ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಾಥಮಿಕ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಹಾಗೂ ಪರಿಣಾಮಕಾರಿ ಕಲಿಕೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಅಹರ್ನಿಶಿ ಶ್ರಮಿಸುತ್ತಿದೆ. ಆದರೂ ಪ್ರಗತಿ ಮಾತ್ರ ಸಾಧ್ಯವಾಗುತ್ತಿಲ್ಲ. ದೋಷವೆಲ್ಲಿ ಎಂದು ಹುಡುಕುವುದಕ್ಕೂ ಸಾದ್ಯವಾಗುತ್ತಿಲ್ಲ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲೂ ಸಾಕಷ್ಟು ವ್ಯತ್ಯಾಸ ಉಂಟಾಗಿ ಸರ್ಕಾರ ನ್ಯಾಯಾಲಯದಲ್ಲೂ ದಾವೆ ಎದುರಿಸುತ್ತಿದೆ. ಇಂಥ ಪ್ರದೋಷ ಕಾಲದಲ್ಲಿ ಶಿಕ್ಷಕರದಾದ ನಾವು ನೀವೆಲ್ಲ ಈ ಕುರಿತು ಚಿಂತಿಸಬೇಕಾಗಿದೆ. 'ಸರ್ವ ಶಿಕ್ಷಣ ಅಭಿಯಾನ', 'ಚಿಣ್ಣರ ಅಂಗಳ', 'ಬಾ ಬಾಲೆ ಶಾಲೆಗೆ', 'ಕೂಲಿಯಿಂದ ಶಾಲೆಗೆ', 'ಅಕ್ಷರ ದಾಸೋಹ', 'ಕ್ಷೀರಭಾಗ್ಯ' ಮುಂತಾದ ಭಾಗ್ಯಗಳು ಪ್ರಾಥಮಿಕ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಪೂರಕವಿದ್ದರೂ ಪ್ರಗತಿ ಮಾತ್ರ ಸಾಧ್ಯವಾಗದೇ ಹೋಗುತ್ತಿದೆ. ಇದಕ್ಕೆ ಶಿಕ್ಷಕರನ್ನೇ ಹೊಣೆಗಾರನ್ನಾಗಿ ಮಾಡಲಾಗುತ್ತಿದೆ. ಈ ಕಾರಣಕ್ಕೆ ಶಿಕ್ಷಕರು ಅಂತರಾವಲೋಕನ ಮಾಡಿಕೊಳ್ಳಬೇಕಿದೆ.
ಶಿಕ್ಷಕರು ಹೇಗಿರಬೇಕು?
ಸರ್ಕಾರಿ ಶಾಲೆಗಳಲ್ಲಿ 2002ರ ನಂತರ ನೇಮಕಗೊಂಡ ಶಿಕ್ಷಕರು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಬಂದವರಾಗಿದ್ದರೂ ಸಾಕಷ್ಟು ಪರಿಣಿತಿಯುಳ್ಳವರೆಂದು ನಂಬಲಾದಿದೆ. ಹಾಗಂತ ಮೊದಲಿದ್ದ ಶಿಕ್ಷಕರೇನೂ ಕಮ್ಮಿ ಇಲ್ಲ.ಆದರೆ ಖಾಸಗಿ ಶಾಲೆಗಳಲ್ಲಿ 1500ಕ್ಕೊ, 2000ಕ್ಕೊ ದುಡಿಯುವ ಶಿಕ್ಷಕರು ಮಾತ್ರ ಪರಿಣಾಮಕಾರಿಯಾಗಿ ಕಲಿಸುತ್ತಾರೆ ಎಂಬ ವಾದ ಒಂದೆಡೆ ಇದೆ. ಸರ್ಕಾರಿ ಶಿಕ್ಷಕರಿಗೆ ಕಲಿಸಲು ಸಮಯ ಸಿಗದಷ್ಟೂ ಕಾರಕೂನ ಕೆಲಸಗಳಿವೆ ಎಂಬ ವಾದ ಇನ್ನೊಂದೆಡೆ ಇದೆ. ಇದನ್ನೆಲ್ಲ ಒಂದು ಕಡೆ ಸರಿಸಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನೋಡೋಣ.
