Sunday, 30 November 2014
Friday, 31 October 2014
ರಾಷ್ಟ್ರೀಯ ಏಕತಾ ದಿವಸ ಆಚರಣೆ
ಇಂದು ದಿ.೩೧.೧೦.೨೦೧೪ ರಂದು ನಮ್ಮ ಕೊಡಚಿ ಶಾಲೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಜನ್ಮದಿನ ಅಂಗವಾಗಿ 'ರಾಷ್ಟ್ರೀಯ ಏಕತಾ ದಿವಸ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ದಾರ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆದರ್ಶಗಳನ್ನು ಹಾಗೂ ಅವರು ಏಕತೆಗಾಗಿ ನಡೆಸಿದ ಹೋರಾಟವನ್ನು ವಿದ್ಯಾರ್ಥಗಳಿಗೆ ತಿಳಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು .
ಈ ಆಚರಣೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಎಲ್ಲ ಸಹ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Thursday, 23 October 2014
Monday, 13 October 2014
ಯೋಜನಾ ಕಾರ್ಯಗಳು ; ಒಂದು ಪೂರಕ ಕಲಿಕೆ
ವಿಜ್ಞಾನ ಕಲಿಕೆಗೆ ನಿರರ್ಗಳ ಬೋಧನಿಯೊಂದೆ ಸಾಕಾಗುವುದಿಲ್ಲ. ಶಿಕ್ಷಕರ ಜ್ಞಾನ, ಸಮರ್ಪಣೆ ಜೊತೆಗೆ ಯೋಜನಾ ಕಾರ್ಯಗಳು ಮಹತ್ತರ ಪಾತ್ರವಹಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಸ್ವತಃ ಕಲಿಯುವುದರಿಂದ ಕಲಿಕೆ ಬಲಗೊಳ್ಳುವುದಲ್ಲದೆ ಉತ್ಸಾಹದಿಂದ ಕಾರ್ಯ ಪ್ರವೃಟಿಟರಾಗುವೌತೆ ಮಾಡುತ್ತದೆ.
ಯೋಜನಾ ಕಾರ್ಯಗಳ ಪ್ರಾಮುಖ್ಯತೆ:
1. ವಿದ್ಯಾರ್ಥಿಗಳ ಗಮನ ಹಾಗೂ ಏಕಾಗ್ರತೆಯನ್ನು ಹಿಡಿದಿಡುತ್ತವೆ.
2. ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತವೆ.
3. ವೈಜ್ಞಾನಿಕ ಚಿಂತನೆ ಬೆಳೆಸುತ್ತವೆ.
4. ಗುಂಪಿನಲ್ಲಿ ಮಾಡುವ ಚಟುವಟಿಕೆಗಳು ಸಹಕಾರ ಗುಣವನ್ನು ಬೆಳೆಸುತ್ತವೆ.
5. ತರಗತಿಯಾಚೆಗೂ ಕಲಿಕೆಯನ್ನು ಪ್ರೇರೇಪಿಸುತ್ತವೆ.
ಶಿಕ್ಷಕರು ಏನೇನು ಮಾಡಬಹುದು?
ಶಿಕ್ಷಕರು ಯೋಜನಾ ಕಾರ್ಯಗಳಲ್ಲಿ ಕೇವಲ ಅನುಕೂಲಿಗಳಾಗಿ ಮಾರ್ಗದರ್ಶನ ನೀಡಬೇಕು. ಆದರೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಗೆ ಅಥವಾ ಸಂಶೋಧನೆಗೆ ಎಡೆ ಮಾಡಿಕೊಡುವಂತ ವಿಷಯಗಳನ್ನು ನೀಡಬೇಕು.
ತೀರಾ ಅಪಾಯಕಾರಿಯಾದ ಅಥವಾ ಕಷ್ಟಕರವಾದ ವಿಷಯಗಳನ್ನು ನೀಡದೆ ಸುಲಭವಾಗಿ ಹಾಗೂ ಸ್ಪಷ್ಟವಾಗಿರುವ ವಿಷಯಗಳನ್ನು ನೀಡಬೇಕು.
