Friday 14 June 2013

ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲೊಮಾ ಕೋರ್ಸ್‌ಗಳು


ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಡಿಪ್ಲೊಮಾ ಕೋರ್ಸ್‌

ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ. ತೇರ್ಗಡೆಯಾದ ಹಾಗೂ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಸೀಮಿತವಾಗಿ ನಿಗದಿತ ನಮೂನೆಗಳಲ್ಲಿ ಪ್ರತಿವರ್ಷ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಪಶುಸಂಗೋಪನಾ ಡಿಪ್ಲೊಮಾದ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುವುದು. ಪ್ರತಿ ಪಾಲಿಟೆಕ್ನಿಕ್‌ಗೆ ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಪ್ರವೇಶ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿರುವ ಪಶುಸಂಗೋಪನಾ ಪಾಲಿಟೆಕ್ನಿಕ್, ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗಂಜಿಗಟ್ಟಿಯಲ್ಲಿ ಸ್ಥಾಪನೆಗೊಳ್ಳಿರುವ ಪಶುಸಂಗೋಪನಾ ಪಾಲಿಟೆಕ್ನಿಕ್‌ಗಳಲ್ಲಿ ಈ ಡಿಪ್ಲೋಮಾ ಕೋರ್ಸ್ ನಡೆಸಲಾಗುವುದು. ಗಂಜಿಗಟ್ಟಿಯ ಪಾಲಿಟೆಕ್ನಿಕ್ ಆರಂಭವಾಗುವವರೆಗೆ ಈ ವರ್ಷದ ತರಗತಿಗಳನ್ನು ಹಾವೇರಿಯ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುತ್ತಿದೆ.

ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಗಳಿಗೆ ಭೇಟಿ ನೀಡಿ:
http://kvafsu.kar.nic.in
http://kvafsu.kar.nic.in/content/downloads/Diploma_noti_appl_pros_2012.pdf


ತೋಟಗಾರಿಕೆ ಮೇಲ್ವಿಚಾರಕರ ಡಿಪ್ಲೊಮಾ ತರಬೇತಿ
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರಕಾರದ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪ್ರತಿವರ್ಷ ತೋಟಗಾರಿಕೆಯಲ್ಲಿ ಮೇಲ್ವಿಚಾರಕ ತರಬೇತಿಯ ಒಂದು ವರ್ಷದ ಡಿಪ್ಲೊಮಾ ಹಾಗೂ ಮೂರು ಮತ್ತು ಆರು ತಿಂಗಳ ಅವಧಿಯ ಉದ್ಯಮಶೀಲತ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಬೆಂಗಳೂರು, ಧಾರವಾಡ, ಬಾಗಲಕೋಟೆ ಮತ್ತು ಬಿಜಾಪುರಗಳಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ಈ ತರಬೇತಿ ನೀಡಲಾಗುತ್ತಿದ್ದು ತರಬೇತಿಯ ಅವಧಿಯಲ್ಲಿ 800 ರಿಂದ 1000 ರೂಪಾಯಿಗಳ ಸ್ಟೈಫಂಡ್ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: www.uhsbagalkot.edu.in


ಕೃಷಿ ವಿಜ್ಞಾನದಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು
ಬೆಂಗಳೂರು, ರಾಯಚೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿಯಲ್ಲಿ ಎರಡು ವರ್ಷದ ಡಿಪ್ಲೊಮಾ ಮತ್ತು ಬೀಜೋತ್ಪಾದನೆ, ಸಾವಯವ ಕಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಸಸ್ಯೋತ್ಪಾದನೆ ಹಾಗೂ ಸಸ್ಯಮಡಿ ನಿರ್ವಹಣೆ, ಹೈ-ಟೆಕ್ ಕಷಿ, ರೈತ ಮಹಿಳೆಯರಿಗಾಗಿ ಉದ್ದಿಮೆಗಳು, ಕಬ್ಬು ಹಾಗು ಸಕ್ಕರೆ ಗಡ್ಡೆ ಉತ್ಪಾದನೆ ತಾಂತ್ರಿಕತೆ ವಿಷಯಗಳಲ್ಲಿ ಒಂದು ಸೆಮಿಸ್ಟರ್‌ನ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು , ಎಸ್‌ಎಸ್‌ಎಲ್‌ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಸಂಪರ್ಕಿಸಬಹುದು: www.uasd.edu


