Wednesday, 21 November 2012

ಮಹಿಳಾ ಸಬಲೀಕರಣದ ಚಿಗುರು

   "ಯತ್ರ ನಾರ್ಯಂತು ಪೂಜ್ಯಂತೇ
    ರಮ್ಯಂತೇ ತತ್ರ ದೇವತಃ "

   ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಗಮಿಸುತ್ತಿರುತ್ತಾರೆ ಎಂಬುದು ಮೇಲಿನ ಸಾಲುಗಳ ತಾತ್ಪರ್ಯ. ಇಂತಹ ಮೋಹಕ ಸಾಲುಗಳನ್ನು ಬಳಸುತ್ತ ನಾಮ ಮಾತ್ರಕ್ಕೆ ಮಹಿಳೆಯರನ್ನು ಮೇಲ್ ಸ್ತರಕ್ಕೆ ತರುವ ಅವಿರತ ಪ್ರಯತ್ನವನ್ನು ಪುರುಷ ಸಮಾಜ ಶತಶತಮಾನಗಳಿಂದ ಮಾಡುತ್ತಲೇ ಬಂದಿದೆ. ದೇಶದಲ್ಲಿ ಎಷ್ಟೋ ಮಹಿಳೆಯರು ಇನ್ನೂ ಅಡುಗೆ ಮನೆ ಹುಡುಗಿಯರಾಗಿ ಕಿರು ಕಿಂಡಿಯಲ್ಲಿ ಬರಿ ಬಯಲ ಆಕಾಶವನ್ನು ನೋಡುತ್ತಿದ್ದಾರೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳಾದ ಕೇಶ ಮುಂಡನ, ಬಾಲ್ಯ ವಿವಾಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ಉದ್ದೇಶಿತ ಅನಕ್ಷರತೆಯಂತಹವುಗಳು ಇನ್ನೂ ದೂರಾಗಿಲ್ಲ. ಎಲ್ಲೋ ಒಂದು ಕಡೆ ಇವೆಲ್ಲ ಇನ್ನೂ ಜೀವಂತವಾಗಿವೆ. ಇಂತಹ ಸಮಸ್ಯೆಗಳು ಮಹಿಳೆಯರ ಬೆಂಗಾವಲಲ್ಲಿ ಸುಳಿಯುತ್ತಿವೆ. ಈ ಪರಿಯ ಅಸಹನೀಯ ವಾತಾವರಣಕ್ಕೆ ಕಾರಣಗಳು ಅನೇಕ. ಆದ್ದರಿಂದ ಬಾಲ್ಯದಿಂದಲೇ ಪ್ರಾಥಮಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸದ್ದಿಲ್ಲದೆ ಯೋಜನೆಯೊಂದು ಶುರುವಾಗಿದೆ. ಅದೇ ಮೀನಾ ತಂಡಗಳುಳ್ಳ ಎನ್.ಪಿ.ಇ.ಜಿ.ಇ.ಎಲ್(NPEGEL) ಕಾರ್ಯಕ್ರಮ.
ಎನ್.ಪಿ.ಇ.ಜಿ.ಇ.ಎಲ್(NPEGEL) ನಡೆದು ಬಂದ ದಾರಿ :
    ದಕ್ಷಿಣ ಏಷ್ಯಾದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ UNICEF ರೂಪಿಸಿದ ಈ ಹೊಸ ಕಾರ್ಯಕ್ರಮವು ಸೆಪ್ಟೆಂಬರ್ 24, 1998ರಂದು ಅಧಿಕೃತವಾಗಿ ನಮ್ಮ ಭಾರತ ದೇಶದಲ್ಲಿ ಪರಿಚಿತವಾಯಿತು. ಉತ್ತರ ಪ್ರದೇಶದ 28 ಸಾವಿರಕ್ಕೂ ಹೆಚ್ಚಿನ ಶಾಲೆಗಳಲ್ಲಿ ಪರೀಕ್ಷಾರ್ಥವಾಗಿ ಆರಂಭಗೊಂಡು ಯಶಸ್ಸನ್ನು ಕಂಡಿತು. ನಮ್ಮ ಕರ್ನಾಟಕದಲ್ಲೂ ಕೆಲವು ಹಿಂದುಳಿದ ಬ್ಲಾಕ್(ತಾಲ್ಲೂಕು)ಗಳಲ್ಲಿ ಎನ್.ಪಿ.ಇ.ಜಿ.ಇ.ಎಲ್(National Programme for Education of Girls at Elementary Level) ಅಂದರೆ 'ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ' 2008-09 ನೇ ಸಾಲಿನಲ್ಲಿ ಪ್ರಾರಂಭವಾಯಿತು. ಕಳೆದ ಎರಡು ವರ್ಷಗಳಿಂದರಾಜ್ಯದ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎನ್.ಪಿ.ಇ.ಜಿ.ಇ.ಎಲ್ ಪ್ರಾರಂಭವಾಗಿ ಯಶಸ್ಸಿನತ್ತ ದಾಪುಗಾಲು ಇಟ್ಟಿದೆ.

ಎನ್.ಪಿ.ಇ.ಜಿ.ಇ.ಎಲ್(NPEGEL)ನಲ್ಲಿ ಏನಿದೆ?
   ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳಿಗೆ ಒಂದು ವಿಭಿನ್ನ ರೀತಿಯ ತರಬೇತಿ ಇದೆ. ಇಲ್ಲಿ 20 ವಿದ್ಯಾರ್ಥಿಗಳ  ಒಂದು ತಂಡವಿರುತ್ತದೆ. ಅದನ್ನು 'ಮೀನಾ ತಂಡ' ಎಂದು ಕರೆಯಲಾಗುತ್ತದೆ. ಈ ತಂಡದ ಕಾರ್ಯಕ್ರಮಗಳ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಗಮನ ಹರಿಸಲಾಗುತ್ತದೆ. ವಿದ್ಯಾರ್ಥಿನಿಯರಿಗೆ ವೃತ್ತಿ ತರಬೇತಿ ಹಾಗೂ ಜೀವನ ಕೌಶಲಗಳನ್ನು ಕಲಿಸಲಾಗುತ್ತಿದೆ. ಹೊಲಿಗೆ, ಕಸೂತಿ,ಅಗರಬತ್ತಿ ತಯಾರಿಕೆ, ಮೇಣದ ಬತ್ತಿ ತಯಾರಿಕೆ, ಆಹಾರ ಪದಾರ್ಥಗಳ ತಯಾರಿಕೆಯಂತಹ ವೃತ್ತಿ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಅದಲ್ಲದೆ ಸೈಕಲ್ ರಿಪೇರಿ, ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ, ಈಜು,ಕರಾಟೆ,ಕುಂಗ್ ಫು, ಆಟೋಟಗಳು ಮುಂತಾದವುಗಳ ಮೂಲಕ ಹೆಣ್ಣು ಅಬಲೆಯಲ್ಲ, ಸಬಲೆ ಎಂದು ಸಾರಲಾಗುತ್ತಿದೆ. ಮೀನಾ ತಂಡಗಳಲ್ಲಿ ಅತೀ ಚಟುವಟಿಕೆಯುಳ್ಳ ವಿದ್ಯಾರ್ಥಿನಿಯರಿದ್ದು ಊರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಸಾರುತ್ತಾರೆ. ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗೈರು ಹಾಜರಾದ ಮಕ್ಕಳ ಮನೆಗೆ ತೆರಳಿ ಶಾಲೆಗೆ ಬರಲು ಮನವೊಲಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಅನೇಕ ಅನುದಾನಗಳನ್ನು, ಪ್ರೋತ್ಸಾಹಕಗಳನ್ನು ಬಿಡುಗಡೆ ಮಾಡುತ್ತದೆ. ಹಿರಿಯ ಪ್ರಾಥಮಿಕಶಾಲೆಯ ಒಬ್ಬ ಮಾರ್ಗದರ್ಶಕ ಶಿಕ್ಷಕ/ಶಿಕ್ಷಕಿಯರು ಮೀನಾ ತಂಡ ಸೇರಿ ಈಎನ್.ಪಿ.ಇ.ಜಿ.ಇ.ಎಲ್ ಕಾರ್ಯಕ್ರಮವನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದಾರೆ.

