ಮೀನಾ,
1990 ರ ಸುಮಾರಿಗೆ ದೂರದರ್ಶನದಲ್ಲಿ ಕೇಳುತ್ತಿದ್ದ ಹೆಸರು. ಮೀನಾ, ಮೀನಾನ ತಮ್ಮ ,ಮಿಟ್ಟು ಗಿಳಿ ಮತ್ತು ಮೀನಾನ ತಂದೆ ತಾಯಿ - ಇವರೆಲ್ಲಾ ಮೀನಾ ಕುಟುಂಬದ ಸದಸ್ಯರು. ತ್ಮಮ ಬಡತನದಿಂದಾಗಿ ಮೀನಾಳನ್ನು ಶಾಲೆ ಬಿಡಿಸುವ ಪ್ರಯತ್ನದಲ್ಲಿ ಅವಳ ಪೋಷಕರು ಇರುತ್ತಾರೆ. ಆದರೆ ದಿಟ್ಟ ಹುಡುಗಿ ಮೀನಾ ತನ್ನ ಜಾಣ್ಮೆಯಿಂದಾಗಿ ಶಾಲೆ ತೊರೆಯದೇ ತನ್ನ ಕುಟುಂಬದ ಸಮಸ್ಯೆಯನ್ನೆಲ್ಲ ನೀಗಿಸುತ್ತಾಳೆ. ಕೆಲವೊಂದು ದಿನ ಮೀನಾ ಶಾಲೆ ತೊರೆದಾಗ ಮೀನಾ ತನ್ನ ಮಿಟ್ಟು ಗಿಳಿಯನ್ನು ಶಾಲೆಗೆ ಕಳುಹಿಸಿ ತಾನು ಅದರಿಂದ ಕಲಿಯುತ್ತಾಳೆ. ಹೀಗೆ ಮೀನಾ ಎಂಬ ಮುದ್ದು ಮನಸ್ಸಿನ ದಿಟ್ಟ ಹುಡುಗಿಯ ಕೆಲವು ಸ್ವರಸ್ಯಕರ ಕಥೆಗಳಿಂದಾಗಿ ರಾಜ್ಯದ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಹಿಳಾ ಸಬಲೀಕರಣದ ಹಿನ್ನೆಲೆಯಾಗಿಸಿ 'ಮೀನಾ' ಎಂಬ ಕಾರ್ಯಕ್ರಮವನ್ನು ಜಾರಿ ತರಲಾಗಿದೆ.
ಪ್ರತಿ ಶಾಲೆಗಳಲ್ಲಿ ಮೀನಾ ಎಂಬ ಇಪ್ಪತ್ತು ವಿದ್ಯಾರ್ಥಿಗಳ ತಂಡವೊಂದನ್ನು ರಚಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮೀನಾ ಕಾರ್ಯಕ್ರಮದ ಉದ್ದೇಶಗಳು :
ಹೆಣ್ಣು ಮಕ್ಕಳ ಶಿಕ್ಷಣ
ಶಾಲಾ ಹಂತದಿಂದಲೇ ಮಹಿಳಾ ಸಬಲೀಕರಣ
ಗ್ರಾಮೀಣ ಪ್ರದೇಶಗಳಲ್ಲಿನ ಮೂಢನಂಬಿಕೆಗಳ ತೊಡೆದುಹಾಕುವಿಕೆ
ಜೀವನ ಕೌಶಲಗಳು
ಜನಜಾಗೃತಿ
ನಮ್ಮ ಶಾಲೆಯ ಮೀನಾ ಕಾರ್ಯಕ್ರಮಗಳು ಹೀಗಿವೆ :
ಶಾಲೆ ತೊರೆದ ಮಕ್ಕಳ ಮನೆಗೆ ಭೇಟಿ ನೀಡಿ ಕರೆತರಲಾಗಿದೆ. ಮರೆಮ್ಮ ತಂದೆ ಧರ್ಮಣ್ಣ ಎಂಬ ಹುಡುಗಿಯನ್ನು ಪೋಷಕರೇ ಶಾಲೆ ಬಿಡಿಸಿ ಕೂಲಿಗೆ ಕಳುಹಿಸುತ್ತಿದ್ದಾಗ ನಮ್ಮ ಮೀನಾ ತಂಡ ಆ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮಗುವನ್ನು ಶಾಲೆಗೆ ಕಳುಹಿಸುವಂತೆ ಮಾಡಿತು.
