Sunday, 16 June 2013

ಏನಿದು ಸ್ಮಾರ್ಟ್ ಕ್ಲಾಸ್..?

ಅದೊಂದು ವಿಶೇಷವಾದ ತರೆಗತಿ. ಅಲ್ಲಿ ಶಿಕ್ಷಕರು ಕೇವಲ ಅನುಕೂಲಿಗಳು(facilitators) ಮಾತ್ರ. ಅಲ್ಲಿನ ವಿದ್ಯಾರ್ಥಿಗಳು ಸಹ ಅಷ್ಟೇ..ಗದ್ದಲ ಮಾಡದೇ ಅವಧಾನ ವಿಕೇಂದ್ರಿಕರಿಸದೇ ತರಗತಿಯ ಬೋರ್ಡಿನತ್ತ ತಮ್ಮ ಮನಸ್ಸು ಮತ್ತು ದೃಷ್ಠಿಯನ್ನು ನೆಟ್ಟಿರುತ್ತಾರೆ. ಆಕಳಿಕೆ, ನಿದ್ದೆ ಅಥವಾ ಬೇಜಾರುತನಕ್ಕೆ ಆ ತರಗತಿಯಲ್ಲಿ ಆಸ್ಪದವಿಲ್ಲ. ಶಿಕ್ಷಕರು ಕಲಿಸಬೇಕಾದ ಪಠ್ಯ ವಿಷಯವೆಲ್ಲ ಕಪ್ಪು ಹಲಗೆಯ ಬದಿಗಿರುವ ವಿಶೇಷ ಪರದೆಯ ಮೇಲೆ ಪ್ರಕ್ಷೇಪಿತವಾಗುತ್ತ ಹೋಗುತ್ತದೆ. ಶಿಕ್ಷಕರು ಆ ಪಠ್ಯಾಂಶಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಪೂರಕ ಅಂಶಗಳನ್ನು ಹಾಗೂ ಉದಾಹಗರಣೆಗಳನ್ನು ವಿವರಿಸುತ್ತ ವಿಶ್ಲೇಷಣೆ ಮಾಡುತ್ತಾರೆ. ಇತಿಹಾಸ, ಭೂಗೋಳ, ಗಣಿತ, ವಿಜ್ಞಾನದಂತಹ ಕೋರ್ ವಿಷಯಗಳಷ್ಟೇ ಅಲ್ಲದೇ ಭಾಷಾ ವಿಷಯಗಳಲ್ಲಿನ ಅಮೂರ್ತ ಪರಿಕಲ್ಪನೆಗಳೆಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂರ್ತ ರೂಪ ತಾಳುತ್ತವೆ. ಯಾವುದೇ ಗೊಂದಲಗಳು ವಿದ್ಯಾರ್ಥಿಗಳ ಮನಸ್ಸಿನಲ್ಲುಳಿಯದೇ ಎಲ್ಲ ಪಠ್ಯಾಂಶಗಳು ಮನವರಿಕೆಯಾಗುತ್ತ ಹೋಗುತ್ತವೆ. ಅದೇ ತರಗತಿಯಲ್ಲಿ ವಿದ್ಯಾರ್ಥಿಗಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಶಿಕ್ಷಕರು ಕೈಗೊಂಡು ಇಡೀ ತರಗತಿಯ ವಿದ್ಯಾರ್ಥಿಗಳಲ್ಲ್ಲಿ ಪರಿಣಾಮಕಾರಿಯಾದ ಕಲಿಕೆಯುಂಟಾಗುತ್ತದೆ. ಇಂಥ ವಿಶಿಷ್ಠವಾದ ತರಗತಿಯೇ ಸ್ಮಾರ್ಟ್ ಕ್ಲಾಸ್(smartclass).

