Monday, 22 June 2015
ರೆಡಿ ಸ್ಟೆಡಿ ಗೋ...
ನಂ ಶಾಲೆಗೆ ಆಟದ ಮೈದಾನ ಇಲ್ಲದ ಕೊರಗು ಹಲವು ವರ್ಷಗಳಿಂದಲೂ ಇತ್ತು. ಇಂದು ಎಲ್ಲ ವಿದ್ಯಾರ್ಥಿಗಳೊಡಗೂಡಿ ಶಿಕ್ಷಕರಾದ ಗೋಣೆಪ್ಪ, ಗುರುಲಿಂಗಯ್ಯ ಹಾಗೂ ನಾನು ಶಾಲೆಯಿಂದ ಅನತಿ ದೂರದಲ್ಲಿದ್ದ ಸರ್ಕಾರಿ ಜಾಗೆಯಲ್ಲಿನ ಮುಳ್ಳು ಪೊದೆಗಳನ್ನು ಕಡಿದು ಹಾಕಿದೆವು.ಹಳೆಯ ವಿದ್ಯಾರ್ಥಿಗಳೂ ಕೈ ಜೋಡಿಸಿದರು. ಅದೃಷ್ಟವೆಂಬಂತೆ ಬಸವರಾಜ ಪೂಜಾರಿಯ ಟ್ರ್ಯಾಕ್ಟರ್ ನಿಂದ ಸಮತಟ್ಟು ಮಾಡಲಾಯಿತು. ಒಂದುಗಂಟೆಯಲ್ಲಿ ಗ್ರೌಂಡ್ ರೆಡಿಯಾಯಿತು. ನಾಳೆಯಿಂದ ರೆಡಿ ಸ್ಟೆಡಿ ಗೋ.
ನಂ ಶಾಲೆಗ್ ಗ್ರೌ��ಡ್ ಬಂತು...
ಇಂದು ಅದೇನು ಹುಮ್ಮಸ್ಸೋ ಏನೋ ಸುಮಾರು ವರ್ಷಗಳಿಂದ ನಂ ಕೊಡಚಿ ಶಾಲೆಗೆ ಆಟದ ಮೈದಾನ ಇಲ್ಲ ಎಂಬ ಕೊರಗು ನೀಗಿಸಲೇ ಬೇಕು ಅಂತ ನಂ ಸಹೋದ್ಯೋಗಿ ಶಿಕ್ಷಕರಾದ ಶ್ರೀ ಗೋಣೆಪ್ಪ ಹಾಗೂ ಶ್ರೀ ಗುರುಲಿಂಗಯ್ಯ ಅವರು ತಯಾರಾದ್ರು. ನನ್ನ ಜೊತೆ ಚರ್ಚಿಸಿ ತಮ್ಮ ಯೋಜನೇನ ಹೇಳಿದ್ರು. ನನಗೂ ಅದು ಸರಿಯೆನಿಸಿತು.ಅಪರಾಹ್ನ ಊಟ ಮುಗಿಸಿ 1:45ಕ್ಕೆ ಎಲ್ಲ ವಿದ್ಯಾರ್ಥಿಗಳ ಜೊತೆ ಸರ್ಕಾರಿ ಜಾಗೆಯಲ್ಲಿದ್ದ ಮುಳ್ಳು ಕಂಟಿ,ಕಲ್ಲು ತೆರವುಗೊಳಿಸಿದೆವು. ಛಲವಿದ್ದರೆ ಎಲ್ಲವೂ ಸಾಧ್ಯ.
INTERNATION YOGA DAY in Our Kodachi School
'ಯೋಗಃ ಚಿತ್ತವೃತ್ತಿ ನಿರೋಧಃ'
On 21June 2015 our school ground is full of students. We all teachers and students were voracious about Yoga. Though Yoga Is part of our curriculum, is not being practiced due to some reasons. But we realised that doing yoga daily helps us to rejuvenate and get rid of stress and adversity. Mr. Goneppa,Mr Gurulingaiah and Mr. Sachinkumar gave explanation and did simple Yogasanas and pupils followed them.
Wednesday, 3 June 2015
2015-2016ನೆಯ ಶಾಲಾ ಪ್ರಾರಂಭೋತ್ಸವ
ಇಂದು ದಿ.30/05/2015ರಂದು ನಮ್ಮ ಕೊಡಚಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಕಾರ್ಯಕ್ರಮವನ್ನು ಆಚರಿಸಲಾಯಿತು.ಬೆಳಗ್ಗೆ 7.45ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ
ಶಿಕ್ಷಕರು,ಎಸ್ಡಿಎಂಸಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಜೊತೆ ಪಥಸಂಚಲನ ನಡೆಸಲಾಯಿತು.
ಬಳಿಕ ಗ್ರಾಮದ ಗಣ್ಯರ, ಎಸ್ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಹಾಜರಿದ್ದ ಎಲ್ಲ
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.
ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.
ಕಾರ್ಯಕ್ರಮವನ್ನು ಆಚರಿಸಲಾಯಿತು.ಬೆಳಗ್ಗೆ 7.45ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ
ಶಿಕ್ಷಕರು,ಎಸ್ಡಿಎಂಸಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಜೊತೆ ಪಥಸಂಚಲನ ನಡೆಸಲಾಯಿತು.
ಬಳಿಕ ಗ್ರಾಮದ ಗಣ್ಯರ, ಎಸ್ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಹಾಜರಿದ್ದ ಎಲ್ಲ
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.
ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.
Subscribe to:
Posts (Atom)