ಪ್ರದರ್ಶನ:
ಯೋಜನಾ ಕಾರ್ಯಗಳು ಕೇವಲ ದಾಖಲೆಗಳಾಗಿ ಮಾತ್ರವಾಗದೆ ಅವು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಕನ್ನಡಿಯಾಗಿರಬೇಕು. ಪೋಷಕರಿಗೂ ಪ್ರದರ್ಶನ ಮಾಡುವುದರಿಂದ ಉಳಿದವರಿಗೂ ಸ್ಫೂರ್ತಿಯಾಗುತ್ತದಿ.
ಒಟ್ಟಿನಲ್ಲಿ ಕಲಿಕೆಯ ಜೊತೆಗೆ ಪೂರಕ ಕಾರ್ಯಗಳು ಕಲಿಕೆಯನ್ನು ಉತ್ತೇಜಿಸುತ್ತವೆ.
--ಸಚಿನ್ ಕುಮಾರ
ಒಒಎಸ್ ಸಿ ಮಗುವಿನ ದಾಖಲು..
ಶಾಲೆಯಿಂದ ಹೊರಗುಳಿದ.ಮಗುವಾದ ಮಲ್ಲಿಕಾರ್ಜುನ ಮರೆಪ್ಪ ಅವರ ಮನೆಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭೇಟ್ ನೀಡಿ ದಾಖಲು ಮಾಡಿಕೊಳ್ಳಲಾಯಿತು.
Saturday, 11 October 2014
Thursday, 2 October 2014
ಸ್ವಚ್ಛ ಭಾರತ ; ಶ್ರೇಷ್ಠ ಭಾರತ
ಈ ಸಲದ ಗಾಂಧೀ ಜಯಂತಿ ತುಂಬಾ ವಿಶೇಷವಾಗಿತ್ತು. ಮಹಾತ್ಮ ಗಾಂಧೀ ಅವರ ಸ್ವಚ್ಛ ಭಾರತ ಕಲ್ಪನೆಗೆ ಗರಿ ಮೂಡಿತ್ತು. ಬಿಳಿಗ್ಗೆ 8.55ಕ್ಕೆ ಶಾಲೆಯ ಆವರಣದಲ್ಲಿ ಎಲ್ಲ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು ಹಳೆಯ ವಿದ್ಯಾರ್ಥಿಗಳು ಸೇರಿ ಶಾಲಾ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಸ್ವಚ್ಛಗೊಳಿಸಲಾಯಿತು. ಬಳಿಕ.ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮದಿನವನ್ನು ಆಚರಿಸಲಾಯಿತು. ಆಚರಣೆಯ ಒಂದಿಷ್ಟು ಫೋಟೊಗಳು..
Saturday, 6 September 2014
ಮೋದಿ ಮಾತು...(ಶಿಕ್ಷಕರ ದಿನ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ)
ಮಧ್ಯಾಹ್ನ ಸರಿಯಾಗಿ 3.00 ಗಂಟೆಗೆ ಪ್ರಧಾನ ಮಂತ್ರಿಯವರ ವಿದ್ಯಾರ್ಥಿಗಳೊಂದಿಗಿನ ನೇರ ಸಂವಾದವನ್ನು ಎಲ್ಲಾ ಸಹಶಿಕ್ಷಕರು SDMC ಸದಸ್ಯರು, ಗ್ರಾಮದ ಪಾಲಕರು ಹಾಗೂ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಲಾಯಿತು.
