Wednesday, 31 October 2012

Butterflies ಅಂದರೆ ಬರೀ ಚಿಟ್ಟೆಗಳಷ್ಟೇ ಅಲ್ಲ.....

ದು ನವದೆಹಲಿಯ ಏರ್ ಪೋರ್ಟಿನ ಎದುರಿನ ಕೊಳಕಾದ ರಸ್ತೆ. ಅಲ್ಲಿ ಚಿಂದಿ ಆಯುವ ಮಕ್ಕಳ ಒಂದು ಗುಂಪು. ಎಂಇನಂತೆ ತಮ್ಮಕೆಲಸ ಮಾಡುತ್ತಿರುವಾಗ ಹಳದಿ ಬಣ್ಣದ ವಾಹನವೊಂದು ಆ ರಸ್ತೆಗೆ ಬಂದಿತು. ಕೂಡಲೇ  ವಾಹನದಿಂದ ಮೂರ್ನಾಕ್ಲು ಜನ ಯುವಕರು ಕೆಳಗಿಳಿದು ಸುತ್ತೆಲ್ಲ ವೀಕ್ಷಿಸಿದರು. ಚಿಂದಿ ಆಯುವ ಆ ಮಕ್ಕಳ ದೃಷ್ಟಿಯು ಆ ಮೂರ್ನಾಲ್ಕು ಯುವಕರತ್ತ ಹೋಯಿತು. ಅಲ್ಲಿ ಸರಿಸುಮಾರು 12-18 ಮಕ್ಕಳಿರುವುದನ್ನು ಗಮನಿಸಿದ ಆ ಯುವಕರ ಗುಂಪು ಮತ್ತೇ ಆ ವಾಹನದೊಳಗೆ ಹೋಗಿ ಬಿಡಾರ ಹೂಡಲು ಬೇಕಾದ ಸಾಮಗ್ರಿಗಳನ್ನೆಲ್ಲ ಹೊರತೆಗೆದು ರಸ್ತೆಯ ಪಕ್ಕದಲ್ಲಿ ಒಂದು ಬಿಡಾರ ಹೂಡಿಯೇ ಬಿಟ್ಟರು. ಆ ಸುಂದರವಾದ ಬಿಡಾರ ನೋಡುತ್ತಲೇ ಅಲ್ಲಿದ್ದ ಚಿಂದಿ ಆಯುವ ಬೀದಿ ಮಕ್ಕಳು ಸಹಜವಾಗಿಯೇ ಬಿಡಾರದತ್ತ ಬಂದರು.  ಮಕ್ಕಳನ್ನು ಕಂಡ ಆ ಯುವಕರು ಪ್ರೀತಿಯಿಂದ ಅವರನ್ನು ಒಳಗೆ ಬರುವಂತೆ ವಿನಂತಿಸಿದರು. ಮಕ್ಕಳು ತುಸು ಹೊತ್ತು ತಮ್ಮ ಕೆಲಸ ಕಾರ್ಯಗಳನ್ನು ಮರೆತು ಬಿಡಾರದೊಳಗೆ ನಡೆದರು. ಆಗ ಅಲ್ಲಿ ನಡೆದಿದ್ದು ಮಾತ್ರ ವಿಸ್ಮಯ.
            ಇದುವರೆಗೂ ಹೇಳಿದ್ದು ಬರಿ ಒಂದು ಕತೆಯಲ್ಲ. ಅದೊಂದು ನೈಜ ಘಟನೆ. ನವದೆಹಲಿಯಲ್ಲಿ 1989ರಲ್ಲಿ ಪ್ರಾರಂಭವಾದ ಒಂದು ಸ್ವಯಂ ಸೇವಾ ಸಂಸ್ಥೆ . ಉತ್ಸಾಹಿ ಯುವಕ ಯುವತಿಯರಿಂದ ಸ್ಯಯಂ ಇಚ್ಛಾಶಕ್ತಿಯಿಂದ ಕೇವಲ ಬೀದಿಯಲ್ಲಿ ಅಲೆಯುವ ಮಕ್ಕಳ, ಹೊರಗಡೆ ದುಡಿಯುತ್ತಿರುವ ಮಕ್ಕಳು ಹಾಗೂ ಅನಾಥ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ  ಆರಂಭವಾದ ಒಂದು ಸರ್ಕಾರೇತರ ಸಂಸ್ಥೆ.
      ಅಸಲಿಗೆ ಅಲ್ಲಿ ಬಂದಿಳದ ವಾಹನ ಒಂದು ಶಾಲಾ ವಾಹನ. ಆ ಶಾಲಾ ವಾಹನದೊಳಗಿದ್ದ ಮೂರ್ನಾಲ್ಕು ಜನ ಯುವಕರು ಬರೀ ಯುವಕರಲ್ಲ. ಅವರು ನುರಿತ ಶಿಕ್ಷಕರು, ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕಾಗಿದ್ದ ಮೆಂಟರ್ ಗಳು. ಅವರು ಹೂಡಿದ್ದು ಬರೀ ಬಿಡಾರವಲ್ಲ. ಅದೊಂದು ಶಾಲಾ ತರಗತಿ. ಆ ಶಾಲಾ ವಾಹನವೇ ಒಂದು ಸಂಚಾರಿ ಶಾಲೆ. ಆ ಸಂಚಾರಿ ಶಾಲೆಯ ಹೆಸರು 'ಬಟರ್ ಫ್ಲಾಯಿಸ್'. ಅಂದರೆ ಚಿಟ್ಟೆಗಳು ಅಂತ.
            ಬಟರ್ ಫ್ಲಾಯಿಸ್ ಸಂಸ್ಥೆ ಯ ನಿರ್ದೇಶಕರಾದ ರೀಟಾ ಪಾನೀಕರ್ ಅವರು ಹೇಳುವಂತೆ "Butterflies are one of the nature's most beautiful creatures. So is child. Butterfly flits from flower to flower for their sustanance.Our children move constantly for their livelihood. Buterflies have very short lives. Street children have brief childhods.". ಅಂದರೆ ಬೀದಿ ಮಕ್ಕಳು ಥೇಟ್ ಚಿಟ್ಟೆಗಳ ಥರ.
        