          ಹೌದು..! ಇಮದು ಸುಮಾರು 33,000 ಸ್ಮಾರ್ಟ್ ಕ್ಲಾಸ್ ಹೊಂದಿರುವ ಶಾಲೆಗಳು ಇಡಿ ದೇಶದಾದ್ಯಂತ ನಮಗೆ ಕಾಣಸಿಗುತ್ತವೆ. ಎಜ್ಯುಕ್ಯಾಂಪ್ ಸ್ಮಾರ್ಟ್ ಕ್ಲಾಸ್ ಸೊಲ್ಯುಷನ್ಸ್ ಎಂಬ ಖಾಸಗಿ ಸಂಸ್ಥೆ ಈ ಸ್ಮಾರ್ಟ್ ಕ್ಲಾಸಿನ ರೂವಾರಿ. ಸ್ಮಾರ್ಟ್ ಕ್ಲಾಸ್ ನ ಮುಖ್ಯ ಉದ್ದೇಶವೆಂದರೆ ಪ್ರಸ್ತುತ ಶಿಕ್ಷಣದಲ್ಲಿ ಗುಣಾತ್ಮಕ ಕಲಿಕೆಗಾಗಿ ಬೋಧನಾ ವಿಧಾನಗಳನ್ನು ಡಿಜಿಟಲ್ ಮಾಧ್ಯಮವನ್ನಾಗಿಸುವುದು. ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ ಅವರ ಮೆಲಿನ ಭಾರ ಕಡಿಮೆ ಮಾಡಿ ವಿದ್ಯಾರ್ಥಿಗಳೇ ಸ್ವಮೌಲ್ಯಮಾಪನ ಮಾಡಿಕೊಳ್ಳುವಂತಹ ಸನ್ನೀವೇಶವನ್ನು ಸೃಷ್ಟಿಸಿ ಗುಣಾತ್ಮಕ ಕಲಿಕೆಯನ್ನುಂಟು ಮಾಡುವುದು.