ಬದಲಾವಣೆಯ ಗಾಳಿ :
   ಈ ಕಾರ್ಯಕ್ರಮ ಅನುಷ್ಠಾನಗೊಂಡ ವರ್ಷದಲ್ಲಿ ಗ್ರಾಮೀಣ ಶಾಲೆಗಳ ಶೈಕ್ಷಣಿಕ ಸ್ಥಿತಿ ಗತಿಗಳು ಬದಲಾಗಿವೆ. ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ  ತಿಳಿದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಪ್ರತಿದಿನ ತಪ್ಪದೇ ಶಾಲೆಗೆ ಕಳುಹಿಸುತ್ತಿದ್ದಾರೆ. ಮಹಿಳಾ ಶೋಷಣೆ, ಅನಕ್ಷರತೆ, ಮಹಿಳೆಯರಿಗೆ ಸಂಬಂಧಿಸಿದ ಮೂಢ ನಂಬಿಕೆಗಳು ಮಾಯವಾಗುತ್ತಿವೆ. ಇದಕ್ಕಾಗಿ ಸರ್ವ ಶಿಕ್ಷಣ ಅಭಿಯಾನ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಅಹರ್ನಿಶಿ ಪ್ರಯತ್ನಿಸಿ ಸುಂದರ ಯೋಜನೆಗಳನ್ನು ರೂಪಿಸಿವೆ. ಹೆಣ್ಣು ಮಕ್ಕಳಿಗೆ ಹಾಯೆನಿಸುವ ಶಾಲಾ ಕಟ್ಟಡಗಳು, ಪ್ರತ್ಯೇಕ ಶೌಚಾಲಯಗಳು, ಕಿಶೋರಿ ತರಬೇತಿಯಂತಹ ಆರೋಗ್ಯಕರ ಕಾರ್ಯಕ್ರಮಗಳನ್ನು ರೂಪಿಸಿ ಧನ್ಯತೆ ಮೆರೆದಿವೆ. ಲಿಂಗ ತಾರತಮ್ಯ, ಲೈಂಗಿಕ ಕಿರುಕುಳ, ಮಕ್ಕಳ ಸಾಗಾಣಿಕೆಯಂತಹ ಅಕ್ಷಮ್ಯ ಅಪರಾಧಗಳ ಬಗ್ಗೆ ಅರಿವು ಉಂಟಾಗಿದೆ. ಈ ಕಾರ್ಯಕ್ರಮದಿಂದಾಗಿ ಕುಗ್ರಾಮದ ಎಷ್ಟೋ ಹೆಣ್ಣು ಮಕ್ಕಳು ಶಾಲೆ ಸೇರಿ ತಮ್ಮ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಹಿಳಾ ಸಬಲೀಕರಣ ಕೇವಲ ಒಬ್ಬರಿಂದ ಸಾಧ್ಯವಾಗುವುದಿಲ್ಲ. ಸಮುದಾಯ,ಪೋಷಕರು ಹಾಗೂ ಸ್ವತಃ ಮಹಿಳೆಯರೂ ಇದಕ್ಕೆ ಟೊಂಕ ಕಟ್ಟಿ ನಿಲ್ಲ ಬೇಕಾಗಿದೆ. ಅದೇನೇ ಇರಲಿ. ಪ್ರಾಥಮಿಕ ಹಂತದಿಂದಲೇ ಹೆಣ್ಣು ಮಕ್ಕಳನ್ನು ವೃತ್ತಿಪರರನ್ನಾಗಿ ಹಾಗೂ ಸಮಾಜ ಮುಖಿಯರನ್ನಾಗಿ ಮಾಡುತ್ತಿರುವ ಶಿಕ್ಷಣ ಇಲಾಖೆಯ ಈ ಕಾರ್ಯ ಅಭಿನಂದನಾರ್ಹವಾದುದು.


                                                                   ---ಸಚಿನ್ ಕುಮಾರ ಬಿ.ಹಿರೇಮಠ


ನನ್ನ ವಿಳಾಸ :
ಸಚಿನ್ ಕುಮಾರ ಬಿ.ಹಿರೇಮಠ
  ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಚಿ
ಗ್ರಾಮ- ಕೊಡಚಿ, ಅಂಚೆ- ಸಾಥಖೇಡ
ತಾ-ಜೇವರ್ಗಿ, ಜಿ- ಗುಲ್ಬರ್ಗಾ
ಪಿನ್ - 585310
ಬ್ಲಾಗ್ ವಿಳಾಸ :
www.nammakodachishale.blogspot.com




Wednesday, 31 October 2012

Butterflies ಅಂದರೆ ಬರೀ ಚಿಟ್ಟೆಗಳಷ್ಟೇ ಅಲ್ಲ.....