ಇಜೇರಿ ವಲಯದ ಪ್ರತಿಭಾ ಕಾರಂಜಿ 04-09-2014
ದಿ.04-09-2014ರಂದು ಇಜೇರಿ ವಲಯದ ಪ್ರತಿಭಾ ಕಾರಂಜಿಯು ಚಿಗರಳ್ಳಿ ಕ್ಯಾಂಪ್ ನ ರಾಜೀವ ಗಾಂಧಿ ಪ್ರೌಢ ಶಾಲೆಯಲ್ಲಿ ಜರುಗಿತು. ತಾ.ಪಂ ಅದ್ಯಕ್ಷರಾದ ಶ್ರೀ ಅಮೀರ್ ಹಮ್ಜಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ತಾ. ಪಂ ಸದಸ್ಯರಾದ ಶ್ರೀ ಹರಿಶಚಂದ್ರ ನಾಯಕ, ಮೈಬೂಬ ಅಲಿ, ತಾ.ಶಿ.ಸಂ ದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ, ಎನ್.ಜಿ.ಒ ದ ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ರಾ.ಶಿ.ಸಂ ಯ ಅದ್ಯಕ್ಷರಾದ ಶ್ರೀ ಶರಣಪ್ಪ ಬಡಿಗೇರ ಹಾಗೂ ವಲಯದ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
Monday, 1 September 2014
ಪ್ರತಿಭಾ ಕಾರಂಜಿ ;
ಚಿಣ್ಣರ ಪ್ರತಿಭೆಗೆ ಕನ್ನಡಿ ಎಂಬಂತೆ.ಶುರುವಾದ ಪ್ರತಿಭಾ ಕಾರಂಜಿ 2002-03ರಲ್ಲಿ ರಾಜ್ಯಾದ್ಯಂತ ಪ್ರಾರಂಭವಾಯಿತು. 2014-15ನೆಯ ಸಾಲಿನ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ನಮ್ಮ ಶಾಲೆಯಲ್ಇ ದಿ.18.08.2014 ರಂದು ನಡೆಯಿತು. ಕಾರ್ಯಕ್ರಮದ ಆಧ್ಯಕ್ಶಊತೆಯನ್ನು ಶಾಲಾ ಮುಖ್ಯಗುರುಗಲಾದ ಶ್ರೀ ಹರಿಶ್ಚಂದ್ರ ಇವರು ವಹಿಸಿಕೊಂಡಿದ್ದರು. ಗ್ರಾಮದ ಗಣ್ಯರಾದ ಶ್ರೀ ಮಾನಪ್ಪ ಪೂಜಾರಿ ಅ
ರು ಮುಖ್ಯ ಅತಿಥಿಯಾಗೆದ್ದರು. ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ.ಸ್ಫರ್ಧೆ ನಡೆದವು. ವಿಜೀತರಿಗೆ ವಿವಿಧ ಪ್ರೋತ್ಸಾಹಕವನ್ನು ನೀಡಿ ಕಾರ್ಯಕ್ರಮಕ್ಕೆ ಮಂಗಲ ಹಾಡಲಾಯಿತು.
Saturday, 16 August 2014
ಸಂಭ್ರಮದ ಸ್ವಾತಂತ್ರ್ಯೋತ್ಸವ..
ಇಂದು ಸ.ಹಿ.ಪ್ರಾ ಶಾಲೆ ಕೊಡಚಿಯಲ್ಲಿ 68ನೆಯ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಬೆಳಿಗ್ಗೆ 7ಗಂಟೆಗೆ ಎಲ್ಲ ವಿದ್ಯಾರ್ಥಿಗಳು ,ಎಸ್ ಡಿ ಎಂ ಸಿ ಹಾಗೂ ಶಿಕ್ಷಕರು ಸೇರಿ ಪಥಸಂಚಲನ ನಡೆಸಿದರು.
ಬಳಿಕ 7.30ಕ್ಕೆ ಧ್ವಜಾರೋಹಣವನ್ನು ಮುಖ್ಯಗುರುಗಳು ನೆರವೇರಿಸಿದರು.
ನಂತರ ವಿವಿಧ ಸಾಂಸ್ಕ್ಋತಿಕ ಕಾರ್ಯಕ್ರಮಗಳು ಜರುಗಿದವು.
