Sunday 16 June 2013

ಏನಿದು ಸ್ಮಾರ್ಟ್ ಕ್ಲಾಸ್..?

ದೊಂದು ವಿಶೇಷವಾದ ತರೆಗತಿ. ಅಲ್ಲಿ ಶಿಕ್ಷಕರು ಕೇವಲ ಅನುಕೂಲಿಗಳು(facilitators) ಮಾತ್ರ. ಅಲ್ಲಿನ ವಿದ್ಯಾರ್ಥಿಗಳು ಸಹ ಅಷ್ಟೇ..ಗದ್ದಲ ಮಾಡದೇ ಅವಧಾನ ವಿಕೇಂದ್ರಿಕರಿಸದೇ ತರಗತಿಯ ಬೋರ್ಡಿನತ್ತ ತಮ್ಮ ಮನಸ್ಸು ಮತ್ತು ದೃಷ್ಠಿಯನ್ನು ನೆಟ್ಟಿರುತ್ತಾರೆ. ಆಕಳಿಕೆ, ನಿದ್ದೆ ಅಥವಾ ಬೇಜಾರುತನಕ್ಕೆ ಆ ತರಗತಿಯಲ್ಲಿ ಆಸ್ಪದವಿಲ್ಲ. ಶಿಕ್ಷಕರು ಕಲಿಸಬೇಕಾದ ಪಠ್ಯ ವಿಷಯವೆಲ್ಲ ಕಪ್ಪು ಹಲಗೆಯ ಬದಿಗಿರುವ ವಿಶೇಷ ಪರದೆಯ ಮೇಲೆ ಪ್ರಕ್ಷೇಪಿತವಾಗುತ್ತ ಹೋಗುತ್ತದೆ. ಶಿಕ್ಷಕರು ಆ ಪಠ್ಯಾಂಶಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಪೂರಕ ಅಂಶಗಳನ್ನು ಹಾಗೂ ಉದಾಹಗರಣೆಗಳನ್ನು ವಿವರಿಸುತ್ತ ವಿಶ್ಲೇಷಣೆ ಮಾಡುತ್ತಾರೆ. ಇತಿಹಾಸ, ಭೂಗೋಳ, ಗಣಿತ, ವಿಜ್ಞಾನದಂತಹ ಕೋರ್ ವಿಷಯಗಳಷ್ಟೇ ಅಲ್ಲದೇ ಭಾಷಾ ವಿಷಯಗಳಲ್ಲಿನ ಅಮೂರ್ತ ಪರಿಕಲ್ಪನೆಗಳೆಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂರ್ತ ರೂಪ ತಾಳುತ್ತವೆ. ಯಾವುದೇ ಗೊಂದಲಗಳು ವಿದ್ಯಾರ್ಥಿಗಳ ಮನಸ್ಸಿನಲ್ಲುಳಿಯದೇ ಎಲ್ಲ ಪಠ್ಯಾಂಶಗಳು ಮನವರಿಕೆಯಾಗುತ್ತ ಹೋಗುತ್ತವೆ. ಅದೇ ತರಗತಿಯಲ್ಲಿ ವಿದ್ಯಾರ್ಥಿಗಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಶಿಕ್ಷಕರು ಕೈಗೊಂಡು ಇಡೀ ತರಗತಿಯ ವಿದ್ಯಾರ್ಥಿಗಳಲ್ಲ್ಲಿ ಪರಿಣಾಮಕಾರಿಯಾದ ಕಲಿಕೆಯುಂಟಾಗುತ್ತದೆ. ಇಂಥ ವಿಶಿಷ್ಠವಾದ ತರಗತಿಯೇ ಸ್ಮಾರ್ಟ್ ಕ್ಲಾಸ್(smartclass).

          ಹೌದು..! ಇಮದು ಸುಮಾರು 33,000 ಸ್ಮಾರ್ಟ್ ಕ್ಲಾಸ್ ಹೊಂದಿರುವ ಶಾಲೆಗಳು ಇಡಿ ದೇಶದಾದ್ಯಂತ ನಮಗೆ ಕಾಣಸಿಗುತ್ತವೆ. ಎಜ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಸೊಲ್ಯುಷನ್ಸ್ ಎಂಬ ಖಾಸಗಿ ಸಂಸ್ಥೆ ಈ ಸ್ಮಾರ್ಟ್ ಕ್ಲಾಸಿನ ರೂವಾರಿ. ಸ್ಮಾರ್ಟ್ ಕ್ಲಾಸ್ ನ ಮುಖ್ಯ ಉದ್ದೇಶವೆಂದರೆ ಪ್ರಸ್ತುತ ಶಿಕ್ಷಣದಲ್ಲಿ ಗುಣಾತ್ಮಕ ಕಲಿಕೆಗಾಗಿ ಬೋಧನಾ ವಿಧಾನಗಳನ್ನು ಡಿಜಿಟಲ್ ಮಾಧ್ಯಮವನ್ನಾಗಿಸುವುದು. ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ ಅವರ ಮೆಲಿನ ಭಾರ ಕಡಿಮೆ ಮಾಡಿ ವಿದ್ಯಾರ್ಥಿಗಳೇ ಸ್ವಮೌಲ್ಯಮಾಪನ ಮಾಡಿಕೊಳ್ಳುವಂತಹ ಸನ್ನೀವೇಶವನ್ನು ಸೃಷ್ಟಿಸಿ ಗುಣಾತ್ಮಕ ಕಲಿಕೆಯನ್ನುಂಟು ಮಾಡುವುದು.

