Monday, 22 June 2015

ನಂ ಶಾಲೆಗ್ ಗ್ರೌ��ಡ್ ಬಂತು...

ಇಂದು ಅದೇನು ಹುಮ್ಮಸ್ಸೋ ಏನೋ ಸುಮಾರು ವರ್ಷಗಳಿಂದ ನಂ ಕೊಡಚಿ ಶಾಲೆಗೆ ಆಟದ ಮೈದಾನ ಇಲ್ಲ ಎಂಬ ಕೊರಗು ನೀಗಿಸಲೇ ಬೇಕು ಅಂತ ನಂ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಹಾಗೂ ಶ್ರೀ ಗುರುಲಿಂಗಯ್ಯ ಅವರು ತಯಾರಾದ್ರು. ನನ್ನ ಜೊತೆ ಚರ್ಚಿಸಿ ತಮ್ಮ ಯೋಜನೇನ ಹೇಳಿದ್ರು. ನನಗೂ ಅದು ಸರಿಯೆನಿಸಿತು.ಅಪರಾಹ್ನ ಊಟ ಮುಗಿಸಿ 1:45ಕ್ಕೆ ಎಲ್ಲ ವಿದ್ಯಾರ್ಥಿಗಳ ಜೊತೆ ಸರ್ಕಾರಿ ಜಾಗೆಯಲ್ಲಿದ್ದ ಮುಳ್ಳು ಕಂಟಿ,ಕಲ್ಲು ತೆರವುಗೊಳಿಸಿದೆವು. ಛಲವಿದ್ದರೆ ಎಲ್ಲವೂ ಸಾಧ್ಯ.

No comments:

Post a Comment