ದು ನವದೆಹಲಿಯ ಏರ್ ಪೋರ್ಟಿನ ಎದುರಿನ ಕೊಳಕಾದ ರಸ್ತೆ. ಅಲ್ಲಿ ಚಿಂದಿ ಆಯುವ ಮಕ್ಕಳ ಒಂದು ಗುಂಪು. ಎಂಇನಂತೆ ತಮ್ಮಕೆಲಸ ಮಾಡುತ್ತಿರುವಾಗ ಹಳದಿ ಬಣ್ಣದ ವಾಹನವೊಂದು ಆ ರಸ್ತೆಗೆ ಬಂದಿತು. ಕೂಡಲೇ  ವಾಹನದಿಂದ ಮೂರ್ನಾಕ್ಲು ಜನ ಯುವಕರು ಕೆಳಗಿಳಿದು ಸುತ್ತೆಲ್ಲ ವೀಕ್ಷಿಸಿದರು. ಚಿಂದಿ ಆಯುವ ಆ ಮಕ್ಕಳ ದೃಷ್ಟಿಯು ಆ ಮೂರ್ನಾಲ್ಕು ಯುವಕರತ್ತ ಹೋಯಿತು. ಅಲ್ಲಿ ಸರಿಸುಮಾರು 12-18 ಮಕ್ಕಳಿರುವುದನ್ನು ಗಮನಿಸಿದ ಆ ಯುವಕರ ಗುಂಪು ಮತ್ತೇ ಆ ವಾಹನದೊಳಗೆ ಹೋಗಿ ಬಿಡಾರ ಹೂಡಲು ಬೇಕಾದ ಸಾಮಗ್ರಿಗಳನ್ನೆಲ್ಲ ಹೊರತೆಗೆದು ರಸ್ತೆಯ ಪಕ್ಕದಲ್ಲಿ ಒಂದು ಬಿಡಾರ ಹೂಡಿಯೇ ಬಿಟ್ಟರು. ಆ ಸುಂದರವಾದ ಬಿಡಾರ ನೋಡುತ್ತಲೇ ಅಲ್ಲಿದ್ದ ಚಿಂದಿ ಆಯುವ ಬೀದಿ ಮಕ್ಕಳು ಸಹಜವಾಗಿಯೇ ಬಿಡಾರದತ್ತ ಬಂದರು.  ಮಕ್ಕಳನ್ನು ಕಂಡ ಆ ಯುವಕರು ಪ್ರೀತಿಯಿಂದ ಅವರನ್ನು ಒಳಗೆ ಬರುವಂತೆ ವಿನಂತಿಸಿದರು. ಮಕ್ಕಳು ತುಸು ಹೊತ್ತು ತಮ್ಮ ಕೆಲಸ ಕಾರ್ಯಗಳನ್ನು ಮರೆತು ಬಿಡಾರದೊಳಗೆ ನಡೆದರು. ಆಗ ಅಲ್ಲಿ ನಡೆದಿದ್ದು ಮಾತ್ರ ವಿಸ್ಮಯ.
            ಇದುವರೆಗೂ ಹೇಳಿದ್ದು ಬರಿ ಒಂದು ಕತೆಯಲ್ಲ. ಅದೊಂದು ನೈಜ ಘಟನೆ. ನವದೆಹಲಿಯಲ್ಲಿ 1989ರಲ್ಲಿ ಪ್ರಾರಂಭವಾದ ಒಂದು ಸ್ವಯಂ ಸೇವಾ ಸಂಸ್ಥೆ . ಉತ್ಸಾಹಿ ಯುವಕ ಯುವತಿಯರಿಂದ ಸ್ಯಯಂ ಇಚ್ಛಾಶಕ್ತಿಯಿಂದ ಕೇವಲ ಬೀದಿಯಲ್ಲಿ ಅಲೆಯುವ ಮಕ್ಕಳ, ಹೊರಗಡೆ ದುಡಿಯುತ್ತಿರುವ ಮಕ್ಕಳು ಹಾಗೂ ಅನಾಥ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ  ಆರಂಭವಾದ ಒಂದು ಸರ್ಕಾರೇತರ ಸಂಸ್ಥೆ.
      ಅಸಲಿಗೆ ಅಲ್ಲಿ ಬಂದಿಳದ ವಾಹನ ಒಂದು ಶಾಲಾ ವಾಹನ. ಆ ಶಾಲಾ ವಾಹನದೊಳಗಿದ್ದ ಮೂರ್ನಾಲ್ಕು ಜನ ಯುವಕರು ಬರೀ ಯುವಕರಲ್ಲ. ಅವರು ನುರಿತ ಶಿಕ್ಷಕರು, ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕಾಗಿದ್ದ ಮೆಂಟರ್ ಗಳು. ಅವರು ಹೂಡಿದ್ದು ಬರೀ ಬಿಡಾರವಲ್ಲ. ಅದೊಂದು ಶಾಲಾ ತರಗತಿ. ಆ ಶಾಲಾ ವಾಹನವೇ ಒಂದು ಸಂಚಾರಿ ಶಾಲೆ. ಆ ಸಂಚಾರಿ ಶಾಲೆಯ ಹೆಸರು 'ಬಟರ್ ಫ್ಲಾಯಿಸ್'. ಅಂದರೆ ಚಿಟ್ಟೆಗಳು ಅಂತ.
            ಬಟರ್ ಫ್ಲಾಯಿಸ್ ಸಂಸ್ಥೆ ಯ ನಿರ್ದೇಶಕರಾದ ರೀಟಾ ಪಾನೀಕರ್ ಅವರು ಹೇಳುವಂತೆ "Butterflies are one of the nature's most beautiful creatures. So is child. Butterfly flits from flower to flower for their sustanance.Our children move constantly for their livelihood. Buterflies have very short lives. Street children have brief childhods.". ಅಂದರೆ ಬೀದಿ ಮಕ್ಕಳು ಥೇಟ್ ಚಿಟ್ಟೆಗಳ ಥರ.
        
        ಇಲ್ಲಿ ನಿರ್ದಿಷ್ಟವಾದ ಶಾಲಾ ಕಟ್ಟಡವಾಗಲೀ, ಕಾರ್ಯಾಲಯವಾಗಲೀ ಇಲ್ಲ. ಈ ಶಾಲಾ ವಾಹನ ನಗರಗಳಲ್ಲಿ ದುಡಿಯುತ್ತಿರುವ ಹಾಗೂ ಅನಾಥ ಮಕ್ಕಳನ್ನು ಹುಡುಕಿಕೊಂಡು ಸಂಚರಿತೊಡಗುತ್ತದೆ. ಎಲ್ಲಿ ಅಂತಹ ಮಕ್ಕಳು ಕಾಣಸಿಗುತ್ತಾರೋ ಅಂತವರನ್ನು ಮನವೊಲಿಸಿ ತಮ್ಮ ಶಾಲಾ ವಾಹನಕ್ಕೆ ತುಂಬಿಸಿಕೊಳ್ಳುತ್ತದೆ. ಅಲ್ಲಿನ ಮೆಂಟ್ ಗಳು ಮೊದಲು 6ರಿಂದ 14 ವಯಸ್ಸಿನ ಮಕ್ಕಳನ್ನು ವಿಭಾಗಿಸಿ ಅವರವರ ವಯೋಗುಣಕ್ಕೆ ತಕ್ಕಂತೆ ಮೊದಲೇ ಸಿದ್ಧ ಪಡಿಸಿದ ಪಾಠಯೋಜನೆಯ ಮೂಲಕ ಪಾಠ ಬೋಧನೆ ಮಾಡುತ್ತಾರೆ. ಹೀಗೆ ಈ ಪ್ರಕ್ರಿಯೆ ಸುಮಾರು ತಿಂಗಳುಗಳ ಕಾಲ ನಡೆಯುತ್ತದೆ. ಮುಂದೆ ಆಯಾ ಸಾಮರ್ಥ್ಯಗಳನ್ನು ಮಕ್ಕಳು ಗಳಿಸಿಕೊಂಡ ಮೇಲೆ ಔಪಚಾರಿಕ ಶಿಕ್ಷಣ ಸಂಸ್ಥೆಗಳಿಗೆ ಅಥವಾ ಸರ್ಕಾರಿ ಶಾಲೆಗಳಿಗೆ ಅಂತಹ ಮಕ್ಕಳನ್ನು ಸೇರಿಸಲಾಗುತ್ತದೆ.
  ಸುಮಾರು 23 ವರ್ಷಗಳೀಂದ ಈ ಸಂಸ್ಥೆ ಹಲವಾರು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು,ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಶಿಕ್ಷಣ ಪ್ರೇಮಿಗಳ ಬೆಂಬಲದಿಂದ ತನ್ನ ಈ ಅದಮ್ಯವಾದ ಕಾಯಕವನ್ನು ಮಾಡುತ್ತ ಬಂದಿದೆ.
   ಎಲ್ಲಾ ಸೌಲಭ್ಯವಿದ್ದು ನಮ್ಮ ಶಾಲೆಗಳು ಹಾಗೂ ನಮ್ಮ ಶಿಕ್ಷಕರು ಚಿಟ್ಟೆಗಳಿಂದ ಕಲಿಯುವುದು ಬಹಳವಿದೆ ಅಂತ ಅನ್ನಿಸಲಾರದು

Wednesday, 5 September 2012

Teachers day...

