Saturday, 24 December 2011

ದರ್ಪಣಗಳು ; ಒಂದು ಪ್ರಾಯೋಗಿಕ ಕಲಿಕೆ


ರ್ಪಣಗಳಲ್ಲಿ ಉಂಟಾಗುವ ಪ್ರತಿಬಿಂಬಗಳ ಬಗ್ಗೆ ಅಂದು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿತ್ತು. ಅದಕ್ಕೆಂದೇ ನಿಮ್ನ ದರ್ಪಣ, ಸ್ಟ್ಯಾಂಡ್, ಬೇಸ್ ಬೋರ್ಡ್ ಮೇಣದ ಬತ್ತಿ ಪರದೆ ಎಲ್ಲವನ್ನು ಸಿದ್ಧಪಡಿಸಿಕೊಂಡು ತರಗತಿಗೆ ಹೋದೆ.

 ನಿಮ್ನ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬಗಳನ್ನು ಪ್ರಯೋಗ ಮಾಡಿ ತೋರಿಸಿದಾಗ ವಿದ್ಯಾರ್ಥಿಗಳಲ್ಲಿ ಎಲ್ಲಿಲ್ಲದ ಖುಷಿ.
 ಸತ್ಯ ಪ್ರತಿಬಿಂಬ ಮಿಥ್ಯ ಪ್ರತಿಬಿಂಬಗಳ ನಡುವಿನ ಕನ್ ಫ್ಯೂಷನ್ ಗಳೆಲ್ಲ ಅಂದು ದೂರವಾದವು. ಪ್ರತಿಬಿಂಬವನ್ನು ಪರದೆಯ ಮೇಲೆ ಹಿಡಿದ ವಿದ್ಯಾರ್ಥಿಗಳು ಯಾವುದೋ ಅದಮ್ಯವಾದ ಸಾಧನೆ ಮಾಡಿದ ಖುಷಿಯಲ್ಲಿದ್ದರು.
 ಗಂಡು ಮಕ್ಕಳಂತೂ ಪದೇ ಪದೇ ಪ್ರತಿಬಿಂಬವನ್ನು ಹಿಡಿದು ತಮ್ಮ ಸಂಶಯಗಳನ್ನೆಲ್ಲ ದೂರ ಮಾಡಿಕೊಂಡರು
 ನಿಮ್ನ ದರ್ಪಣದ ಅನ್ವಯಿಕಗಳು ಬಹಳವಿರುವದರಿಂದ ಈ ಪ್ರಯೋಗ ಅವರಲ್ಲಿ ವೈಜ್ಞಾಇಕ ಮನೋಭಾವನೆಯನ್ನು ಮೋಡಿಸಿತೆನ್ನಬಹುದು.
 ಪ್ರಧಾನ ಅಕ್ಷ, ದರ್ಪಣ ಧ್ರುವ, ಪ್ರಧಾನ ಸಂಗನ, ಸಂಗಮ ಬಿಂದು ಈ ಎಲ್ಲ ಪರಿಕಲ್ಪನೆಗಳನ್ನು ಅಷ್ಟು ಸುಲಭವಾಗಿ ಕಲಿಸಲಾಗುವುದಿಲ್ಲ. ಆದರೆ ಈ ಪ್ರಯೋಗ ಅದನ್ನೆಲ್ಲ ಪರಿಹರಿಸಿತು.







--ಸಚಿನ್ ಕುಮಾರ ಬಿ.ಹಿರೇಮಠ

No comments:

Post a Comment