Saturday, 10 January 2015

'ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ' ಸಮಾರಂಭ : 09-01-2015

ಇಂದು ದಿನಾಂಕ 09-01-2015ರಂದು ನಮ್ಮ ಕೊಡಚಿ ಶಾಲೆಯಲ್ಲಿ 'ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ' ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು.   ಸಮಾರಂಭವನ್ನು ಯಾಳವಾರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಪರವಾಗಿ ಶ್ರೀ ಮಾನಪ್ಪ ಅವರು, ಕಾರ್ಯದರ್ಶಿಗಳಾದ ಶ್ರೀ ಕಾಸಯ್ಯಅವರು ಹಾಗೂ ಇಜೇರಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಶ್ರೀ ಮಾನಪ್ಪ್ ಪೂಜಾರಿ, ಶ್ರೀ ಯಲ್ಲಪ್ಪಗೌಡ ಮಾಲಿ ಪಾಟೀಲ್, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಶ್ರೀ ಮರೆಪ್ಪ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು) ಯಾಳವಾರದ ಮುಖ್ಯಗುರುಗಳಾದ ಶ್ರೀ ಅಫ್ಸರ್ ಮಿಯಾ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೀಗರಥಹಳ್ಳಿಉ ಮುಖ್ಯಗುರುಗಳಾದ ಶ್ರೀ ಇಬ್ರಾಹಿಮ್ ಹಾಗೂ ಗ್ರಾಮದ ವಿವಿಧ ಸಂಘದ ಪದಾಧಿಕಾರಿಗಳು,ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಸಕ್ತರು ಭಾಗವಹಿಸಿದ್ದರು. ಶಿಕ್ಷಕರಾದ ಶ್ರೀ ಮಂಜುನಾಥ ಎಸ್.ಜೆ ಅವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೆ ಸ್ವಾಗತ ಕೋರಿದರು. ಶಿಕ್ಷಕರಾದ ಶ್ರೀ ಸಚಿನ್ ಕುಮಾರ ಹಿರೇಮಠ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ.ಸಂ.ವ್ಯಕ್ತಿಗಳಾದ ಶ್ರೀ ಅಯ್ಯಣ್ಣ ದೇಸಾಯಿಯವರು ಸಭೆಯ ಗುರಿ ಮತ್ತು ಉದ್ಧೇಶಗಳನ್ನು ವಿವರಿಸಿದರು. ಬಳಿಕ ಎಲ್ಲ ಭಾಗೀದಾರರನ್ನು 4 ಗುಂಪುಗಳನ್ನು ಮಾಡಿ ಶಾಲೆಯಲ್ಲಿರುವ ಸೌಲಭ್ಯಗಳು ಹಾಗೂ ಅವಶ್ಯಕ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಶ್ರೀ ಯಲ್ಲಪ್ಪ ಗೌಡರು ಹಾಗೂ ಶ್ರೀ ಚಾಂದ್ ಪಾಶಾ ಅವರು ಶಾಲೆಗೆ ಕ್ರಮವಾಗಿ 100 ಪ್ಲೇಟ್ಗಳನ್ನು ಹಾಗೂ 100 ಲೋಟಗಳನ್ನು ದಾನವಾಗಿ ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಕಾರ್ಯದರ್ಶಿಗಳು ಶಾಲೆಗೆ ಒಂದು ಕಂಪ್ಯೂಟರ್ ನೀಡುವುದಾಗಿ ಒಪ್ಪಿಕೊಂಡರು.



Friday, 31 October 2014

ರಾಷ್ಟ್ರೀಯ ಏಕತಾ ದಿವಸ ಆಚರಣೆ

ಇಂದು ದಿ.೩೧.೧೦.೨೦೧೪ ರಂದು ನಮ್ಮ ಕೊಡಚಿ ಶಾಲೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಜನ್ಮದಿನ ಅಂಗವಾಗಿ 'ರಾಷ್ಟ್ರೀಯ ಏಕತಾ ದಿವಸ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ದಾರ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಆದರ್ಶಗಳನ್ನು ಹಾಗೂ ಅವರು ಏಕತೆಗಾಗಿ ನಡೆಸಿದ ಹೋರಾಟವನ್ನು ವಿದ್ಯಾರ್ಥಗಳಿಗೆ ತಿಳಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು .
  ಈ ಆಚರಣೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು,  ಎಲ್ಲ ಸಹ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಹಾಜರಿದ್ದರು.