ಶಿಕ್ಷಕರು ಹೇಗಿರಬೇಕು?
ಸರ್ಕಾರಿ ಶಾಲೆಗಳಲ್ಲಿ 2002ರ ನಂತರ ನೇಮಕಗೊಂಡ ಶಿಕ್ಷಕರು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಬಂದವರಾಗಿದ್ದರೂ ಸಾಕಷ್ಟು ಪರಿಣಿತಿಯುಳ್ಳವರೆಂದು ನಂಬಲಾದಿದೆ. ಹಾಗಂತ ಮೊದಲಿದ್ದ ಶಿಕ್ಷಕರೇನೂ ಕಮ್ಮಿ ಇಲ್ಲ.ಆದರೆ ಖಾಸಗಿ ಶಾಲೆಗಳಲ್ಲಿ 1500ಕ್ಕೊ, 2000ಕ್ಕೊ ದುಡಿಯುವ ಶಿಕ್ಷಕರು ಮಾತ್ರ ಪರಿಣಾಮಕಾರಿಯಾಗಿ ಕಲಿಸುತ್ತಾರೆ ಎಂಬ ವಾದ ಒಂದೆಡೆ ಇದೆ. ಸರ್ಕಾರಿ ಶಿಕ್ಷಕರಿಗೆ ಕಲಿಸಲು ಸಮಯ ಸಿಗದಷ್ಟೂ ಕಾರಕೂನ ಕೆಲಸಗಳಿವೆ ಎಂಬ ವಾದ ಇನ್ನೊಂದೆಡೆ ಇದೆ. ಇದನ್ನೆಲ್ಲ ಒಂದು ಕಡೆ ಸರಿಸಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನೋಡೋಣ.
ಶಿಕ್ಷಕರಾದವರು ಹಾಗೂ ಶಿಕ್ಷಕರಾಗ ಬಯಸುವವರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಗಳೀವೆ ಎಂದು ಅಭಿಪ್ರಾಯ ಪಡುತ್ತಾರೆ ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ. ಈ ಮೂರು ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಹೌದು' ಎಂದಾದರೆ ಮಾತ್ರ ಶಿಕ್ಷಕರಾಗಲು ಸೂಕ್ತ.
ಆ ಪ್ರಶ್ನೆಗಳು ಹೀಗಿವೆ:
ಪ್ರ1.ನಾನು ಕಲಿಸಬೇಕಾದ ವಿಷಯದ ಬಗ್ಗೆ ನನಗೆ ಸೂಕ್ತ ತಿಳುವಳಿಕರ ಇದೆಯೇ?
ಪ್ರ2. ನಾನು ನನ್ನ ವೃತ್ತಿಯನ್ನು ನಿಜವಾಗಿಯೂ ಪ್ರೀತಿಸುತ್ತೆನೆಯೇ?
ಪ್ರ3. ನನ್ನ ವಿದ್ಯಾರ್ಥಿಗಳನ್ನು ನಾನು ನನ್ನ ಸ್ವಂತ ಮಕ್ಕಳಂತೆಯೇ ಕಾಣುತ್ತೇನೆಯೇ?
ಈ ಮೂರು ಪ್ರಶ್ನೆಗಳಿಗೆ ನಮ್ಮ ಉತ್ತರ ಹೌದಾದರಷ್ಟೇ ಸಾಲದು. ಉತ್ತಮ ಶಿಕ್ಷಕನಾಗಲು ಇನ್ನೂ ಕೆಲವು ಅಂಶಗಳಿವೆ. ಅವು ಹೀಗಿವೆ:
1.ಕಲಿಸುವ ಜಾಣ್ಮೆ :
ತಾನು ಕಲಿಸಬೇಕಾದ ವಿಷಯವನ್ನು ತನ್ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸುವ ಜಾಣ್ಮೆ ಶಿಕ್ಷಕನಿಗಿರಬೇಕು.