ಪ್ಯಾರಾಮೆಡಿಕಲ್ ಕೋರ್ಸ್‌ಗಳು
ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿ ಕೋರ್ಸ್‌ಗಳು ದೀರ್ಘಾವಧಿಯ ಕೋರ್ಸ್‌ಗಳಾದರೂ ತಪಾಸಣೆ, ರೋಗನಿಧಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್‌ಗಳಿವೆ.
ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್, ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್, ಡಿಪ್ಲೊಮಾ ಇನ್ ಡೆಂಟಲ್ ಹೈಜಿನ್ ಕೋರ್ಸ್‌ಗಳನ್ನು ಪ್ಯಾರಾ ಮೆಡಿಕಲ್ ಬೋರ್ಡ್ ಅನುಮೋದಿಸಿದ್ದು , ರಾಜ್ಯದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಇವುಗಳನ್ನು ನಡೆಸುತ್ತಿವೆ. ಪಿಯುಸಿ. ಪಾಸಾದ ವಿದ್ಯಾರ್ಥಿಗಳನ್ನು ಡಿಪ್ಲೊಮಾ ತರಗತಿಗಳಿಗೆ ಸೇರಿಸಿಕೊಂಡರೆ ಅವೇ ವಿಷಯಗಳಲ್ಲಿ ನೀಡಲಾಗುವ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಹಾಜರಾಗುವವರಿಗೆ ಎಂಟು ಅಥವಾ ಹತ್ತನೇ ತರಗತಿ ಓದಿರಬೇಕಾಗುತ್ತದೆ. ಕೋರ್ಸ್‌ಗಳ ಅವಧಿ 2 ರಿಂದ 6 ತಿಂಗಳು.
ವಿವರಗಳಿಗಾಗಿ ಭೇಟಿನೀಡಿ : www.pmbkarnataka.org


ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್
ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್‌ಗೆ ಪ್ರತಿ ವರ್ಷವೂ ಸರಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.ksdneb.org www.ksdneb.net


ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ಶ್ರವಣದೋಷ, ಮಾತಿನ ದೋಷ ಇರುವ ಮಕ್ಕಳಿಗೆ ಚಿಕಿತ್ಸೆ ಮತ್ತು ತರಬೇತಿ ನೀಡಿ ಸಾಮಾನ್ಯರಂತೆ ಬದುಕು ನಡೆಸಲು ಅವಕಾಶ ನೀಡುವ ವಿಶಿಷ್ಟ ಅಲ್ಪಾವಧಿಯ ಕೋರ್ಸ್‌ಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತದೆ. ಹತ್ತು ಹದಿನೈದು ದಿನಗಳಿಂದ ಹಿಡಿದು ಆರು ತಿಂಗಳವರೆಗೆ ನಡೆಸಲಾಗುವ ಈ ಕೋರ್ಸ್‌ಗಳಿಗೆ ಅಗಾಧವಾದ ಬೇಡಿಕೆ ಇದೆ. ಇವುಗಳ ಜತೆಗೆ ಹದಿನಾಲ್ಕು ವಾರಗಳ ಸರ್ಟಿಫಿಕೇಟ್ ಕೋರ್ಸ್‌ಗಳು, ಆರು ತಿಂಗಳ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿಗೆ ಅವಕಾಶವಿದೆ.

ಆಡಿಯಾಲಜಿ ಡಿಪಾರ್ಟ್‌ಮೆಂಟ್‌ನಲ್ಲಿ 20 ಕೋರ್ಸ್‌ಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 4 ಕೋರ್ಸ್‌ಗಳು, ಸ್ಪೀಚ್ ಪೆಥಾಲಜಿ ವಿಭಾಗದಲ್ಲಿ 26, ಸ್ಪೀಚ್ ಲಾಂಗ್ವೇಜ್ ಸೈನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ 10 ಕೋರ್ಸ್‌ಗಳು ನಿಯಮಿತವಾಗಿ ವರ್ಷವಿಡೀ ಆಯೋಜಿತವಾಗುತ್ತಿದ್ದು ಜನಸಾಮಾನ್ಯರು, ಶಿಕ್ಷಕರು, ತರಬೇತುದಾರರು, ಸ್ವಯಂ ಸೇವಕರು, ಯಾರು ಬೇಕಾದರೂ ಕಲಿತುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ನೋಡಿ: www.aiishmysore.com
                    ಲೇಖನ- ಬೇದ್ರೆ ಮಂಜುನಾಥ

No comments:

Post a Comment