        ಇಲ್ಲಿ ನಿರ್ದಿಷ್ಟವಾದ ಶಾಲಾ ಕಟ್ಟಡವಾಗಲೀ, ಕಾರ್ಯಾಲಯವಾಗಲೀ ಇಲ್ಲ. ಈ ಶಾಲಾ ವಾಹನ ನಗರಗಳಲ್ಲಿ ದುಡಿಯುತ್ತಿರುವ ಹಾಗೂ ಅನಾಥ ಮಕ್ಕಳನ್ನು ಹುಡುಕಿಕೊಂಡು ಸಂಚರಿತೊಡಗುತ್ತದೆ. ಎಲ್ಲಿ ಅಂತಹ ಮಕ್ಕಳು ಕಾಣಸಿಗುತ್ತಾರೋ ಅಂತವರನ್ನು ಮನವೊಲಿಸಿ ತಮ್ಮ ಶಾಲಾ ವಾಹನಕ್ಕೆ ತುಂಬಿಸಿಕೊಳ್ಳುತ್ತದೆ. ಅಲ್ಲಿನ ಮೆಂಟ್ ಗಳು ಮೊದಲು 6ರಿಂದ 14 ವಯಸ್ಸಿನ ಮಕ್ಕಳನ್ನು ವಿಭಾಗಿಸಿ ಅವರವರ ವಯೋಗುಣಕ್ಕೆ ತಕ್ಕಂತೆ ಮೊದಲೇ ಸಿದ್ಧ ಪಡಿಸಿದ ಪಾಠಯೋಜನೆಯ ಮೂಲಕ ಪಾಠ ಬೋಧನೆ ಮಾಡುತ್ತಾರೆ. ಹೀಗೆ ಈ ಪ್ರಕ್ರಿಯೆ ಸುಮಾರು ತಿಂಗಳುಗಳ ಕಾಲ ನಡೆಯುತ್ತದೆ. ಮುಂದೆ ಆಯಾ ಸಾಮರ್ಥ್ಯಗಳನ್ನು ಮಕ್ಕಳು ಗಳಿಸಿಕೊಂಡ ಮೇಲೆ ಔಪಚಾರಿಕ ಶಿಕ್ಷಣ ಸಂಸ್ಥೆಗಳಿಗೆ ಅಥವಾ ಸರ್ಕಾರಿ ಶಾಲೆಗಳಿಗೆ ಅಂತಹ ಮಕ್ಕಳನ್ನು ಸೇರಿಸಲಾಗುತ್ತದೆ.
  ಸುಮಾರು 23 ವರ್ಷಗಳೀಂದ ಈ ಸಂಸ್ಥೆ ಹಲವಾರು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು,ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಶಿಕ್ಷಣ ಪ್ರೇಮಿಗಳ ಬೆಂಬಲದಿಂದ ತನ್ನ ಈ ಅದಮ್ಯವಾದ ಕಾಯಕವನ್ನು ಮಾಡುತ್ತ ಬಂದಿದೆ.
   ಎಲ್ಲಾ ಸೌಲಭ್ಯವಿದ್ದು ನಮ್ಮ ಶಾಲೆಗಳು ಹಾಗೂ ನಮ್ಮ ಶಿಕ್ಷಕರು ಚಿಟ್ಟೆಗಳಿಂದ ಕಲಿಯುವುದು ಬಹಳವಿದೆ ಅಂತ ಅನ್ನಿಸಲಾರದು

No comments:

Post a Comment