ಮತ್ತೇ ಶುರುವಾಯಿತು ನಮ್ಮ ಕೊಡಚಿ ಶಾಲೆ. ಹೌದು ಇಂದು ದಿನಾಂಕ 30 ನೇ ಮೇ,2011. ಕೊಡಚಿ ಗ್ರಾಮದ ಪೋಷಕರಲ್ಲಿ, ಮಕ್ಕಳಲ್ಲಿ ಹಾಗೂ ಶಿಕ್ಷಕರ ಮನದಲ್ಲಿ ಏನೋ ತಳಮಳ. 20-25 ದಿನಗಳಿಂದ ಶಾಲೆಯಿಂದ ದೂರವೇ ಉಳಿದ ಮಕ್ಕಳಿಗೆ ಶಿಕ್ಷಕರಿಗೆ ಮತ್ತೇ ಸಮ್ಮಿಲನದ ಪರಮಾನಂದ. ಶಾಲೆಯ ಕಟ್ಟಡ ನವವಧುವಿನಂತೆ ಸಿಂಗರಿಸಿಕೊಂಡು ನಿಂತಿತ್ತು.
ಶಿಕ್ಷಕರೆಲ್ಲ ದಿ.27ಕ್ಕೇ ಶಾಲೆಗೆ ಬಂದು ಸ್ವಚ್ಛತಾ ಕಾರ್ಯ, ಶಾಲಾ ವೇಳಾಪಟ್ಟಿ, ಶಾಲಾ ಪಂಚಾಂಗ, ವರ್ಗವಾರು ಪಠ್ಯ ವಿಭಜನೆ ಮುಂತಾದ ಕೆಲಸ ಕಾರ್ಯಗಳನ್ನು ಮುಗಿಸಿದೆವು. ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀ ಹರಿಶ್ಚಂದ್ರ ನಾಯಕ್ ಅವರು ಸಹಶಿಕ್ಷಕರೊಂದಿಗೆ ಸೇರಿ ಸಿದ್ಧತೆಯ ಬಹುಪಾಲು ಕೆಲಸವನ್ನು ಮುಗಿಸಲು ನೆರವಾದರು.
--ಸಚಿನ್ ಕುಮಾರ ಬಿ.ಹಿರೇಮಠ
ನವವಧುವಿನಂತೆ ಸಿಂಗರಿಸಿಕೊಂಡ ನಲಿಕಲಿ ಶಾಲಾ ಕೋಣೆ |
--ಸಚಿನ್ ಕುಮಾರ ಬಿ.ಹಿರೇಮಠ
ಬಣ್ಣ ಬಳಿದುಕೊಂಡು ಸಿಂಗಾರಗೊಂಡ ಕೊಡಚಿ ಶಾಲೆಯ ಕಾರ್ಯಾಲಯ |
No comments:
Post a Comment