2.ವಿದ್ಯಾರ್ಥಿಗಳ ಬಗೆಗಿನ ಪ್ರೀತಿ :
ವಿದ್ಯಾರ್ಥಿಗಳ ಮೇಲೆ ಅತೀವವಾದ ಪ್ರೀತಿ ಶಿಕ್ಷಕನಿಗಿರಬೇಕು. ಯಾವುದೇ ರೀತಿಯ ಚಟುವಟಿಕೆಗಳು ಪ್ರೀತಿಯಿಂದಲೇ ಸಾಗಿಸುವಂತಹ ಕಲೆ ಗೊತ್ತಿರಬೇಕು.
3.ವಿಷಯದ ಬಗೆಗಿನ ಪ್ರೀತಿ :
ಶಿಕ್ಷಕ ತಾನು ಕಲಿಸುವ ವಿಷಯವನ್ನು ಪ್ರೀತಿಸಬೇಕು. ಏಕೆಂದರೆ ಒಂದು ವಿಷಯದ ಬಗೆಗಿನ ಪ್ರೀತಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಲ್ಲುದು.
4.ಮಕ್ಕಳ ಬದುಕಿನಲ್ಲಿ ಶಾಲೆಯ ಮಹತ್ವವನ್ನು ಅರಿಯುವುದು :
ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಶಾಲೆ ಯಾವ ರೀತಿ ಮಹತ್ವವಳ್ಳದ್ದಾಗಿದೆ ಎಂಬುದನ್ನು ಅರಿಯಬೇಕು. ಶಾಲಾ ಆವರಣ, ಆಟಗಳು, ಪಾಠಗಳು - ಹೀಗೆ ಶಾಲೆ ಮಕ್ಕಳನ್ನು ಯಾವ ಯಾವ ಕ್ಷೇತ್ರಗಳಲ್ಲಿ ಬಲಯುತಗೊಳಿಸಬಹುದೆಂಬುದನ್ನು ಶಿಕ್ಷಕರು ಅರಿತಿರಬೇಕು. ಇದರಿಂದ ಶಿಕ್ಷಕರಿಗೆ ತಮ್ಮ ಕಾರ್ಯಕ್ಷೇತ್ರದ ಅರಿವಾಗುತ್ತದೆ.
5.ಬದಲಾಯಿಸುವ ಇಚ್ಛಾಶಕ್ತಿ :
'ನಾನು ನನ್ನ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಬದಲಾಯಿಸಬಲ್ಲೆ' ಎಂಬ ಮನೋಭಾವ ಮತ್ತು ಅದರೆಡೆಗಿನ ಇಚ್ಛಾಶಕ್ತಿ ಶಿಕ್ಷಕನಿಗಿರಬೇಕು. ಮೊದಮೊದಲು ಕಲಿಕಾ ಕೊರತೆ, ಶೈಕ್ಷಣಿಕ ಕೊರತೆ ಹಾಗೂ ಭೌತಿಕ ಕೊರತೆಗಳನ್ನು ಗಮನಿಸಿ ಅದನ್ನು ಬದಲಾಯಿಸಬಲ್ಲ ಇಚ್ಛಾಶಕ್ತಿ ಪ್ರಬಲವಾದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬಲ್ಲುದು.
6.ಪ್ರತಿಫಲಿಸುವ ಇಚ್ಛಾಶಕ್ತಿ :
ವಿದ್ಯಾರ್ಥಿ ಶಾಲೆಯಲ್ಲಿ ಕಲಿತ ವಿಷಯವನ್ನು ಸಮಾಜದ ಆಗು ಹೋಗುಗಳೊದಿಗೆ ತಾಳೆ ನೋಡಿ ಧನಾತ್ಮಕವಾಗಿ ವರ್ತಿಸಿದರೆ ಶಿಕ್ಷಣದ ಗುಣಗಳು ಪ್ರತಿಫಲಿಸಿವೆ ಎಂದರ್ಥ.ಒಂದು ಸಮಾಜ ಹೇಗೆ ಇರಬೇಕು ಎಂಬುದನ್ನು ಶಿಕ್ಷಕ ನಿರ್ಧರಿಸಿ ಅದನ್ನು ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೂಲಕ ಪ್ರತಿಫಲಿಸಬೇಕು.
