ಅಂದು ತರಗತಿಯಲ್ಲಿ ತೀರಾ ಗದ್ದಲ. ನನ್ನ ಕೈಯಲ್ಲಿದ್ದ ಕೋಲು ಹಾಗೂ ಕ್ಯಾರಿ ಬ್ಯಾಗ್
ನೋಡಿ ವಿದ್ಯಾರ್ಥಿಗಳು ಕ್ಷಣ ಕಾಲ ಭಯಭೀತರಾದರು. ಹೋಂ ವರ್ಕ್ ಮಾಡದವರಿಗೆ ಇದೆ ಹಬ್ಬ
ಅಂತ ಅವರು ತಿಳಿದರೇನೋ? ಒಟ್ಟಿನಲ್ಲಿ ತರಗತಿ ನಿಶ್ಶಬ್ದವಾಯಿತು. ಎಲ್ಲರಿಗೂ ಹಾಯ್
ಹೇಳಿ ನಾನು ತಂದಿದ್ದ ಕೋಲನ್ನು ಒಬ್ಬ ವಿದ್ಯಾರ್ಥಿಗೆ ಮುರಿಯಲು ತಿಳಿಸಿದೆ.ಆತ
ತನ್ನೆಲ್ಲ ಶಕ್ತಿ ಹಾಕಿ ಆ ಕೋಲನ್ನ ಮುರಿದೇಬಿಟ್ಟ,
ಮುಂದೆ ನಾನು ತಂದಿದ್ದ ಕ್ಯಾರಿ ಬ್ಯಾಗ್ ನಿಂದ ಒಂದು ನೀರು ತುಂಬಿದ ವಾಟರ್ ಬಾಟಲ್
ತೆಗೆದು ತರಗತಿ ಎದುರಿನ ಮಣ್ಣಿಗೆ ಎರಚಿದೆ, ಹೀಗೆ ವಿವಿಧ ಶಕ್ತಿಯ ರೂಪಗಳನ್ನು ಸರಳ
ಚಟುವಟಿಕೆಗಳ ಮೂಲಕ ಅನುಗಮನ ವಿಧಾನದಿಂದ ಪರಿಚಯಿಸುತ್ತ ಹೋದೆ. ನನ್ನ
ವಿದ್ಯಾರ್ಥಿಗಳಿಗೆ ನಾನು ಕಲಿಸಿದೆ ಎನ್ನುವುದಕ್ಕಿಂತ ಅವರೇ ಪೂರಕವಾಗಿ ಕಲಿಯುತ್ತಾ
ಹೋದರು. ಪ್ಯಾಯೋಗಿಕ ಬೋಧನೆಯೊಂದಿಗೆ ಪ್ರಾತ್ಯಕ್ಷಿಕೆ ನೀಡಿದರೆ ಸುಳಿದ ಬಾಳೆಹಣ್ಣಂತೆ
ಎಲ್ಲವನ್ನೂ ಚಿಣ್ಣರು ಕಲಿಯಬಲ್ಲರು
No comments:
Post a Comment