯಾರ್ಥಿಗಳು ಯಾವುದೋ ಅದಮ್ಯವಾದ ಸಾಧನೆ ಮಾಡಿದ ಖುಷಿಯಲ್ಲಿದ್ದರು.
 ಗಂಡು ಮಕ್ಕಳಂತೂ ಪದೇ ಪದೇ ಪ್ರತಿಬಿಂಬವನ್ನು ಹಿಡಿದು ತಮ್ಮ ಸಂಶಯಗಳನ್ನೆಲ್ಲ ದೂರ ಮಾಡಿಕೊಂಡರು
 ನಿಮ್ನ ದರ್ಪಣದ ಅನ್ವಯಿಕಗಳು ಬಹಳವಿರುವದರಿಂದ ಈ ಪ್ರಯೋಗ ಅವರಲ್ಲಿ ವೈಜ್ಞಾಇಕ ಮನೋಭಾವನೆಯನ್ನು ಮೋಡಿಸಿತೆನ್ನಬಹುದು.
 ಪ್ರಧಾನ ಅಕ್ಷ, ದರ್ಪಣ ಧ್ರುವ, ಪ್ರಧಾನ ಸಂಗನ, ಸಂಗಮ ಬಿಂದು ಈ ಎಲ್ಲ ಪರಿಕಲ್ಪನೆಗಳನ್ನು ಅಷ್ಟು ಸುಲಭವಾಗಿ ಕಲಿಸಲಾಗುವುದಿಲ್ಲ. ಆದರೆ ಈ ಪ್ರಯೋಗ ಅದನ್ನೆಲ್ಲ ಪರಿಹರಿಸಿತು.







--ಸಚಿನ್ ಕುಮಾರ ಬಿ.ಹಿರೇಮಠ

Saturday 10 December 2011

ಮೀನಾ ಚಟುವಟಿಕೆಗಳು.....



7ನೇ ತರಗತಿ ಮಕ್ಕಳಿಂದ ಕಾಗದದ ಗ್ಲಾಸ್ ಬಾಕ್ಸ್ ತಯಾರಿಕೆ..
ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಹಳೆಯ ದಿನಪತ್ರಿಕೆಗಳನ್ನು ಬಳಸಿ ವಿವಿಧ ಸಾಮನುಗಳನ್ನು ತಯಾರಿಸುತ್ತಿರುವುದು. 









---ಸಚಿನ್ ಕುಮಾರ ಬಿ.ಹಿರೇಮಠ