ಬೀದಿ ನಾಟಕಗಳ ಮೂಲಕ ಜನ ಜಾಗೃತಿ. 26ನೇ ಜನವರಿ 2011 ರಂದು ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ 'ಅವ್ವಾ ನನ ಮಾತ ಕೇಳವ್ವ' ಎಂಬ ಬೀದಿನಾಟಕ ಪ್ರದರ್ಶನ.
ಮೀನಾ ತಂಡದ ವಿದ್ಯಾರ್ಥಿನಿಯರಿಂದ ಬೀಸಣಿಗೆ,ರಸ್ನಾ ಪೌಡರ್, ಮಾಲೆ,ಮಣ್ಣಿನ ಮಾದರಿಗಳ ತಯಾರಿಕೆ
ಈ ಎಲ್ಲ ಉತ್ತಮ ಕಾರ್ಯಕ್ರಮಗಳ ಹಿಂದೆ ನಮ್ಮ ತಾಲ್ಲೂಕಿನ ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಶೇಖರ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ರುದ್ರಗೌಡ ಪಾಟೀಲ್,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೋನಪ್ಪ ಬಡಿಗೇರ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಚಿಯ ಮುಖ್ಯ ಗುರುಗಳಾದ ಶ್ರೀ ಹರಿಶ್ಚಂದ್ರ ನಾಯಕ್ ಅವರ ಶ್ರಮ ಇದೆ.

ಮೀನಾ ತರಬೆತಿಯಲ್ಲಿ ಅನಿವಾರ್ಯವಾಗಿ ಮೀನಾ ಶಾಲೆ ಬಿಡಬೇಕಾಗಿ ಬರುತ್ತದೆ. ಆಗ ಶಿಕ್ಷಕಿಯ ಮಾರ್ಗದರ್ಶನದಲ್ಲಿ ಮೀನಾ ಮತ್ತು ಅವಳ ಕುಟುಂಬ ಆ ಅನಿವಾರ್ಯತೆಯಿಂದ ಹೊರಬಂದು ಮೀನಾ ಳನ್ನು ಶಾಲೆ ತೊರೆಯದಂತೆ ಮಾಡುತ್ತಾರೆ. ಇದೇ ಕಥೆಯನ್ನು ಮೀನಾ ತಂಡದ ಮಕ್ಕಳು ಅಭಿನಯಿಸಿ ಪ್ರದರ್ಶಿಸುತ್ತಿರುವುದು.
ಮಕ್ಕಳಿಗೆ ಕರಕುಶಲತೆಯಲ್ಲಿ ಆಸಕ್ತಿ ಮೂಡಿಸಲು ಕ್ರಾಫ್ಟ್ ವರ್ಕ್ ಬಗ್ಗೆ ಮಾಹಿತಿ ನೀಡಿದರು.
ಮೀನಾ ತಂಡದ ಸದಸ್ಯರನ್ನು ಒಳಗೊಂಡ ಪುಟ್ಟ ಕುಟುಂಬದ ಪಾತ್ರಧಾರಿಗಳು. ಒಟ್ಟಿನಲ್ಲಿ ಎಲ್ಲಾ ಮೀನಾ ತಂಡದ ಮಕ್ಕಳು ಉತ್ಸಾಹದೊಂದಿಗೆ ಪಾಲ್ಗೊಂಡು NPEGEL ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾರಣರಾದರು.
---ಸಚಿನ್ ಕುಮಾರ ಬಿ.ಹಿರೇಮಠ ಶಿಕ್ಷಕರು
sachin i have seen your creative work and concern for the school,it is very advanced ,informative,educative,teacher friendly.one can proudly announce that sachin is the best,proud to share a cluster with you.go for more and more science related topics .GOODLUCK>
ReplyDeleteRamesh mathad hps gugihal