Thursday, 1 August 2013

ಸಿಹಿ ಸಿಹಿ ಹಾಲು ಸವಿಯೋಣ ; 'ಕ್ಷೀರ ಭಾಗ್ಯ' ಯೋಜನೆ ಉದ್ಘಾಟನೆ

ಇಂದು ಎಂದಿನಂತಿರಲಿಲ್ಲ.. ಬೆಳಗ್ಗೆಯಿಂದ ನಮ್ಮೆಲ್ಲಾ ಶಿಕ್ಷಕರ ಫೋನುಗಳು ರಿಂಗಣಿಸುತ್ತಿದ್ದವು. ಆಕಡೆಯಿಂದ  ಒಂದೇ ಪ್ರಶ್ನೆ, "ಸರ್ ಇನ್ನು ಶಾಲೆಗೆ ಬಂದಿಲ್ವಾ..?" ನಾನಂತೂ ಆಗಾಗ ನನ್ನ ವಾಚ್ ನ್ನು ನೋಡಿಕೊಳ್ಳುತ್ತಿದ್ದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಒಂದೇ ಸಮನೆ ಫೊನು ಮಾಡಿ ವಿಚಾರಿಸುತ್ತಿದ್ದುದು ಇಂದು ವಿತರಿಸಬೇಕಾಗಿದ್ದ ಹಾಲಿನ ಬಗ್ಗೆ. ಅವರಿಗೆ ಹಾಲು ಸವಿಯುವ ಕಾತುರ.. ನಮಗೋ ಒಂಥರ ಆತುರ..

  ಬೆಳಗ್ಗೆ ಸರಿಯಾಗಿ 8.30ಕ್ಕೆ ನಮ್ಮ ಮುಖ್ಯಗುರುಗಳು ಹಾಗೂ ನಾವೆಲ್ಲಾ ಸಹಶಿಕ್ಷಕರು ನಿನ್ನೆ  ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ್ದ ಹಾಲಿನ ಪುಡಿ, ಸಕ್ಕರೆ ಸಾಮಗ್ರಿಗಳನ್ನ ಹೊತ್ತು ಶಾಲೆಗೆ ಬಂದೆವು. ಬಳಿಕ ಕ್ಷಿರ ಭಾಗ್ಯ ಯೋಜನೆಯ ಉದ್ಘಾಟನೆಗೆ ರೆಡಿ ಮಾಡಿ ಗ್ರಾಮದ ಪ್ರಮುಖರನ್ನು, ಎಸ್.ಡಿ.ಎಮ್.ಸಿ ಯವರನ್ನು ಕರೆಯಿಸಿ ಸನ್ನದ್ಧರಾದೆವು. ಮುಖ್ಯಅಡುಗೆಯವರಾದ ಶ್ರೀಮತಿ ಮಕಲಮ್ಮ ಗೌಡತಿ, ಶ್ರೀಮತಿ ನಾಗಮ್ಮ ಹಾಗೂ ಶ್ರೀಮತಿ ಶಾಣಮ್ಮ ಅವರು ಆವು ಈಡಿದ್ದ ಹಾಲಿನ ಪುಡಿ ಹಾಗು ಸಕ್ಕರೆ ಬಳಸಿ ಹಾಲು ತಯಾರಿಸಿದರು.

                              9.10 ರ ಸುಮಾರಿಗೆ ಕ್ಷೀರ ಭಾಗ್ಯ ಯೋಜನೆಯನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀ ಹರಿಶ್ಚಂದ್ರ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಾನಪ್ಪ ಪೂಜಾರಿ, ಶ್ರೀ ಮಹಾದೇವಪ್ಪ ದೇಸಾಯಿ, ಶ್ರೀ. ನಿಂಗಣ್ಣಗೌಡ ಮಾಲಿಪಾಟೀಲ, ಶ್ರೀ ನಿಂಗಣ್ಣ ಕವಾಲ್ದಾರ,  ಶ್ರೀ. ಶಿವಪ್ಪ, ಶ್ರೀ ಲಕ್ಷ್ಮಣ, ಬಸವಂತರಾಯ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯಾದ ಶ್ರೀಮತಿ ಬಸಮ್ಮ. ಸಕ್ರೆಪ್ಪ ,ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರಿ ಸಪ್ಪಣ್ಣ ಭೀಮರಾಯ ಹಾಗೂ ಸದಸ್ಯರು ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.

     ಸಹ ಶಿಕ್ಷಕರಾದ ಶ್ರೀ ಸಚಿನ್ ಕುಮಾರ ಹಿರೇಮಠ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಮುಖ್ಯೋಪಾದ್ಯಾಯರು ಹಾಗೂ ಎಲ್ಲ ಅತಿಥಿ ಗಣ್ಯರು 'ಕ್ಷೀರ ಭಾಗ್ಯ' ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಶ್ರೀ ಮಂಜುನಾಥ ಸ.ಶಿ ಮಾತನಾಡಿ ಯೋಜನೆಯ ಮಹತ್ವವನ್ನು ತಿಳಿಸಿದರು. ಆಮೇಲೆ ಶ್ರೀ ಗೋಣೆಪ್ಪ ಸ.ಶಿ ಇವರು ಮಾತನಾಡಿ ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದರು. ಗ್ರಾಮದ ಮತ್ತೋರ್ವ ಶಿಕ್ಷಕರಾದ ಶ್ರೀ ಲಕ್ಷ್ಮಣ ಅವರೂ ಸಹ ಮಾತನಾಡಿ ಯೋಜನೆನ್ನು ಶ್ಲಾಘಿಸಿದರು.
     ಬಳಿಕ  ಎಲ್ಲ ವಿದ್ಯಾರ್ಥಿಗಳಿಗೆ ಅಡುಗೆ ಸಹಾಯಕಿಯರು ಹಾಲು ಹಂಚಿದರು. ಹಾಲು ಕುಡಿದ ವಿದ್ಯಾರ್ಥಿಗಳ ಸಂತಸ ಹೇಳತೀರದು. ಅದಕ್ಕೆ ಸಾಕ್ಷಿಯಾಗಿ ಇಲ್ಲೊಂದಿಷ್ಟು ಪೋಟೊಗಳು..



















































No comments:

Post a Comment