ಭರಪೂರ ಸಂಪನ್ಮೂಲ :
ಸರ್ಕಾರಿ ಶಾಲೆಗಳಲ್ಲಿ ಸಂಪನ್ಮೂಲದ ಕೊರತೆಯಿಲ್ಲ. ಶಾಲಾ ಕಟ್ಟಡಗಳು, ವಿಜ್ಞಾನ ಹಾಗೂ ಕ್ರೀಡಾ ಸಾಮಗ್ರಿಗಳು, ಸಾದಲ್ವಾರು ಅನುದಾನಗಳು, ವಿವಿಧ ಬಗೆಯ ಫ್ರೋತ್ಸಾಹಕಗಳು ಸರ್ಕಾರಿ ಶಾಲೆಗಳನ್ನು ಭಂಡಾರವನ್ನಾಗಿಸಿವೆ. ಆದರೆ ಅವುಗಳನ್ನುಪಯೋಗಿಸುವ ಇಚ್ಛಾಶಕ್ತಿ ಶಿಕ್ಷಕರಲ್ಲಿಲ್ಲ. ಅಧಿಕಾರಿಗಳು ಭೇಟಿ ನೀಡಿದಾಗ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪಾಟೀ ಸವಾಲು ಮಾಡದೆ ತೀರ್ಪು ಬರೆದು ಬಿಡುತ್ತಾರೆ.
ಪೋಷಕರ ಅನಾಸಕ್ತಿ :
ಪರಿಣಾಮಕಾರಿ ಕಲಿಕೆಯಲ್ಲಿ ಮತ್ತೊಂದು ಪ್ರಮುಖ ತೊಡರೆಂದರೆ ಪೋಷಕರ ಅನಾಸಕ್ತಿ. ಅದರಲ್ಲೂ ಹೈದರಾಬಾದ ಕರ್ನಾಟಕ ಭಾಗದಲ್ಲಿ ಪೋಷಕರೇ ತಂತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅನಾಸಕ್ತಿ ತೋರಿಸುತ್ತಾರೆ. ಶಾಲೆಗೇನೋ ಸಮರೋಪಾದಿಯಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಾರೆ. ಪ್ರೋತ್ಸಾಹಕಗಳನ್ನು ಪಡೆದ ನಂತರ ತಮ್ಮ ಹೊಲ ಮನೆ ಕೆಲಸಗಳಿಗೆ ವಿನಂತಿಪೂರ್ವಕವಾಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಹೀಗೆ ಪೋಷಕರು ತಮ್ಮ ಮಕ್ಕಳ ಸುಂದರ ಭವಿಷ್ಯದ ಬಗ್ಗೆ ಯೋಚಿಸದೇ ಒಂದು ಬಗೆಯ ಅನಾಸಕ್ತಿ ತೋರುತ್ತಿರುವುದು ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ದೊಡ್ಡ ತೊಡಕಾಗಿದೆ.
ಇಲಾಖೆಯ ಹೊರೆ :
ಇಲಾಖೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಉಳಿಕೆಗೆ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ. ಈ ಯೋಜನೆಗಳ ಅನುಷ್ಠಾನ ಅಂಕಿ ಅಂಶಗಳ ಸಂಗ್ರಹಣೆಯಲ್ಲಿಯೇ ಬಹುಪಾಲು ಶಿಕ್ಷಕರು ಕಲಿಸಲು ಸಮಯಾವಕಾಶವಿಲ್ಲದೆ ಗುಮಾಸ್ತರಂತೆ ದಾಖಲೆಗಳನ್ನು ಸಿದ್ಧಪಡಿಸುವುದರಲ್ಲೇ ಕಾರತ್ಯನಿರತರಾಗುತ್ತಿದ್ದಾರೆ.
ಏನು ಮಾಡಬಹುದು?