One thing i wanna say is if u can read what i have written,then U must thank your teacher. They not only teach you,bt also make u to behave n change urself for society.I really proud to b a teacher.

Teacher's day...

Wel I'm off the school.But I'm remembering my teachers. On this occassion I remember my teachers Smt.V.S.Handigol,Smt.R.A.Kulkarni,Sri.B.P.Kiragi.These r my life builders.They changed my life.They picturised their ideals on me.
(contd...)

Thursday, 30 August 2012

ಶಿಕ್ಷಕರು ಹೀಗಿರಬೇಕು..

 ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ, ವಿದ್ಯಾರ್ಥಿ ಹಾಗೂ ಕಲಿಕಾ ಪರಿಸರ ಈ ಮೂರು ಶೃಂಗಗಳು ಸಮನ್ವಯಗೊಂಡಲ್ಲಿ ಮಾತ್ರ ಕಲಿಕೆ ಪರಿಣಾಮಕಾರಿಯಾಗಬಲ್ಲುದು. ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ವರ್ತನೆಯನ್ನು ಉಂಟು ಮಾಡಲು ಶಿಕ್ಷಕ ತನ್ನನ್ನು ತಾನು ಪರಿಷ್ಕೃತಗೊಳಿಸುತ್ತ ಕಲಿಕಾ ಪರಿಸರವನ್ನು ಆರೋಗ್ಯಕರ ಪರಿಸರವನ್ನಾಗಿ ಮಾಡಬೇಕಾಗಿದೆ.
ಮೂರು ಪ್ರಶ್ನೆಗಳು:
           ಶಿಕ್ಷಕರಾದವರು ಹಾಗೂ ಶಿಕ್ಷಕರಾಗ ಬಯಸುವವರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಗಳೀವೆ ಎಂದು ಅಭಿಪ್ರಾಯ ಪಡುತ್ತಾರೆ ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ. ಈ ಮೂರು ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಹೌದು' ಎಂದಾದರೆ ಮಾತ್ರ ಶಿಕ್ಷಕರಾಗಲು ಸೂಕ್ತ.
ಆ ಪ್ರಶ್ನೆಗಳು ಹೀಗಿವೆ:
ಪ್ರ1.ನಾನು ಕಲಿಸಬೇಕಾದ ವಿಷಯದ ಬಗ್ಗೆ ನನಗೆ ಸೂಕ್ತ ತಿಳುವಳಿಕರ ಇದೆಯೇ?
ಪ್ರ2. ನಾನು ನನ್ನ ವೃತ್ತಿಯನ್ನು ನಿಜವಾಗಿಯೂ ಪ್ರೀತಿಸುತ್ತೆನೆಯೇ?
ಪ್ರ3. ನನ್ನ ವಿದ್ಯಾರ್ಥಿಗಳನ್ನು ನಾನು ನನ್ನ ಸ್ವಂತ ಮಕ್ಕಳಂತೆಯೇ ಕಾಣುತ್ತೇನೆಯೇ?
   ಈ ಮೂರು ಪ್ರಶ್ನೆಗಳಿಗೆ ನಮ್ಮ ಉತ್ತರ ಹೌದಾದರಷ್ಟೇ ಸಾಲದು. ಉತ್ತಮ ಶಿಕ್ಷಕನಾಗಲು ಇನ್ನೂ ಕೆಲವು ಅಂಶಗಳಿವೆ. ಅವು ಹೀಗಿವೆ:
1.ಕಲಿಸುವ ಜಾಣ್ಮೆ :
ತಾನು ಕಲಿಸಬೇಕಾದ ವಿಷಯವನ್ನು ತನ್ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸುವ ಜಾಣ್ಮೆ ಶಿಕ್ಷಕನಿಗಿರಬೇಕು.
2.ವಿದ್ಯಾರ್ಥಿಗಳ ಬಗೆಗಿನ ಪ್ರೀತಿ :
ವಿದ್ಯಾರ್ಥಿಗಳ ಮೇಲೆ ಅತೀವವಾದ ಪ್ರೀತಿ ಶಿಕ್ಷಕನಿಗಿರಬೇಕು. ಯಾವುದೇ ರೀತಿಯ ಚಟುವಟಿಕೆಗಳು ಪ್ರೀತಿಯಿಂದಲೇ ಸಾಗಿಸುವಂತಹ ಕಲೆ ಗೊತ್ತಿರಬೇಕು.
3.ವಿಷಯದ ಬಗೆಗಿನ ಪ್ರೀತಿ :
ಶಿಕ್ಷಕ ತಾನು ಕಲಿಸುವ ವಿಷಯವನ್ನು ಪ್ರೀತಿಸಬೇಕು. ಏಕೆಂದರೆ ಒಂದು ವಿಷಯದ ಬಗೆಗಿನ ಪ್ರೀತಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಲ್ಲುದು.
4.ಮಕ್ಕಳ ಬದುಕಿನಲ್ಲಿ ಶಾಲೆಯ ಮಹತ್ವವನ್ನು ಅರಿಯುವುದು :
ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಶಾಲೆ ಯಾವ ರೀತಿ ಮಹತ್ವವಳ್ಳದ್ದಾಗಿದೆ ಎಂಬುದನ್ನು ಅರಿಯಬೇಕು. ಶಾಲಾ ಆವರಣ, ಆಟಗಳು, ಪಾಠಗಳು - ಹೀಗೆ ಶಾಲೆ ಮಕ್ಕಳನ್ನು ಯಾವ ಯಾವ ಕ್ಷೇತ್ರಗಳಲ್ಲಿ ಬಲಯುತಗೊಳಿಸಬಹುದೆಂಬುದನ್ನು ಶಿಕ್ಷಕರು ಅರಿತಿರಬೇಕು. ಇದರಿಂದ ಶಿಕ್ಷಕರಿಗೆ ತಮ್ಮ ಕಾರ್ಯಕ್ಷೇತ್ರದ ಅರಿವಾಗುತ್ತದೆ.
5.ಬದಲಾಯಿಸುವ ಇಚ್ಛಾಶಕ್ತಿ :
'ನಾನು ನನ್ನ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಬದಲಾಯಿಸಬಲ್ಲೆ' ಎಂಬ ಮನೋಭಾವ ಮತ್ತು ಅದರೆಡೆಗಿನ ಇಚ್ಛಾಶಕ್ತಿ ಶಿಕ್ಷಕನಿಗಿರಬೇಕು. ಮೊದಮೊದಲು ಕಲಿಕಾ ಕೊರತೆ, ಶೈಕ್ಷಣಿಕ ಕೊರತೆ ಹಾಗೂ ಭೌತಿಕ ಕೊರತೆಗಳನ್ನು ಗಮನಿಸಿ ಅದನ್ನು ಬದಲಾಯಿಸಬಲ್ಲ ಇಚ್ಛಾಶಕ್ತಿ ಪ್ರಬಲವಾದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬಲ್ಲುದು.
6.ಪ್ರತಿಫಲಿಸುವ ಇಚ್ಛಾಶಕ್ತಿ :
ವಿದ್ಯಾರ್ಥಿ ಶಾಲೆಯಲ್ಲಿ  ಕಲಿತ ವಿಷಯವನ್ನು ಸಮಾಜದ ಆಗು ಹೋಗುಗಳೊದಿಗೆ ತಾಳೆ ನೋಡಿ ಧನಾತ್ಮಕವಾಗಿ ವರ್ತಿಸಿದರೆ ಶಿಕ್ಷಣದ ಗುಣಗಳು ಪ್ರತಿಫಲಿಸಿವೆ ಎಂದರ್ಥ.ಒಂದು ಸಮಾಜ ಹೇಗೆ ಇರಬೇಕು ಎಂಬುದನ್ನು ಶಿಕ್ಷಕ ನಿರ್ಧರಿಸಿ ಅದನ್ನು ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೂಲಕ ಪ್ರತಿಫಲಿಸಬೇಕು.
7.ಸಂಘಟನಾ ಗುಣ:
ವಿದ್ಯಾರ್ಥಿಗಳನ್ನು ಒಂದು ಉತ್ತಮ ಭವಿಷ್ಯಕ್ಕಾಗಿ ಸಂಘಟಿಸುವ ಗುಣ ಶಿಕ್ಷಕನಿಗಿರಬೇಕು. ಅದಕ್ಕಾಗಿ ಸೇವಾದಲ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್ ಸಿ ಸಿ ಯಂತಹ ಚಟುವಟಿಕೆಗಳನ್ನು ನಡೆಸಬೇಕು.
8. ಸಹೋದ್ಯೋಗಿ ಮತ್ತು ಸಮಾಜದ ಇತರರನ್ನು ಅರಿಯುವುದು:
ಶಿಕ್ಷಕರಾದವರು ತಮ್ಮ ಜೊತೆಗೆ ಸೇವೆ ಸಲ್ಲಿಸುವ ಹಾಗೂ ಸಮಾಜದ ಇತರ ವ್ಯಕ್ತಿಗಳೊಂದಿಗೆ ಉತ್ತಮವಾಗಿ ಹಾಗೂ ಶಾಂತವಾಗಿ ವ್ಯವಹರಿಸುವ ಗುಣ ಶಿಕ್ಷಕರಿಗಿರಬೇಕು.

