Monday, 22 June 2015

ರೆಡಿ ಸ್ಟೆಡಿ ಗೋ...

ನಂ ಶಾಲೆಗೆ ಆಟದ ಮೈದಾನ ಇಲ್ಲದ ಕೊರಗು ಹಲವು ವರ್ಷಗಳಿಂದಲೂ ಇತ್ತು. ಇಂದು ಎಲ್ಲ ವಿದ್ಯಾರ್ಥಿಗಳೊಡಗೂಡಿ ಶಿಕ್ಷಕರಾದ ಗೋಣೆಪ್ಪ, ಗುರುಲಿಂಗಯ್ಯ ಹಾಗೂ ನಾನು ಶಾಲೆಯಿಂದ ಅನತಿ ದೂರದಲ್ಲಿದ್ದ ಸರ್ಕಾರಿ ಜಾಗೆಯಲ್ಲಿನ ಮುಳ್ಳು ಪೊದೆಗಳನ್ನು ಕಡಿದು ಹಾಕಿದೆವು.ಹಳೆಯ ವಿದ್ಯಾರ್ಥಿಗಳೂ ಕೈ ಜೋಡಿಸಿದರು. ಅದೃಷ್ಟವೆಂಬಂತೆ ಬಸವರಾಜ ಪೂಜಾರಿಯ ಟ್ರ್ಯಾಕ್ಟರ್ ನಿಂದ ಸಮತಟ್ಟು ಮಾಡಲಾಯಿತು. ಒಂದುಗಂಟೆಯಲ್ಲಿ ಗ್ರೌಂಡ್ ರೆಡಿಯಾಯಿತು. ನಾಳೆಯಿಂದ ರೆಡಿ ಸ್ಟೆಡಿ ಗೋ.

No comments:

Post a Comment