ಸ್ಮಾರ್ಟ್ ಕ್ಲಾಸ್ ನಮ್ಮ ಸಾಂಪ್ರದಾಯಿಕ ತರಗತಿಗಳಿಗಿಂತ ಹೇಗೆ ಭಿನ್ನ..?
  ನಾವೆಲ್ಲ ಈಗ ನೋಡುತ್ತಿರುವ ತರಗತಿಗಳನ್ನೊಮ್ಮೆ ನೆನೆಪಿಸಿಕೊಳ್ಳಿ. ಬಾಷಾ ಶಿಕ್ಷಕರು ತರಗತಿ ಪ್ರವೇಶಿಸಿ ಗದ್ಯ ಅಥವಾ ಪದ್ಯದಲ್ಲಿನ ಕಠಿಣ ಪದಗಳನ್ನು ಹಾಗೂ ಅವುಗಳ ಅರ್ಥವನ್ನು ಬರೆಯಿಸಿ ಗಟ್ಟಿ ಓದು ಮೌನ ಓದು ಮಾಡಿಸಿ ಹೋಂವರ್ಕ್ ನೀಡುವ ಹೊತ್ತಿಗೆ 40 ನಿಮಿಷಗಳ ಅವಧಿ ಮೀರಿರುತ್ತದೆ. ಅಲ್ಲಿ ಭಾಷಾ ಕೌಶಲಗಳ ಬೆಳವಣಿಗೆಗೆ ಶಿಕ್ಷಕನಾದವನು ಹರಸಾಹಸ ಪಡಬೇಕು. ಇನ್ನು ಕೋರ್ ವಿಷಯಗಳ ಬೋಧನೆಯಲ್ಲೂ ಅಷ್ಟೇ.. ಶಿಕ್ಷಕ ಎಂತಹುದೇ ವಿಧಾನ ಬಳಸಿದರೂ ವಿದ್ಯಾರ್ಥಿಗಳ ಅವಧಾನ ವಿಕೇಂದ್ರೀಕರಣದಿಂದಾಗಿ  ಪರಿಣಾಮಕಾರಿಯಾದ ಕಲಿಕೆ ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಶಾಲಾ ತರಗತಿಗಳಲ್ಲಿ ಕಲಿಯುವವ(learner)- ಕಲಿಸುವವ(teacher)-- ಕಲಿಕಾ ವಾತಾವರಣ ಈ ಮೂರು ಅಂಶಗಳಲ್ಲಿ ಯಾವುದಾದರೂ ಒಂದಂಶದಲ್ಲಿ ಲೋಪವುಂಟಾಗುತ್ತದೆ. ಆದರೆ ಸ್ಮಾರ್ಟ್ ಕ್ಲಾಸ್ ನಲ್ಲಿ ಹೀಗಾಗಲ್ಲ. ಅಲ್ಲಿ ಕಪ್ಪು ಹಲಗಹೆಯ ಬದಿಯಲ್ಲೆ ಒಂದು ಪರದೆ(smart board)ಯಿರುತ್ತದೆ. ಅದರ ಮೇಲೆ ಚಿತ್ರ ಅಥವಾ ವಿಡಿಯೋ ಪ್ರದರ್ಶನಕ್ಕೆಂದೇ ಒಮದು ಅನುಸ್ಥಾಪಿತ ಕಾರ್ಯಕ್ರಮಗಳುಳ್ಳ ಪ್ರಕ್ಷೇಪಕ (projector) ಇರುತ್ತದೆ. ಶಿಕ್ಷಕರು ತಮಗೆ ಬೇಕಾದಾಗ ಪ್ರಕ್ಷೇಪಕವನ್ನು ಬಳಸಿಕೊಳ್ಳುವಂತಹ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿದ್ದು ಪುರಕ ಅಂಶಗಳನ್ನು ಅವರು ಕಪ್ಪು ಹಲಗೆಯ ಮೂಲಕ ಕಲಿಸುತ್ತ ಹೋಗುತ್ತಾರೆ.  ಉದಾಹರಣೆಗೆ ಮಾನವನ ಜೀರ್ಣಾಣಂಗವ್ಯೂಹದ ಬಗ್ಗೆ ನೀವು ಪಾಠ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಕಲಿಕಾ ಚಟುಚಟಿಕೆಯ ಭಾಗವಾಗಿ ಪೂರ್ವ ಅಅನುಸ್ಥಾಪಿಪ ವಿಡಿಯೋ ಪ್ರದರ್ಶನವಾಗುತ್ತದೆ. ಅದರಲ್ಲಿ ಮಾನವನ ದೇಹದ ಜೀರ್ಣಾಂಗವ್ಯೂಹದಲ್ಲಿನ ವಿವಿಧ ಅಂಗಗಳು ಹೇಗಿವೆ? ಎಲ್ಲಿವೆ? ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ವಿದ್ಯಾರ್ಥಿಗಳು ತ್ರಿ ಡಿ ಆಯಾಮದಲ್ಲಿ ನೋಡಿ ತಮ್ಮ ಗೊಂದಲಗಳಿಗೆ ತಾವೇ ಪರಿಹಾರ ಕಂಡೊಕೊಳ್ಳುತ್ತಾರೆ.ಹೀಗೆ ಅವರ ಅಮೂರ್ತ ಪರಿಕಲ್ಪನೆಗಳೆಲ್ಲ ಮೂರ್ತ ಪರಿಕಲ್ಪನೆಗಳಾಗುತ್ತವೆ. 