ಸ್ಮಾರ್ಟ್ ಕ್ಲಾಸ್ ನಮ್ಮ ಸಾಂಪ್ರದಾಯಿಕ ತರಗತಿಗಳಿಗಿಂತ ಹೇಗೆ ಭಿನ್ನ..?
  ನಾವೆಲ್ಲ ಈಗ ನೋಡುತ್ತಿರುವ ತರಗತಿಗಳನ್ನೊಮ್ಮೆ ನೆನೆಪಿಸಿಕೊಳ್ಳಿ. ಬಾಷಾ ಶಿಕ್ಷಕರು ತರಗತಿ ಪ್ರವೇಶಿಸಿ ಗದ್ಯ ಅಥವಾ ಪದ್ಯದಲ್ಲಿನ ಕಠಿಣ ಪದಗಳನ್ನು ಹಾಗೂ ಅವುಗಳ ಅರ್ಥವನ್ನು ಬರೆಯಿಸಿ ಗಟ್ಟಿ ಓದು ಮೌನ ಓದು ಮಾಡಿಸಿ ಹೋಂವರ್ಕ್ ನೀಡುವ ಹೊತ್ತಿಗೆ 40 ನಿಮಿಷಗಳ ಅವಧಿ ಮೀರಿರುತ್ತದೆ. ಅಲ್ಲಿ ಭಾಷಾ ಕೌಶಲಗಳ ಬೆಳವಣಿಗೆಗೆ ಶಿಕ್ಷಕನಾದವನು ಹರಸಾಹಸ ಪಡಬೇಕು. ಇನ್ನು ಕೋರ್ ವಿಷಯಗಳ ಬೋಧನೆಯಲ್ಲೂ ಅಷ್ಟೇ.. ಶಿಕ್ಷಕ ಎಂತಹುದೇ ವಿಧಾನ ಬಳಸಿದರೂ ವಿದ್ಯಾರ್ಥಿಗಳ ಅವಧಾನ ವಿಕೇಂದ್ರೀಕರಣದಿಂದಾಗಿ  ಪರಿಣಾಮಕಾರಿಯಾದ ಕಲಿಕೆ ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಶಾಲಾ ತರಗತಿಗಳಲ್ಲಿ ಕಲಿಯುವವ(learner)- ಕಲಿಸುವವ(teacher)-- ಕಲಿಕಾ ವಾತಾವರಣ ಈ ಮೂರು ಅಂಶಗಳಲ್ಲಿ ಯಾವುದಾದರೂ ಒಂದಂಶದಲ್ಲಿ ಲೋಪವುಂಟಾಗುತ್ತದೆ. ಆದರೆ ಸ್ಮಾರ್ಟ್ ಕ್ಲಾಸ್ ನಲ್ಲಿ ಹೀಗಾಗಲ್ಲ. ಅಲ್ಲಿ ಕಪ್ಪು ಹಲಗಹೆಯ ಬದಿಯಲ್ಲೆ ಒಂದು ಪರದೆ(smart board)ಯಿರುತ್ತದೆ. ಅದರ ಮೇಲೆ ಚಿತ್ರ ಅಥವಾ ವಿಡಿಯೋ ಪ್ರದರ್ಶನಕ್ಕೆಂದೇ ಒಮದು ಅನುಸ್ಥಾಪಿತ ಕಾರ್ಯಕ್ರಮಗಳುಳ್ಳ ಪ್ರಕ್ಷೇಪಕ (projector) ಇರುತ್ತದೆ. ಶಿಕ್ಷಕರು ತಮಗೆ ಬೇಕಾದಾಗ ಪ್ರಕ್ಷೇಪಕವನ್ನು ಬಳಸಿಕೊಳ್ಳುವಂತಹ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿದ್ದು ಪುರಕ ಅಂಶಗಳನ್ನು ಅವರು ಕಪ್ಪು ಹಲಗೆಯ ಮೂಲಕ ಕಲಿಸುತ್ತ ಹೋಗುತ್ತಾರೆ.  ಉದಾಹರಣೆಗೆ ಮಾನವನ ಜೀರ್ಣಾಣಂಗವ್ಯೂಹದ ಬಗ್ಗೆ ನೀವು ಪಾಠ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಕಲಿಕಾ ಚಟುಚಟಿಕೆಯ ಭಾಗವಾಗಿ ಪೂರ್ವ ಅಅನುಸ್ಥಾಪಿಪ ವಿಡಿಯೋ ಪ್ರದರ್ಶನವಾಗುತ್ತದೆ. ಅದರಲ್ಲಿ ಮಾನವನ ದೇಹದ ಜೀರ್ಣಾಂಗವ್ಯೂಹದಲ್ಲಿನ ವಿವಿಧ ಅಂಗಗಳು ಹೇಗಿವೆ? ಎಲ್ಲಿವೆ? ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ವಿದ್ಯಾರ್ಥಿಗಳು ತ್ರಿ ಡಿ ಆಯಾಮದಲ್ಲಿ ನೋಡಿ ತಮ್ಮ ಗೊಂದಲಗಳಿಗೆ ತಾವೇ ಪರಿಹಾರ ಕಂಡೊಕೊಳ್ಳುತ್ತಾರೆ.ಹೀಗೆ ಅವರ ಅಮೂರ್ತ ಪರಿಕಲ್ಪನೆಗಳೆಲ್ಲ ಮೂರ್ತ ಪರಿಕಲ್ಪನೆಗಳಾಗುತ್ತವೆ. 

   ಮುಖ್ಯವಾಗಿ ಸ್ಮಾರ್ಟ್ ಕ್ಲಾಸ್ ನಲ್ಲಿ ಎರಡು ಬಗೆಯ ವ್ಯವಸ್ಥೆಗಳಿವೆ. ಮೊದಲನೆಯದು ಡಿಜಿಟಲ್ ಕಲಿಕಾ ವ್ಯವಸ್ಥೆ(digital learning system), ಎರಡನೆಯದು ತರಗತಿ ಪರಿವರ್ತನಾ ವ್ಯವಸ್ಥೆ(classroom transformation system). ಮೊದಲನೆಯದು ಬೋಧನಾ ಕಲಿಕಾ ವಿಧಾನವಾದರೆ ಎರಡನೆಯದು ತರಗತಿ ಮೌಲ್ಯಮಾಪನದ ವಿಧಾನವಾಗಿದೆ.

