Thursday, 22 January 2015

ಸಿಂಚನ ; ಒಂದು ವಿನೂತನ ತರಬೇತಿ

ಹಿರಿಯ ಪ್ರಾಥಮಿಕ ಶಾಲೆಯ 6 ರಿಂದ 8 ನೆಯ ತರಗತಿಗಳ ಗಣಿತ ಬೋಧಿಸುವ ಶಿಕ್ಷಕರಿಗೆ ಐದು
ದಿನಗಳ ತರಬೇತಿ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಿಂಚನ ತರಬೇತಿ
ನಡೆಯಿತು. ತರಬೇತಿಯಲ್ಲಿ ಗಣಿತ ವಿಷಯದಲ್ಲಿನ ಪರಿಕಲ್ಪನೆಗಳನ್ನು ವಿಶಿಷ್ಟ ರೀತಿಯಲ್ಲಿ
ತಿಳಿಸಲಾಯಿತು. ಯಾವುದೇ ಬೀಜಾಕ್ಷರದ ಘಾತ ಸೊನ್ನೆ ಇದ್ದಾಗ ಬೆಲೆ ಒಂದು ಹೇಗೆ?
ಎಂಬುದನ್ನು ಬೇರೆ ಬೇರೆ ವಿಧಾನಗಳಿಂದ ತಿಳಿಸಿದರು. ಗಣಿತ ವಿಷಯದಲ್ಲಿ ಪಾಠ ಯೋಜನೆ,
ಅದರ ವ್ಯಾಪ್ತಿ, ತೊಟಡಗಿಸಿಕೊಳ್ಳುವಿಕೆ, ಶೋಧಿಸುವಿಕೆ, ಅಭಿವ್ಯಕ್ತಿಸುವಿಕೆ,
ಅನ್ವಯಿಸುವಿಕೆ,ಮೌಲ್ಯಮಾಪನ ಹೀಗೆ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಪನ್ಮೂಲ
ವ್ಯಕ್ತಿಗಳು ವಿಶಿಷ್ಟವಾಗಿ ವಿವರಿಸಿದರು.
ಶಿಬಿರಾರ್ಥಿಗಳನ್ನು ತಂಡಗಳಾಗಿ ಮಾಡಿ ಪ್ರತಿ ತಂಡಕ್ಕೂ ಒಂದು ಘಟಕ ನೀಡಿ ಪಾಠ ಮಂಡನೆ
ಮಾಡಲು ತಿಳಿಸಲಾಯಿತು. ಎಲ್ಲ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದು
ವಿಶೇಷವಾಗಿತ್ತು.

No comments:

Post a Comment