   ಮುಖ್ಯವಾಗಿ ಸ್ಮಾರ್ಟ್ ಕ್ಲಾಸ್ ನಲ್ಲಿ ಎರಡು ಬಗೆಯ ವ್ಯವಸ್ಥೆಗಳಿವೆ. ಮೊದಲನೆಯದು ಡಿಜಿಟಲ್ ಕಲಿಕಾ ವ್ಯವಸ್ಥೆ(digital learning system), ಎರಡನೆಯದು ತರಗತಿ ಪರಿವರ್ತನಾ ವ್ಯವಸ್ಥೆ(classroom transformation system). ಮೊದಲನೆಯದು ಬೋಧನಾ ಕಲಿಕಾ ವಿಧಾನವಾದರೆ ಎರಡನೆಯದು ತರಗತಿ ಮೌಲ್ಯಮಾಪನದ ವಿಧಾನವಾಗಿದೆ.

ಅಳವಡಿಕೆ ಹೇಗೆ..?
ಸ್ಮಾರ್ಟ್ ಕ್ಲಾಸ್ ನ್ನು ತರಗತಿಗೊಮದರಂತೆ ಅಥವಾ ಶಾಲೆಗೊಂದರಂತೆ ಅಳವಡಿಸಿಕೊಲ್ಳಬಹುದಾಗಿದೆ. ಇದರಲ್ಲಿ ಹಾರಡ್ ವೇರ್ ನ ಭಾಗವಾಗಿ ಪ್ರಿ ಇನ್ಸ್ಟಾಲ್ಡ್ ಪ್ರೊಜೆಕ್ಟರ್, ಅಂತರ್ಜಾಲ ಸಂಪರ್ಕ ಹಾಗೂ ಇತರ ಸಿಎಡಿ/ಡಿವಿಡಿಗಳು ಪಠ್ಯಾಂಶದ ರೂಪದಲ್ಲಿರುತ್ತವೆ. ನಾಮಿನಲ್ ಶುಲ್ಕ ಹಾಗೂ ಪ್ರತಿ ವಿದ್ಯಾರ್ಥಿಯ ತಲಾ ಶುಲ್ಕ ಸೇರಿ ಸ್ಥಾಪನಾ ಶುಲ್ಕವಿರುತ್ತದೆ. ಒಮದೊಂದು ವಿಇದ್ಯಾರ್ಥಿಗೂ ಯುಸರ್ ನೇಮ್ ಮತ್ತು ಪಾಸ್ ವರ್ಡ್ ನೀರಿ ಆನ್ ಲೈನ್ ಕಲಿಕೆಗೂ ಅವಕಾಶವಿದೆ.

  ಅದೇನೆ ಇರಲಿ..! ಸ್ಮಾರ್ಟ್ ಕ್ಲಾಸ್ ವೆಂಬುದು ಒಂದು ಡಿಜಿಟಲ್ ಬೋಧನಾ ವೊಧಾನವಷ್ಟೇ.. ನಮ್ಮ ಶಿಕ್ಷಕರು ತಮ್ಮ ಶಾಲೆಗಳಲ್ಲಿ www.educomponline.com ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ತರಗತಿಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಗಳ ಮೂಲಕ ಪ್ರದರ್ಶಿಸಿ ತಮ್ಮ ತರಗತಿಳನ್ನೂ ಸ್ಮಾರ್ಟ್  ಕ್ಲಾಸ್ ಆಗಿ ಪರಿವರ್ತಿಸಿಕೊಳ್ಬಹುದಾಗಿದೆ.


                -- ಸಚಿನ್ ಕುಮಾರ ಬಿ.ಹಿರೇಮಠ

1 comment:

  1. ಅತ್ಯಂತ ಸರಳ ಮತ್ತು ಅರ್ಥಗರ್ಭಿತವಾಗಿದೆ ಸ್ಮಾಟ್೯ಕ್ಲಾಸಿನ ಈ ಲೇಖನ

    ReplyDelete