ಅಳವಡಿಕೆ ಹೇಗೆ..?
ಸ್ಮಾರ್ಟ್ ಕ್ಲಾಸ್ ನ್ನು ತರಗತಿಗೊಮದರಂತೆ ಅಥವಾ ಶಾಲೆಗೊಂದರಂತೆ ಅಳವಡಿಸಿಕೊಲ್ಳಬಹುದಾಗಿದೆ. ಇದರಲ್ಲಿ ಹಾರಡ್ ವೇರ್ ನ ಭಾಗವಾಗಿ ಪ್ರಿ ಇನ್ಸ್ಟಾಲ್ಡ್ ಪ್ರೊಜೆಕ್ಟರ್, ಅಂತರ್ಜಾಲ ಸಂಪರ್ಕ ಹಾಗೂ ಇತರ ಸಿಎಡಿ/ಡಿವಿಡಿಗಳು ಪಠ್ಯಾಂಶದ ರೂಪದಲ್ಲಿರುತ್ತವೆ. ನಾಮಿನಲ್ ಶುಲ್ಕ ಹಾಗೂ ಪ್ರತಿ ವಿದ್ಯಾರ್ಥಿಯ ತಲಾ ಶುಲ್ಕ ಸೇರಿ ಸ್ಥಾಪನಾ ಶುಲ್ಕವಿರುತ್ತದೆ. ಒಮದೊಂದು ವಿಇದ್ಯಾರ್ಥಿಗೂ ಯುಸರ್ ನೇಮ್ ಮತ್ತು ಪಾಸ್ ವರ್ಡ್ ನೀರಿ ಆನ್ ಲೈನ್ ಕಲಿಕೆಗೂ ಅವಕಾಶವಿದೆ.

  ಅದೇನೆ ಇರಲಿ..! ಸ್ಮಾರ್ಟ್ ಕ್ಲಾಸ್ ವೆಂಬುದು ಒಂದು ಡಿಜಿಟಲ್ ಬೋಧನಾ ವೊಧಾನವಷ್ಟೇ.. ನಮ್ಮ ಶಿಕ್ಷಕರು ತಮ್ಮ ಶಾಲೆಗಳಲ್ಲಿ www.educomponline.com ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ತರಗತಿಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಗಳ ಮೂಲಕ ಪ್ರದರ್ಶಿಸಿ ತಮ್ಮ ತರಗತಿಳನ್ನೂ ಸ್ಮಾರ್ಟ್  ಕ್ಲಾಸ್ ಆಗಿ ಪರಿವರ್ತಿಸಿಕೊಳ್ಬಹುದಾಗಿದೆ.


                -- ಸಚಿನ್ ಕುಮಾರ ಬಿ.ಹಿರೇಮಠ

Friday, 14 June 2013

ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲೊಮಾ ಕೋರ್ಸ್‌ಗಳು


ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಡಿಪ್ಲೊಮಾ ಕೋರ್ಸ್‌

ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ. ತೇರ್ಗಡೆಯಾದ ಹಾಗೂ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಸೀಮಿತವಾಗಿ ನಿಗದಿತ ನಮೂನೆಗಳಲ್ಲಿ ಪ್ರತಿವರ್ಷ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಪಶುಸಂಗೋಪನಾ ಡಿಪ್ಲೊಮಾದ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುವುದು. ಪ್ರತಿ ಪಾಲಿಟೆಕ್ನಿಕ್‌ಗೆ ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಪ್ರವೇಶ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿರುವ ಪಶುಸಂಗೋಪನಾ ಪಾಲಿಟೆಕ್ನಿಕ್, ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗಂಜಿಗಟ್ಟಿಯಲ್ಲಿ ಸ್ಥಾಪನೆಗೊಳ್ಳಿರುವ ಪಶುಸಂಗೋಪನಾ ಪಾಲಿಟೆಕ್ನಿಕ್‌ಗಳಲ್ಲಿ ಈ ಡಿಪ್ಲೋಮಾ ಕೋರ್ಸ್ ನಡೆಸಲಾಗುವುದು. ಗಂಜಿಗಟ್ಟಿಯ ಪಾಲಿಟೆಕ್ನಿಕ್ ಆರಂಭವಾಗುವವರೆಗೆ ಈ ವರ್ಷದ ತರಗತಿಗಳನ್ನು ಹಾವೇರಿಯ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುತ್ತಿದೆ.

ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಗಳಿಗೆ ಭೇಟಿ ನೀಡಿ:
http://kvafsu.kar.nic.in
http://kvafsu.kar.nic.in/content/downloads/Diploma_noti_appl_pros_2012.pdf


ತೋಟಗಾರಿಕೆ ಮೇಲ್ವಿಚಾರಕರ ಡಿಪ್ಲೊಮಾ ತರಬೇತಿ
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರಕಾರದ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪ್ರತಿವರ್ಷ ತೋಟಗಾರಿಕೆಯಲ್ಲಿ ಮೇಲ್ವಿಚಾರಕ ತರಬೇತಿಯ ಒಂದು ವರ್ಷದ ಡಿಪ್ಲೊಮಾ ಹಾಗೂ ಮೂರು ಮತ್ತು ಆರು ತಿಂಗಳ ಅವಧಿಯ ಉದ್ಯಮಶೀಲತ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಬೆಂಗಳೂರು, ಧಾರವಾಡ, ಬಾಗಲಕೋಟೆ ಮತ್ತು ಬಿಜಾಪುರಗಳಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ಈ ತರಬೇತಿ ನೀಡಲಾಗುತ್ತಿದ್ದು ತರಬೇತಿಯ ಅವಧಿಯಲ್ಲಿ 800 ರಿಂದ 1000 ರೂಪಾಯಿಗಳ ಸ್ಟೈಫಂಡ್ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: www.uhsbagalkot.edu.in


ಕೃಷಿ ವಿಜ್ಞಾನದಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು
ಬೆಂಗಳೂರು, ರಾಯಚೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿಯಲ್ಲಿ ಎರಡು ವರ್ಷದ ಡಿಪ್ಲೊಮಾ ಮತ್ತು ಬೀಜೋತ್ಪಾದನೆ, ಸಾವಯವ ಕಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಸಸ್ಯೋತ್ಪಾದನೆ ಹಾಗೂ ಸಸ್ಯಮಡಿ ನಿರ್ವಹಣೆ, ಹೈ-ಟೆಕ್ ಕಷಿ, ರೈತ ಮಹಿಳೆಯರಿಗಾಗಿ ಉದ್ದಿಮೆಗಳು, ಕಬ್ಬು ಹಾಗು ಸಕ್ಕರೆ ಗಡ್ಡೆ ಉತ್ಪಾದನೆ ತಾಂತ್ರಿಕತೆ ವಿಷಯಗಳಲ್ಲಿ ಒಂದು ಸೆಮಿಸ್ಟರ್‌ನ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು , ಎಸ್‌ಎಸ್‌ಎಲ್‌ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಸಂಪರ್ಕಿಸಬಹುದು: www.uasd.edu


ಪ್ಯಾರಾಮೆಡಿಕಲ್ ಕೋರ್ಸ್‌ಗಳು
ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿ ಕೋರ್ಸ್‌ಗಳು ದೀರ್ಘಾವಧಿಯ ಕೋರ್ಸ್‌ಗಳಾದರೂ ತಪಾಸಣೆ, ರೋಗನಿಧಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್‌ಗಳಿವೆ.
ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್, ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್, ಡಿಪ್ಲೊಮಾ ಇನ್ ಡೆಂಟಲ್ ಹೈಜಿನ್ ಕೋರ್ಸ್‌ಗಳನ್ನು ಪ್ಯಾರಾ ಮೆಡಿಕಲ್ ಬೋರ್ಡ್ ಅನುಮೋದಿಸಿದ್ದು , ರಾಜ್ಯದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಇವುಗಳನ್ನು ನಡೆಸುತ್ತಿವೆ. ಪಿಯುಸಿ. ಪಾಸಾದ ವಿದ್ಯಾರ್ಥಿಗಳನ್ನು ಡಿಪ್ಲೊಮಾ ತರಗತಿಗಳಿಗೆ ಸೇರಿಸಿಕೊಂಡರೆ ಅವೇ ವಿಷಯಗಳಲ್ಲಿ ನೀಡಲಾಗುವ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಹಾಜರಾಗುವವರಿಗೆ ಎಂಟು ಅಥವಾ ಹತ್ತನೇ ತರಗತಿ ಓದಿರಬೇಕಾಗುತ್ತದೆ. ಕೋರ್ಸ್‌ಗಳ ಅವಧಿ 2 ರಿಂದ 6 ತಿಂಗಳು.
ವಿವರಗಳಿಗಾಗಿ ಭೇಟಿನೀಡಿ : www.pmbkarnataka.org


ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್
ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್‌ಗೆ ಪ್ರತಿ ವರ್ಷವೂ ಸರಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.ksdneb.org www.ksdneb.net


ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ಶ್ರವಣದೋಷ, ಮಾತಿನ ದೋಷ ಇರುವ ಮಕ್ಕಳಿಗೆ ಚಿಕಿತ್ಸೆ ಮತ್ತು ತರಬೇತಿ ನೀಡಿ ಸಾಮಾನ್ಯರಂತೆ ಬದುಕು ನಡೆಸಲು ಅವಕಾಶ ನೀಡುವ ವಿಶಿಷ್ಟ ಅಲ್ಪಾವಧಿಯ ಕೋರ್ಸ್‌ಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತದೆ. ಹತ್ತು ಹದಿನೈದು ದಿನಗಳಿಂದ ಹಿಡಿದು ಆರು ತಿಂಗಳವರೆಗೆ ನಡೆಸಲಾಗುವ ಈ ಕೋರ್ಸ್‌ಗಳಿಗೆ ಅಗಾಧವಾದ ಬೇಡಿಕೆ ಇದೆ. ಇವುಗಳ ಜತೆಗೆ ಹದಿನಾಲ್ಕು ವಾರಗಳ ಸರ್ಟಿಫಿಕೇಟ್ ಕೋರ್ಸ್‌ಗಳು, ಆರು ತಿಂಗಳ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿಗೆ ಅವಕಾಶವಿದೆ.

ಆಡಿಯಾಲಜಿ ಡಿಪಾರ್ಟ್‌ಮೆಂಟ್‌ನಲ್ಲಿ 20 ಕೋರ್ಸ್‌ಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 4 ಕೋರ್ಸ್‌ಗಳು, ಸ್ಪೀಚ್ ಪೆಥಾಲಜಿ ವಿಭಾಗದಲ್ಲಿ 26, ಸ್ಪೀಚ್ ಲಾಂಗ್ವೇಜ್ ಸೈನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ 10 ಕೋರ್ಸ್‌ಗಳು ನಿಯಮಿತವಾಗಿ ವರ್ಷವಿಡೀ ಆಯೋಜಿತವಾಗುತ್ತಿದ್ದು ಜನಸಾಮಾನ್ಯರು, ಶಿಕ್ಷಕರು, ತರಬೇತುದಾರರು, ಸ್ವಯಂ ಸೇವಕರು, ಯಾರು ಬೇಕಾದರೂ ಕಲಿತುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ನೋಡಿ: www.aiishmysore.com
                    ಲೇಖನ- ಬೇದ್ರೆ ಮಂಜುನಾಥ

ಇಂಗ್ಲಿಷ್ ಕಲಿಕೆ ರೆಡಿ ಸ್ಟಡಿ ಗೋ...!


       ---ಬೇದ್ರೆ ಮಂಜುನಾಥ

Sunday, 12 May 2013

ಮಗುವಿನ ಕನಸು!! ನಗುವಿನ ಮನಸು!!