Monday, 13 October 2014

ಯೋಜನಾ ಕಾರ್ಯಗಳು ; ಒಂದು ಪೂರಕ ಕಲಿಕೆ

ವಿಜ್ಞಾನ ಕಲಿಕೆಗೆ ನಿರರ್ಗಳ ಬೋಧನಿಯೊಂದೆ ಸಾಕಾಗುವುದಿಲ್ಲ. ಶಿಕ್ಷಕರ ಜ್ಞಾನ, ಸಮರ್ಪಣೆ ಜೊತೆಗೆ ಯೋಜನಾ ಕಾರ್ಯಗಳು ಮಹತ್ತರ ಪಾತ್ರವಹಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಸ್ವತಃ ಕಲಿಯುವುದರಿಂದ ಕಲಿಕೆ ಬಲಗೊಳ್ಳುವುದಲ್ಲದೆ ಉತ್ಸಾಹದಿಂದ ಕಾರ್ಯ ಪ್ರವೃಟಿಟರಾಗುವೌತೆ ಮಾಡುತ್ತದೆ.
ಯೋಜನಾ ಕಾರ್ಯಗಳ ಪ್ರಾಮುಖ್ಯತೆ:
1. ವಿದ್ಯಾರ್ಥಿಗಳ ಗಮನ ಹಾಗೂ ಏಕಾಗ್ರತೆಯನ್ನು ಹಿಡಿದಿಡುತ್ತವೆ.
2. ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತವೆ.
3. ವೈಜ್ಞಾನಿಕ ಚಿಂತನೆ ಬೆಳೆಸುತ್ತವೆ.
4. ಗುಂಪಿನಲ್ಲಿ ಮಾಡುವ ಚಟುವಟಿಕೆಗಳು ಸಹಕಾರ ಗುಣವನ್ನು ಬೆಳೆಸುತ್ತವೆ.
5. ತರಗತಿಯಾಚೆಗೂ ಕಲಿಕೆಯನ್ನು ಪ್ರೇರೇಪಿಸುತ್ತವೆ.

ಶಿಕ್ಷಕರು ಏನೇನು ಮಾಡಬಹುದು?
ಶಿಕ್ಷಕರು ಯೋಜನಾ ಕಾರ್ಯಗಳಲ್ಲಿ ಕೇವಲ ಅನುಕೂಲಿಗಳಾಗಿ ಮಾರ್ಗದರ್ಶನ ನೀಡಬೇಕು. ಆದರೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಗೆ ಅಥವಾ ಸಂಶೋಧನೆಗೆ ಎಡೆ ಮಾಡಿಕೊಡುವಂತ  ವಿಷಯಗಳನ್ನು ನೀಡಬೇಕು.
ತೀರಾ ಅಪಾಯಕಾರಿಯಾದ ಅಥವಾ ಕಷ್ಟಕರವಾದ ವಿಷಯಗಳನ್ನು ನೀಡದೆ ಸುಲಭವಾಗಿ ಹಾಗೂ ಸ್ಪಷ್ಟವಾಗಿರುವ ವಿಷಯಗಳನ್ನು ನೀಡಬೇಕು.

ಪ್ರದರ್ಶನ:
ಯೋಜನಾ ಕಾರ್ಯಗಳು ಕೇವಲ ದಾಖಲೆಗಳಾಗಿ ಮಾತ್ರವಾಗದೆ ಅವು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಕನ್ನಡಿಯಾಗಿರಬೇಕು. ಪೋಷಕರಿಗೂ ಪ್ರದರ್ಶನ ಮಾಡುವುದರಿಂದ ಉಳಿದವರಿಗೂ ಸ್ಫೂರ್ತಿಯಾಗುತ್ತದಿ.

ಒಟ್ಟಿನಲ್ಲಿ ಕಲಿಕೆಯ ಜೊತೆಗೆ ಪೂರಕ ಕಾರ್ಯಗಳು ಕಲಿಕೆಯನ್ನು ಉತ್ತೇಜಿಸುತ್ತವೆ.

--ಸಚಿನ್ ಕುಮಾರ

ಒಒಎಸ್ ಸಿ ಮಗುವಿನ ದಾಖಲು..

ಶಾಲೆಯಿಂದ ಹೊರಗುಳಿದ.ಮಗುವಾದ ಮಲ್ಲಿಕಾರ್ಜುನ ಮರೆಪ್ಪ ಅವರ ಮನೆಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭೇಟ್ ನೀಡಿ ದಾಖಲು ಮಾಡಿಕೊಳ್ಳಲಾಯಿತು.

