Friday, 7 August 2015

ಕಲಿಕೆಯ ಭಾಗವಾಗಿ ಪರಿಸರ ಶಿಕ್ಷಣ

ಸುಮಾರು ಎರಡು ವರ್ಷಗಳ ಹಿಂದೆ ನಮ್ಮ ಕೊಡಚಿ ಶಾಲೆಯಲ್ಲಿ ಒಂದೇ ಒಂದು ಸಸಿ ಇರಲಿಲ್ಲ. ಸೂಕ್ತ ಕಾಂಪೌಂಡ್ ಹಾಗೂ ಸರಿಯಾದ ವ್ಯವಸ್ಥೆ ಇರದ ಕಾರಣ ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವುದು ಕನಸಿನ ಮಾತಾಗಿತ್ತು. ಆದರೆ ಛಲ ಬಿಡದೆ ಸಹೋದ್ಯೋಗಿಯಾದ ಶ್ರೀ ಗೋಣೆಪ್ಪ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸುಮಾರು70ವಿವಿಧ ಬಗೆಯ ಸಸಿಗಳನ್ನುಅರಣ್ಯ ಇಲಾಖೆಯಿಂದ ಪಡೆದು ಇದ್ದ ಸ್ವಲ್ಪ ಶಾಲಾವರಣದಲ್ಲಿಯೇ ನೆಟ್ಟರು. ಈಗ ಅವುಗಳಿಗೆ ಎರಡರ ಪ್ರಾಯ.

No comments:

Post a Comment