     ಇವು ಶಿಕ್ಷಕರಿಗಿಬೇಕಾದ ಕನಿಷ್ಠ ಗುಣಗಳು ಎಂದರೆ ತಪ್ಪಾಗಲಾರದು. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಈ ಗುಣಗಳನ್ನು ಅಳವಡಿಸಿಕೊಳ್ಳಲಿ ಎಂದು ಹಾರೈಸುತ್ತ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.










Wednesday, 22 August 2012

Thank you Internet;What i wamt i got

But i felt how could i reach to my pupils.Then by d end of school i searched for videos of biology.I got some vldeos n watched them in our school tv.it my pupils were happx

Thanks to Internet..What I wanted I got...

Teaching 6th and 7th class about organisms and there features is really gr8 task.Well i was teaching types of vertebrates and photosynthesis in plants.I used lot of pics,charts n some models.But i was little bit unsatisfied that wat did pupils learn.
(cont

Thanks to Internet..What I wanted I got...

Teaching 6th and 7th class about organisms and there features is really gr8 task.Well i was teaching types of vertebrates and photosynthesis in plants.I used lot of pics,charts n some models.But i was little bit unsatisfied that wat did pupils learn.
(cont

Tuesday, 21 August 2012

What's an Environment?Discussion2

My students got saying dat wat r living n nonliving things as they knew.They also discusd that hw both r dependent each other.Bt d thing which i guided ws wat r d features of living things.Wel discussion makes my teaching easy n effective learning.
(cntd..

What is an environment? Pupils discussion1

As I entered into 5th class,every student were staring at me.Bcz i'm gonna teach abt Environment n its components.I brought a model zoo n garden as wel as sm pictures to make my pupil feel joy of learning.Bt they're too intel dat they told me lot.
(cont..)

Oduve Naavu..(I will read)

DPI implemented a prgrm 'Oduve nanu', is a reinforcement of reading skill.In our school we used to read d reading cards in a period.Acrndng to reding levels all teachers makes every1 to read with gr8 enjoyment.A friendly guidence is given to all.

Monday, 20 August 2012

Class6th and 7th Maths; Concept of Number Line-part 2

(continued..)
Get ur pupils to upstairs or just show a model of it.Centre of it,mark '0'.Upstairs to 0,mark +1,+2,+3...on each step.Similarly,downstairs to 0,mark -1,-2,-3....respctly..It could b easy to understand.Just get off frm Classic.Be innovative..

Class6th and 7th; Concept of Number Line-part1

Number line is a line with equal units on its where as -ve intigers lie left side of zero n +ve intigers lie on right.It ws introduced by German mathematician Richard Dedicend.This concept is easily taught with 'upstairs'.
(continued...)

Drama in Primary education

Most of classes, teachers experience teaching problems while teaching particular concept.In such cases dramas help lot.Dramas have both expression n acting,it gives lot of entertainment n pleasure.Pupils learn difficult concepts unknowingly with dialogues.
We all teachers consolidated d data of 1 to 7th for School dise format. Well subject teachers training is going on in BRC.Its really glad to get training about New syllabus.
-Sachinkumar B.Hiremath

Fw: ಕವಿತೆ


  -ರಾತ್ರಿ 
ನಟ್ಟಿರುಳ ಕತ್ತಲಿಗೆ 
ಕೆಂಪ ಚೆಲ್ಲಿದ ಕುರುಹು..!
ಮಿನುಗುತಿದೆ ಅಲ್ಲೊಂದು 
ಒಂಟಿ ದೀಪದ ನೆರಳು..!
ಜೀ ಗುಡುವ ಕಾನನಕೆ 
ಹಕ್ಕಿ ಪಿಕ್ಕಿಯ ಉಲಿಯು..!
ಅರೆಗಣ್ಣ ಮಂಪರಿಗೆ 
ಮುರಿದ ಕನಸಿನ ಜೋಂಪು..!
ಸಾಕಲ್ಲ ಮಲಗೇಳಲಿಕ್ಕೆ ಬೆಕಿನ್ನೆಸ್ಟು ಹೊತ್ತು..!
     -ಮಹಾಂತೇಶ ದೊಡ್ಡಮನಿ 


Wednesday, 15 August 2012

ಜ್ಞಾನದ ಸಂದೇಶ ಹರಡುವ ಶಿಕ್ಷಕ..