ಖಾಸಗಿ ಶಾಲೆಗಳಲ್ಲಿ ಹೋಂವರ್ಕ್, ಕಟ್ಟುನಿಟ್ಟಾದ ಡ್ರೆಸ್ ಕೋಡ್, ಬಸ್ ಸೌಲಭ್ಯ, ಸ್ಮಾರ್ಟ್ ಕ್ಲಾಸ್ ಹೀಗೆ ಅನೇಕಾನೇಕ ತೋರಿಕೆಗಳಿವೆ. ಆದರೆ ಸರ್ಕಾರಿ ಶಾಲೆಗಳು ಹಾಗಿಲ್ಲ. ಮೊದಲೇ ಹೇಳಿದಂತೆ ಶಿಕ್ಷಕರೇ ಖಾಲಿಯಿಲ್ಲ. ಆದರೇ ಅದೇ ಮುಖ್ಯ ಕಾರಣವಲ್ಲ. ಶಿಕ್ಷಕರು ಇಂಥ ಬ್ಯುಸಿ ಕೆಲಸಗಳ ನಡುವೆಯೂ ಕಲಿಸುತ್ತಿದ್ದಾರೆ. ಆದರೂ ನಾವು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಏನೇನು ಮಾಡಬಹುದು ಎಂಬುದನ್ನು ನೋಡೋಣ.
- ಗ್ರಾಮದ ಮನೆಮನೆಗೂ ಹೋಗಿ ಶಿಕ್ಷಣದ ಮಹತ್ವವನ್ನು ಸಾರುವಂಥ ಬೀದಿ ನಾಟಕಗಳು, ಜನ ಜಾಗೃತಿ ಜಾಥಾದಂತಹ ಕಾರ್ಯಕ್ರಮಗಳನ್ನು ಮಾಡಬಹುದು.
- ಎಲ್ಲ ಸರ್ಕಾರಿ ಹಿರಿಯ ಶಾಲೆಗಳಲ್ಲಿ 'ಮೀನಾ' ಎಂಬ ಕ್ರಿಯಾಶೀಲ ತಂಡವೊಂದಿದೆ. ಅದರ ಸಹಾಯದಿಂದ ಮನೆಮನೆಗೆ ತೆರಳಿ ಪೋಷಕರ ಮನವೊಲಿಸಬಹುದು.
- ಗ್ರಾಮದ ಗಣ್ಯರಿಂದ ದಾನ ದತ್ತಿ ಪಡೆದು ಶಾಲಾ ಸಂಪನ್ಮೂಲಗಳನ್ನು ವೃದ್ಧಿಸಬಹುದು.
- ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸಲು ಡಿಜಿಟಲ್ ತಂತ್ರಜ್ಞಾನವನ್ನು ತರಗತಿಯಲ್ಲಿ ಬಳಕೆ ಮಾಡಬಹುದು.
- ಪೋಷಕರು ತಂತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಶಿಕ್ಷಕರೊಂದಿಗೆ ಚರ್ಚಿಸಬಹುದಾಗಿದೆ.
ಅದು ಸರಿಯಿಲ್ಲ.. ಇದು ಸರಿಯಿಲ್ಲ.. ಆ ಶಾಲೆ ಹಾಗೆ.. ಈ ಶಾಲೆ ಹೀಗೆ. ಎಂದೆಲ್ಲ ದೂರದೇ ಕೇವಲ ನಮ್ಮ ಶಾಲೆ, ನಮ್ಮ ವಿದ್ಯಾರ್ಥಿಗಳು ಹಾಗೂ ನಮ್ಮ ಕಲಿಕಾ ಚಟುವಟಿಕೆಗಳ ಬಗ್ಗೆ ಯೋಚಿಸುವುದು ಉತ್ತಮ ಶಿಕ್ಷಕರ ಲಕ್ಷಣ. ವಿದ್ಯಾರ್ಥಿಗಳ ಉತ್ತಮ ನಾಳೆ ಶಿಕ್ಷಕರ ಕೈಯ್ಯಲ್ಲಿದೆ. ಸಾಧ್ಯವಾದರೆ ಅದನ್ನು ಅತ್ತ್ಯುತ್ತಮವಾಗಿಸೋಣ.
--- ಸಚಿನ್ ಕುಮಾರ ಬಿ.ಹಿರೇಮಠ
--- ಸಚಿನ್ ಕುಮಾರ ಬಿ.ಹಿರೇಮಠ
No comments:
Post a Comment