ಇಂದು ದಿನಾಂಕ 09-01-2015ರಂದು ನಮ್ಮ ಕೊಡಚಿ ಶಾಲೆಯಲ್ಲಿ 'ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ' ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭವನ್ನು ಯಾಳವಾರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಪರವಾಗಿ ಶ್ರೀ ಮಾನಪ್ಪ ಅವರು, ಕಾರ್ಯದರ್ಶಿಗಳಾದ ಶ್ರೀ ಕಾಸಯ್ಯಅವರು ಹಾಗೂ ಇಜೇರಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಶ್ರೀ ಮಾನಪ್ಪ್ ಪೂಜಾರಿ, ಶ್ರೀ ಯಲ್ಲಪ್ಪಗೌಡ ಮಾಲಿ ಪಾಟೀಲ್, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಶ್ರೀ ಮರೆಪ್ಪ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು) ಯಾಳವಾರದ ಮುಖ್ಯಗುರುಗಳಾದ ಶ್ರೀ ಅಫ್ಸರ್ ಮಿಯಾ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೀಗರಥಹಳ್ಳಿಉ ಮುಖ್ಯಗುರುಗಳಾದ ಶ್ರೀ ಇಬ್ರಾಹಿಮ್ ಹಾಗೂ ಗ್ರಾಮದ ವಿವಿಧ ಸಂಘದ ಪದಾಧಿಕಾರಿಗಳು,ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಸಕ್ತರು ಭಾಗವಹಿಸಿದ್ದರು. ಶಿಕ್ಷಕರಾದ ಶ್ರೀ ಮಂಜುನಾಥ ಎಸ್.ಜೆ ಅವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೆ ಸ್ವಾಗತ ಕೋರಿದರು. ಶಿಕ್ಷಕರಾದ ಶ್ರೀ ಸಚಿನ್ ಕುಮಾರ ಹಿರೇಮಠ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ.ಸಂ.ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿಯವರು ಸಭೆಯ ಗುರಿ ಮತ್ತು ಉದ್ಧೇಶಗಳನ್ನು ವಿವರಿಸಿದರು. ಬಳಿಕ ಎಲ್ಲ ಭಾಗೀದಾರರನ್ನು 4 ಗುಂಪುಗಳನ್ನು ಮಾಡಿ ಶಾಲೆಯಲ್ಲಿರುವ ಸೌಲಭ್ಯಗಳು ಹಾಗೂ ಅವಶ್ಯಕ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಶ್ರೀ ಯಲ್ಲಪ್ಪ ಗೌಡರು ಹಾಗೂ ಶ್ರೀ ಚಾಂದ್ ಪಾಶಾ ಅವರು ಶಾಲೆಗೆ ಕ್ರಮವಾಗಿ 100 ಪ್ಲೇಟ್ಗಳನ್ನು ಹಾಗೂ 100 ಲೋಟಗಳನ್ನು ದಾನವಾಗಿ ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಕಾರ್ಯದರ್ಶಿಗಳು ಶಾಲೆಗೆ ಒಂದು ಕಂಪ್ಯೂಟರ್ ನೀಡುವುದಾಗಿ ಒಪ್ಪಿಕೊಂಡರು.
No comments:
Post a Comment