Thursday, 2 October 2014

ಸ್ವಚ್ಛ ಭಾರತ ; ಶ್ರೇಷ್ಠ ಭಾರತ

ಈ ಸಲದ ಗಾಂಧೀ ಜಯಂತಿ ತುಂಬಾ ವಿಶೇಷವಾಗಿತ್ತು. ಮಹಾತ್ಮ ಗಾಂಧೀ ಅವರ ಸ್ವಚ್ಛ ಭಾರತ ಕಲ್ಪನೆಗೆ ಗರಿ ಮೂಡಿತ್ತು. ಬಿಳಿಗ್ಗೆ 8.55ಕ್ಕೆ ಶಾಲೆಯ ಆವರಣದಲ್ಲಿ ಎಲ್ಲ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು ಹಳೆಯ ವಿದ್ಯಾರ್ಥಿಗಳು ಸೇರಿ ಶಾಲಾ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಸ್ವಚ್ಛಗೊಳಿಸಲಾಯಿತು. ಬಳಿಕ.ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮದಿನವನ್ನು ಆಚರಿಸಲಾಯಿತು. ಆಚರಣೆಯ ಒಂದಿಷ್ಟು ಫೋಟೊಗಳು..

Saturday, 6 September 2014

ಮೋದಿ ಮಾತು...(ಶಿಕ್ಷಕರ ದಿನ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ)

ದಿ.05-09-2014ರಂದು ಸರರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಚಿಯಲ್ಲಿ ಶಿಕ್ಷಕರ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಮೆಚ್ಚಿನ ಶಿಕ್ಷಕರಿಗೆ ಕಾಣಿಕೆಗಳನ್ನು ಸಲ್ಲಿಸುವುದರ ಮೂಲಕ ಗೌರವ ಸೂಚಿಸಿದರು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಹಾಜರಿದ್ದು ಶಿಕ್ಷಕರ ದಿನದ ಅಂಗವಾಗಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಹಾಗೂ ಅವರ ಉದಾತ್ತ ಗುಣಗಳನ್ನು ಹಂಚಿಕೊಳ್ಳುವುದರ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಎಲ್ಲ ವಿದ್ಯಾರ್ಥಿಗಳು ರುಚಿಯಾದ ಪಾಯಸ ಸವಿದು ತರಗತಿಗಳಿಗೆ ತೆರಳಿದರು.

           ಮಧ್ಯಾಹ್ನ ಸರಿಯಾಗಿ 3.00 ಗಂಟೆಗೆ ಪ್ರಧಾನ ಮಂತ್ರಿಯವರ ವಿದ್ಯಾರ್ಥಿಗಳೊಂದಿಗಿನ ನೇರ ಸಂವಾದವನ್ನು ಎಲ್ಲಾ ಸಹಶಿಕ್ಷಕರು SDMC ಸದಸ್ಯರು, ಗ್ರಾಮದ ಪಾಲಕರು ಹಾಗೂ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಲಾಯಿತು.















ಇಜೇರಿ ವಲಯದ ಪ್ರತಿಭಾ ಕಾರಂಜಿ 04-09-2014

ದಿ.04-09-2014ರಂದು ಇಜೇರಿ ವಲಯದ ಪ್ರತಿಭಾ ಕಾರಂಜಿಯು ಚಿಗರಳ್ಳಿ ಕ್ಯಾಂಪ್ ನ ರಾಜೀವ ಗಾಂಧಿ ಪ್ರೌಢ ಶಾಲೆಯಲ್ಲಿ ಜರುಗಿತು. ತಾ.ಪಂ ಅದ್ಯಕ್ಷರಾದ ಶ್ರೀ ಅಮೀರ್ ಹಮ್ಜಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ತಾ. ಪಂ ಸದಸ್ಯರಾದ ಶ್ರೀ ಹರಿಶಚಂದ್ರ ನಾಯಕ, ಮೈಬೂಬ ಅಲಿ, ತಾ.ಶಿ.ಸಂ ದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ, ಎನ್.ಜಿ.ಒ ದ ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ರಾ.ಶಿ.ಸಂ ಯ ಅದ್ಯಕ್ಷರಾದ ಶ್ರೀ ಶರಣಪ್ಪ ಬಡಿಗೇರ ಹಾಗೂ ವಲಯದ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.