ಶಾಲೆಗೊಂದು ಗ್ರಂಥಾಲಯ ಇದೆ ಆದರೆ ಅದು ವಿದ್ಯಾರ್ಥಿಗಳಿಗಾಗಿ ತೆರೆದಿರಲ್ಲ ಎಂಬ
ಅಪಸ್ವರ ಇದೆ. ಆದರೆ ನಮ್ಮ ಕೊಡಚಿ ಶಾಲೆಯಲ್ಲಿ ಹಾಗಿಲ್ಲ. ವಿದ್ಯಾರ್ಥಿಗಳು
ತಮಗ್ಯಾವುದಿಷ್ಟವೋ ಆ ಪುಸ್ತಕಗಳನ್ನು ಆರಿಸಿ ವಿತರಣಾ ವಹಿಯಲ್ಲಿ ನಮೂದಿಸಿ
ಪಡೆಯುತ್ತಾರೆ. ಒಂದುವಾರದ ಬಳಿಕ ಪುಸ್ತಕದ ಜತೆಗೆ ಅದರ ವಿಮರ್ಶೆ,ಇಷ್ಟವಾದ ಭಾಗ ಅಥವಾ
ಕೆಲವೊಮ್ಮೆ ಚಿತ್ರಗಳನ್ನೂ ಬರೆಯುತ್ತಾರೆ. ಅದಕ್ಕೂ ಮೊದಲು ಪ್ರತಿ ಬುಧವಾರ
ತರಗತಿಗೊಂದರಂತೆ ವಿಶಿಷ್ಟವಾದ ಕೃತಿಗಳನ್ನು ಪರಿಚಯಿಸಿ ಅದರ ಲೇಖಕರ ಕುರಿತು ಮಾಹಿತಿ
ನೀಡಲಾಗುತ್ತದೆ. ಶಿಕ್ಷಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳೇ ಗ್ರಂಥಾಲಯ ವಹಿ
ನಿರ್ವಹಿಸುತ್ತಾರೆ. ತರಗತಿ ಕೋಣೆಯಲ್ಲೂ ಸಹ ವಾಚನಾಲಯ ಮೂಲೆ ರಚಿಸಿ ಬಾಲ
ವಿಜ್ಞಾನ,ಶಿಕ್ಷಣ ಶಿಲ್ಪಿ, ವಿಜಯವಾಣಿ ಮುಂತಾದ ಪತ್ರಿಕೆಗಳನ್ನು ಇಡಲಾಗಿದೆ. ಬಿಡುವಿನ
ವೇಳೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ,
ಸ್ದಳದ ಅಭಾವವಿದ್ದರೂ ತಕ್ಕಮಟ್ಟಿಗೆಗ್ರಂಥಾಲಯ ನಮ್ಮ ಕೊಡಚಿ ಶಾಲೆಯಲ್ಲಿ ಸಜೀವವಾಗಿದೆ