ಶ್ರೀ ಸೋಮಶೇಖರ ಬೆಳ್ಳುಬ್ಬಿ ಅವರ ಕುರಿತಾದ ಪ್ರಕಟಿತ ಲೇಖನ(ದಿ.6ನೇ ಆಗಸ್ಟ್,2012)

ಸ್ವಾತಂತ್ರ್ಯೋತ್ಸವದ ಸಂಭ್ರಮ...



























 ಇಂದು 66ನೇ ಸ್ವಾತಂತ್ರ್ಯೋತ್ಸವ. ನಮ್ಮ ಕೊಡಚಿ ಶಾಲೆಯಲ್ಲಿ ಎಲ್ಲೆಲ್ಲೂ ಸಂಭ್ರಮ. ಬೆಳಿಗ್ಗೆ 5ರಿಂದರೇ ಧ್ವಜಾರೋಹಣದ ತಯಾರಿ ಆರಂಭವಾಗಿತ್ತು. ಕೋಲಾಟ,ಜಾನಪದ ನೃತ್ಯ, ದೇಶಭಕ್ತಿ ಗೀತೆ 'ಮೂರ್ಖತನದ ಬೆಲೆ' ಎಂಬ ನಾಟಕ ಪ್ರದರ್ಶನಗೊಂಡವು. ಸಾಲೆಯ ಮುಖ್ಯೋಪಾದ್ಯಾರಯಾದ ಶ್ರೀ ಹರಿಶ್ಚಂದ್ರ ,ಸಹ ಶಿಕ್ಷಕರಾದ ಶ್ರೀ ಜಿ.ಗೋಣೆಪ್ಪ, ಶ್ರೀ ಸಚಿನ್ ಕುಮಾರ ಹಿರೇಮಠ ಹಾಗೂ ಕು.ಮಂಜುನಾಥ ಹಾಗೂ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಈ ಸುಂದರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿ ಈ ಛಾಯಾಚಿತ್ರಗಳು...






Monday, 6 August 2012

ಬೆಳಕು ಮೂಡಿಸಿದ ಶಿಕ್ಷಕ ಬೆಳ್ಳುಬ್ಬಿ...



ವಿಜ್ಞಾನ ಮತ್ತು ತಂತ್ರಜ್ಞಾನದ ಕಬಂಧಬಾಹುಗಳಲ್ಲಿ ಜಗತ್ತು ಚಿಕ್ಕದಾಗುತ್ತಿದೆ. ಸತ್ಯ ಮತ್ತು ಸಂಶೋಧನೆ ನಿರಂತರವಾಗಿ ಈ ಯುಗದ ಪರಿಪಾಟವಾಗಿಬಿಟ್ಟಿದೆ. ಜ್ಞಾನ ಪ್ರಸಾರದ ಹಾದಿ ಹಿಂದಿಗಿಂತಲೂ ಸುಗಮವಾಗುತ್ತಲಿದೆ. ಹಿಂದೊಮ್ಮೆ ಬೇಕಾದ ಮಾಹಿತಿಯನ್ನು ಪಡೆಯಲು ಕೆಲದಿನಗಳೇ ಬೇಕಾಗುತ್ತಿದ್ದವು. ಆದರೆ ಇಂದು ಒಂದು ಬೆರಳ ತುದಿಯಂಚಿಗೆ ಬೇಕಾದ ಮಾಹಿತಿ ಲಭ್ಯವಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಧ್ಯೇಯವೆಂದರೆ ಸಮಾಜಕ್ಕೆ ಒಳಿತಾಗಬೇಕೆಂಬುದು. ಇಂಥ ವಿಜ್ಞಾನ ಮತ್ತು ತಂತ್ರಜ್ಞಾನದ ಸುಗಮ ಆವಿಷ್ಕಾರವೆಂದರೆ ಮೊಬೈಲ್ ಪೋನ್. ಸ್ಮಾರ್ಟ್ ಫೋನ್,ಐಪಾಡ್,ಐಪೊನ್ ಟ್ಯಬ್ಲೆಟ್ ಕಂಪ್ಯುಟರ್ ನಂತಹ ಚತುರ್ವಾಣಿಗಳನ್ನು ಸಾಮಾನ್ಯರಿಗೆ ಬಳಸಲು ಎಲ್ಲೋ ಅಲ್ಪ ಸ್ವಲ್ಪ ತೊಂದರೆ. ಆದರೆ ಸಾಮಾನ್ಯ ಜಂಗಮವಾಣಿಯನ್ನು ಎಲ್ಲರೂ ಬಲಸುತ್ತಾರೆ. ಆದರೆ ಜಮಗಮವಾಣಿಗಳನ್ನು ಬರೀ ಸಂಭಾಷಿಸಲು ಅವರಿವರಿಗೆ ಬರೀ ಕಿಚಾಯಿಸಲು ಬಳಸುವವರೆ ಹೆಚ್ಚು. ಆದರೆ ಕೇವಲ ಒಂದು ಮೊಬೈಲ್ ಫೋನಿನಿಂದ ಒಂದು ಸ್ಪರ್ಧಾತ್ಮಕ ಸಮುದಾಯದ ಅಭಿಲಾಷೆಗಳನ್ನು ಈಡೇರಿಸುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ 'ಬನಹಟ್ಟಿ' ಪಟ್ಟಣದ ೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಸೋಮಶೇಖರ ಮಲ್ಲಪ್ಪ ಬೆಳ್ಳುಬ್ಬಿ ಅವರು ಯಶಸ್ವಿಯಾಗಿದ್ದಾರೆ. ಅವರು ಮೊಬೈಲ್ ಫೋನ್ ನ್ನು ಬಳಸಿಕೊಂಡ ರೀತಿಯೇ ವಿಭಿನ್ನ ಮತ್ತು ಶ್ಲಾಘನೀಯ. ಮೊಬೈಲ್ ಫೋನಿನಲ್ಲಿ ಇರುವ ಕಿರು ಸಂದೇಶ ಸೇವೆ(sms)ಯನ್ನು ಇವರು ಜ್ಞಾನ ಪ್ರಸಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿದಿನವೂ ಸಾಮಾನ್ಯ ಜ್ಞಾನದ ಸಂದೇಶಗಳನ್ನು 'freegksms' ಎಂಬ ಖಾತೆಯ ಮೂಲಕ ಸಾವಿರಾರು ಸ್ನೇಹಕೂಟಕ್ಕೆ ತಲುಪಿಸುತ್ತಿದ್ದಾರೆ. 