ಮಕ್ಕಳಿಗೆ ಗ್ರಾಮದ ಯುವಕರಾದ ಬಸವಂತ್ರಾಯ, ರಾಜು, ವಿಜಯಕುಮಾರ ಹಾಗೂ ಅಂಗನವಾಡಿ ಶಿಕ್ಷಕಿಯರು ನೋಟ್ ಪುಸ್ತಕಗಳನ್ನು ನೀಡಿದರು.
Friday, 25 April 2014
Tuesday, 22 April 2014
ಬನ್ನಿ ಕಲಿಸೋಣ..
ಶಿಕ್ಷಕರು ಹೇಗಿರಬೇಕು?
ಸರ್ಕಾರಿ ಶಾಲೆಗಳಲ್ಲಿ 2002ರ ನಂತರ ನೇಮಕಗೊಂಡ ಶಿಕ್ಷಕರು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಬಂದವರಾಗಿದ್ದರೂ ಸಾಕಷ್ಟು ಪರಿಣಿತಿಯುಳ್ಳವರೆಂದು ನಂಬಲಾದಿದೆ. ಹಾಗಂತ ಮೊದಲಿದ್ದ ಶಿಕ್ಷಕರೇನೂ ಕಮ್ಮಿ ಇಲ್ಲ.ಆದರೆ ಖಾಸಗಿ ಶಾಲೆಗಳಲ್ಲಿ 1500ಕ್ಕೊ, 2000ಕ್ಕೊ ದುಡಿಯುವ ಶಿಕ್ಷಕರು ಮಾತ್ರ ಪರಿಣಾಮಕಾರಿಯಾಗಿ ಕಲಿಸುತ್ತಾರೆ ಎಂಬ ವಾದ ಒಂದೆಡೆ ಇದೆ. ಸರ್ಕಾರಿ ಶಿಕ್ಷಕರಿಗೆ ಕಲಿಸಲು ಸಮಯ ಸಿಗದಷ್ಟೂ ಕಾರಕೂನ ಕೆಲಸಗಳಿವೆ ಎಂಬ ವಾದ ಇನ್ನೊಂದೆಡೆ ಇದೆ. ಇದನ್ನೆಲ್ಲ ಒಂದು ಕಡೆ ಸರಿಸಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನೋಡೋಣ.
- ಗ್ರಾಮದ ಮನೆಮನೆಗೂ ಹೋಗಿ ಶಿಕ್ಷಣದ ಮಹತ್ವವನ್ನು ಸಾರುವಂಥ ಬೀದಿ ನಾಟಕಗಳು, ಜನ ಜಾಗೃತಿ ಜಾಥಾದಂತಹ ಕಾರ್ಯಕ್ರಮಗಳನ್ನು ಮಾಡಬಹುದು.
- ಎಲ್ಲ ಸರ್ಕಾರಿ ಹಿರಿಯ ಶಾಲೆಗಳಲ್ಲಿ 'ಮೀನಾ' ಎಂಬ ಕ್ರಿಯಾಶೀಲ ತಂಡವೊಂದಿದೆ. ಅದರ ಸಹಾಯದಿಂದ ಮನೆಮನೆಗೆ ತೆರಳಿ ಪೋಷಕರ ಮನವೊಲಿಸಬಹುದು.
- ಗ್ರಾಮದ ಗಣ್ಯರಿಂದ ದಾನ ದತ್ತಿ ಪಡೆದು ಶಾಲಾ ಸಂಪನ್ಮೂಲಗಳನ್ನು ವೃದ್ಧಿಸಬಹುದು.
- ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸಲು ಡಿಜಿಟಲ್ ತಂತ್ರಜ್ಞಾನವನ್ನು ತರಗತಿಯಲ್ಲಿ ಬಳಕೆ ಮಾಡಬಹುದು.
- ಪೋಷಕರು ತಂತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಶಿಕ್ಷಕರೊಂದಿಗೆ ಚರ್ಚಿಸಬಹುದಾಗಿದೆ.
--- ಸಚಿನ್ ಕುಮಾರ ಬಿ.ಹಿರೇಮಠ