ಸಾಧನೆಯ ಪರಿ...
ಶ್ರೀ ಸೋಮಶೇಖರ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ತಯಾರಿ ನಡೆಸುವಾಗ ಸಾಮಾನ್ಯ ಜ್ಞಾನದ ವಿಷಯದ ಬಗ್ಗೆ ತುಂಬಾ ಪರದಾಡುವಂತಾಗಿತ್ತು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಲ್ಲರೂ ನಿಗದಿತ ಯಶಸ್ಸನ್ನು ಸಾಧಿಸಲು ಕೇವಲ ಅಧ್ಯಯನ ಅಷ್ಟೇ ಸಾಲದು, ಅಂದು ಬಗೆಯ ಚರ್ಚೆಯು ಬೇಕು ಎಂಬುದನ್ನು ಮನಗಂಡರು. ಆದರೆ ದುರದ ಊರಿನಲ್ಲಿರುವ ಗೆಳೆಯರೊಂದಿಗೆ ಹೇಗೆ ಚರ್ಚಿಸುವುದು ? ಆಗ ಶ್ರೀ ಸೋಮಶೇಖರ ಅವರು ಈ ಮೊಬೈಲ್ sms ನ ಮೊರತೆ ಹೋಗಿದ್ದು. ತರಬೇತರಿಯ ಜೊತೆಗೆ ತಮ್ಮಮ ಮೊಬೈಲಿನಿಂದ ಸಾಮಾನ್ಯ ಜ್ಞಾನದ ಪ್ರಶ್ನೆ ಮಾಹಿತಿಗಳನ್ನು ತಮ್ಮ ಗೆಳೆಯರ ಬಳಗದಲ್ಲಿ ಆರಂಬಭಿಸಿದರು. ಇದರಿಂದಾಗಿ ಗೆಳೆಯರ ಬಳಗದಲ್ಲಿ ಕೆಲವರು ಹಾಗೂ ಶ್ರೀ ಸೋಮಶೇಖರ ಅವರು ಪ್ರಾಥಮಿಕಶಾಲಾ ಶಿಕ್ಷಕರಾಗಿ ಆಯ್ಕೆಯಾದರು. ಆದರೆ ಈ ಯಶಸ್ಸು ಕೇವಲ ತಮಗಷ್ಟೇ ಸೀಮಿತವಾಗಬಾರದೆಂದು ತಿಳಿದು ಅವರಿಗೆ ಪರಿಚಯವಿರುವ ಎಲ್ಲರಿಗೂ ಹಾಗೂ ಡಿ.ಎಡ್,ಬಿಎಡ್,ಪಿಎಸ್ ಐ,ಎಸ್.ಡಿ.ಎ, ಎಫ್.ಡಿ.ಎ, ಕೆಎಎಸ್,ಐಎಎಸ್ ಮುಂತಾದ ಸ್ಪರ್ಧಾರ್ತಿಗಳಿಗೆ ಎಸ್ಸೆಮ್ಮೆಸ್ ಕಳುಹಿಸಲಾರಂಭಿಸಿದರು. ಆದರೆ ದಿನಕ್ಕೆ ಕೇವಲ 200 sms ಮಾತ್ರ ಕಳುಹಿಸಬಹುದುಹಾಗೂ ಕೇವಲ 200 ಮಂದಿಗೆ ಮಾತ್ರ sms  ತಲುಪುವುದನ್ನು ಕಂಡು ಶ್ರೀ ಸೋಮಶೇಖರ ಅವರಿಗೆ ತೃಪ್ತಿಯಾಗಲಿಲ್ಲ. ಆಗ ಅವರು www.mytoday.com ಎಂಬ ಜಾಲ ತಾಣದ ಮೂಲಕ 'getgk' ೆಂಬ ಚಾನೆಲ್ ಆರಂಭಿಸಿದರು.ಇದರ ಮೂಲಕ ಚಂದಾರಾರರಿಗೆ(ಉಚಿತ) ಪ್ರತಿ ದಿನ ಸಾಕಷ್ಟು sms ಗಳನ್ನು ಕಳಿಸಲಾರಂಭಿಸಿದರು. ಇನ್ನೇನು ಯಶಸ್ಸಿನ ಹಾದಿ ಅನತಿ ದೂರದಲ್ಲಿರುವಾಗಲೇ www.mytoday.com ತನ್ನ ಕಾರ್ಯ ನಿಲ್ಲಿಸಿಬಿಟ್ಟಿತು.

ಮತ್ತೊಂದು ಶ್ರಮ..
ಶ್ರೀ ಸೋಮಶೇಖರ  ಅವರು ನಿರಂತರ ಉತ್ಸಾಹಿ. ಅಂತರ್ಜಾಲವನ್ನೆಲ್ಲ ಜಾಲಾಡಿ www.smsgupshup.com ಎಂಬ ಸಂದೇಶ ಜಾಲತಾಣದಲ್ಲಿ ತಮ್ಮದೇ ಆದ 'freegksms' ಎಂಬ ಚಾನೆಲ್ ಆರಂಭಿಸಿದರು. ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳಿಂದ  ಸಂದೇಶಗಳನ್ನು ಒಂದು ಬಾರಿ 'freegksms' ಚಾನೆಲ್ ಗೆ ಕಳುಹಿಸಿದರೆ ಇದರ ಚಂದಾದಾರರಿಗೆ ಏಕಕಾಲದಲ್ಲಿ ಮಾಹಿತಿ ತಲುಪುವಂತಾಯಿತು. ಆಗ ಶ್ರೀ ಸೋಮಶೇಖರ ಅವರು ಪ್ರಚಲಿತ ವಿದ್ಯಮಾನಗಳು, ಮಹತ್ವದ ಅಂಶಗಳು, ಸಾಧಕರು, ಅವರ ಸಾಧನೆಗಳು,ಕಾನೂನಿನ ಸಂಗತಿಗಳು ಹೀಗೆ ಎಲ್ಲದರ ಕುರಿತಾದ  ಮಾಹಿತಿಗಳನ್ನು sms ಮೂಲಕ 'freegksms' ನ ಸದಸ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಈ ಚಾನೆಲ್ಲಿಗೆ ಸುಮಾರು 3000 ಜನರು ಸದಸ್ಯತ್ ಪಡೆದುಕೊಂಡದ್ದನ್ನು ಗಮನಿಸಿದರೆ ಆ ಚಾನೆಲ್ಲಿನ ಪ್ರಾಮುಖ್ಯತೆ ಅರಿವಾಗುತ್ತದೆ. ಮುಂದೆ ಇದರಿಂದ ಉತ್ಸಾಹಗೊಂಡು www.labs.google.co.in/smschannels ನಲ್ಲು 'jnanavedike' ಎಂಬ ಚಾನೆಲ್ ಆರಂಭಿಸಿದರು. ಇಷ್ಟೆಲ್ಲ ಆದರೂ ಶ್ರೀ ಸೋಮಶೇಖರ ಅವರಿಗೆ ಸಮಾಧಾನವಿರಲಿಲ್ಲ. ಇನ್ನೂ ವೇಗವಾಗಿ ಸಾಮಾನ್ಯ ಜ್ಞಾನದ sms ಗಳೂ ಜನರನ್ನು ತಲುಪಬೇಕು ಹಾಗೂ ಹೆಚ್ಚು ಹೆಚ್ಚು sms ಗಳು ಬೇಕು ಎಂಬ ಅವರ ದಾಹಕ್ಕೆ ನೀರೆರೆದದ್ದು www.twitter.com ಎಂಬ ಸಾಮಾಜಿಕ ಜಾಲತಾಣ. ಟ್ವಿಟ್ಟರ್ ಮೂಲಕ 'freegksms' ಎಂಬ ಖಾತೆ ತೆರೆದು ಅದರ ಮೂಲಕ ಇಡೀ ಸಾಮಾನ್ಯ ಜ್ಞಾನದ ವಿಷಯಗಳನ್ನು ಪಸರಿಸಲಾರಂಭಿಸಿದರು. ಅದೂ ಉಚಿತವಾಗಿ. ಜೊತೆಗೆ ಇವರ ಗೆಳೆಯರಾದ  ಶ್ರೀ ಆರ್.ವಿ.ಬಾಗೇವಾಡಿ ಅವರು ಮಾನಸಿಕ ಸಾಮರ್ಥ್ಯ ವಿಷಯದ ಬಗ್ಗೆ ಜವಾಬ್ದಾರಿ ಹೊತ್ತು 'freegksms' ನ್ನು ಜನಪ್ರಿಯಗೊಳಿಸಿದ್ದಾರೆ.
        ಶ್ರೀ ಸೋಮಶೇಖರ ಅವರು ಕೇವಲ sms ಮಾತ್ರ ಕಳುಹಿಸುವುದಿಲ್ಲ. ಬದಲಿಗೆ 'freegksms' ಖಾತೆಯ ಸದಸ್ಯರಿಗೂ ಸಾಮಾನ್ಯ ಜ್ಞಾನದ ಮಾಹಿತಿಗಳನ್ನು upload ಮಾಡಲು ಅವಕಾಶ ನೀಡುತ್ತಾರೆ.online  ಪರೀಕ್ಷೆ ಬರೆದವರ ಹಾಗೂ offline  ಪರೀಕ್ಷೆ ಬರೆದವರ ಅನುಭವಗಳನ್ನು sms  ಮೂಲಕ ಚರ್ಚಿಸುತ್ತಾರೆ. 

freegksms ನ ಸದಸ್ಯರಾಗುವುದು ಹೇಗೆ?
ಯಾರು ಬೇಕಾದರೂ freegksmsನ ಸದಸ್ಯರಾಗಬಹುದು. airtel,tat docomo ಹಗೂ reliance  ನಂಬರ್ ಬಳಕೆದಾರರು FOLLOWFREEGKSMS ಆಂತ 53000 ಗೆ sms ಮಾಡಬೇಕು.ಈ sms ಗೆ ಕೇವಲ 1ರೂ. ಚಾರ್ಜ್ ಆಗುತ್ತದೆ. ಬೇರೆ ಕಂಪನಿಯ ಬಳಕೆದಾರರು JOINFREEGKSMS ಎಂದು 9291592915 sms ಕಳುಹಿಸಿದರೆ 'freegksms' ನ ಸದಸ್ಯತ್ವ ಸಿಗುತ್ತದೆ. ಮುಂದೆ ನಿತಂತರವಾಗಿ ುಚಿತ smsಗಳು ಬರಲಾರಂಭಿಸುತ್ತವೆ.
ಮತ್ತೇನಿದೆ freegksms ನಲ್ಲಿ..?
ಇದರ ಸದಸ್ಯತ್ವ ಪಡೆದವರ ಮೊಬೈಲಿಗೆ @freegksms  ಎಂದು 53000 ನಿಂದ ಸಾಮಾನ್ಯ ಜ್ಞಾನದ sms ಗಳು ಆಯ್ಕೆಗಳೊಂದಿಗೆ ಬರುತ್ತವೆ. ಸದಸ್ಯರು ಉತ್ತರವನ್ನು ಶ್ರೀ ಸೋಮಶೇಖರ ಅವರ ಮೊಬೈಲ್ ನಂಬರ್ರಿಗೆ ಕಳುಹಿಸಬೇಕು.  ಶ್ರೀ ಸೋಮಶೇಖರ ಅವರು ವೇಗವಾಗಿ ಸರಿಯುತ್ತರ ಕಳುಹಿಸುವವರ ಹೆಸರನ್ನು ಪ್ರಕಟಿಸುತ್ತಾರೆ. 
  ಇದಲ್ಲದೆSSLC ವಿದ್ಯಾರ್ಥಿಗಳಿಗೂ ವರದಾನವಾಗುವಂತೆ ಶ್ರೀ ಆರ್.ವಿ.ಬಾಗೇವಾಡಿಯವರ ಸಹಾಯದಿಂದ 'sslctimes  ಎಂಬ ಖಾತೆಯು ಲಭ್ಯವಿದೆ. ಇದರ ಸದಸ್ಯರಾಗಬಯಸುವವರು FOLLOWSSLCTIMES  ಎಂದು 53000 ಗೆ sms ಮಾಡಬೇಕು.
   ಇಂದಿನ ಸ್ಪರ್ಧಾತ್ಮಕ ಸಾಮಾನ್ಯ ಜ್ಞಾನ ಅತ್ಯವಶ್ಯ.ಶ್ರೀ ಸೋಮಶೇಖರ ಬೆಳ್ಳುಬ್ಬಿ ಅವರ ತಂಡವು ಉಚಿತವಾಗಿ sms ನೀಡುತ್ತ ಜನ ಮೆಚ್ಚುಗೆ ಗಳಿಸಿದೆ. ಕೈಯಲ್ಲಿ ಮೊಬೈಲ್ ಹಿಡಿದು ಅನಗತ್ಯ ಹರಟುತ್ತ ಕಾಲಹರಣ ಮಾಡುವ ಯುವಕರ ಮಧ್ಯೆ ಶಿಕ್ಷಕ ಶ್ರೀ ಸೋಮಶೇಖರ ಅವರ ಜ್ಞಾನ ಪ್ರಸಾರದ ಕಾಯಕ ನಿಜಕ್ಕೂ ಅಭಿನಂದನಾರ್ಹ. ಇವರ ಈ ಕಾಯಕಕ್ಕೆ ಮೆಚ್ಚಿ ಶ್ರೀ ಸೋಮಶೇಖರ ಅವರಿಗೆ ಶುಭ ಹಾರೈಸಲು 7676660500ಗೆ ಕರೆ ಮಾಡಬಹುದು. ಅವರ ಬ್ಲಾಗ್ www.freegksms.blogspot.com ಗೆ ಭೇಟಿ ನೀಡಿ,www.twitter.com/freegksmsನ್ನೂ ಜಾಲಾಡಬಹುದು.
                  
                                       ---ಸಚಿನ್ ಕುಮಾರ ಬಿ.ಹಿರೇಮಠ
                                          ಶಿಕ್ಷಕರು, 
                  

Thursday, 12 July 2012

We and you for school ; A Comunity meet on july 5,2012

 The day on 5th july 2012 we celebrate the main program  'We and you for school'. it's a community programme for comunity and the students and the teachers.. here are the some pics of the program.