ಪ್ರಸ್ತುತ  ವರ್ಷದ ಎಲ್ಲಾ ದಿನಗಳಲ್ಲೂ ಒಂದಲ್ಲಾ ಒಂದು ದಿನಾಚರಣೆ ಇದ್ದೇ ಇರುತ್ತದೆ. ಆದರೆ ಅವಲ್ಲ್ಲೆವಕ್ಕಿಂತ ಹೆಚ್ಚು ಮೌಲ್ಯಯುತವಾದುದು ಮಕ್ಕಳ ದಿನ. ಆ ಒಂದು ದಿನವಾದರೂ ಎಲ್ಲರೂ ತಮ್ಮ ದಿನ ನಿತ್ಯದ ಒತ್ತಡಗಳಿಂದ ಮುಕ್ತರಾಗಿ ಮಕ್ಕಳ ಸುಂದರ ಭವಿಷ್ಯದ ಕುರಿತು ಚಿಂತಿಸಲಿ ಎಂದು ನೆಹರೂಜಿಯವರ ಕನಸಿರಬಹುದು. ಆದರೆ ಇಂದು ನಾವು ಆ ದಿನಕ್ಕೆ ಕೊಡುತ್ತಿರುವ ಮಹತ್ವ, ಆಚರಿಸುತ್ತಿರುವ ರೀತಿಗಳು ನಮ್ಮನ್ನೆಲ್ಲ ಅಣಕಿಸುವಂತಿವೆ. ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವಂತಹ ಸುವರ್ಣ ದಿನವಾಗಬೇಕು. ಕನಿಷ್ಠ ಆ ದಿನವಾದರೂ ಮಕ್ಕಳಿಗೆ ಪ್ರಿಯವಾಗುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡರೆ ಅದೇ ನಾವು ಮಕ್ಕಳಿಗೆ ಕೊಡುವ ಬಹುದೊಡ್ಡ ಕೊಡುಗೆ.
ಚಿಂತನಶೀಲ ಕವಿ ಖಲೀಲ್ ಗಿಬ್ರಾನರ ಕಾವ್ಯವೊಂದರ ಅದ್ಭುತ ಸಾಲುಗಳೆಂದರೆ,
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಜೀವನದ ಸ್ವ ಪ್ರೇಮದ ಪುತ್ರ ಪುತ್ರಿಯರು ಅವರು.
ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಲ್ಲ.
ನಿಮ್ಮ ಜತೆ ಇರುವರಾದರೂ ಅವರು ನಿಮಗೆ ಸೇರಿದವರಲ್ಲ.
ನಿಮ್ಮ ಪ್ರೀತಿಯನ್ನು ನೀವು ಅವರಿಗೆ ನೀಡಬಹುದು,
ಆದರೆ ನಿಮ್ಮ ಆಲೋಚನೆಗಳನ್ನಲ್ಲ.
ಏಕೆಂದರೆ ಅವರಿಗೆ ಅವರದ್ದೇ ಸ್ವಂತ ಆಲೋಚನೆಗಳುಂಟು.
. . . . . . . . . . . . . . . . . . . . . . . . . . .
ಅವರಂತಿರಲು ನೀವು ಪ್ರಯತ್ನಿಸಬಹುದು.
ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ.
. . . . . . . . . . . . . . . . . . . . . . . . . . .
ಆದರೆ ವಾಸ್ತವದ ಚಿತ್ರಣ ಮಕ್ಕಳ ಕನಸಿಗೆ ಬಣ್ಣ ಹಚ್ಚುವ ಯಾವ ಪ್ರಯತ್ನವೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹಿರಿಯರ ಸಮಸ್ಯೆಗೆ ನೀಡುವ ಕಾಲುಭಾಗದಷ್ಟು ಗಮನ ಕೂಡ ಮಕ್ಕಳ ಸಮಸ್ಯೆಗೆ ನೀಡಲಾಗುತ್ತಿಲ್ಲ. ನಮಗೆ ಇವತ್ತಿಗೂ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ಅನುಮಾನವಿದೆ. ಮಕ್ಕಳ ವಿಚಾರದಲ್ಲಿ ಯಾವತ್ತೂ ನಾವು ಬಹಳ ದೊಡ್ಡ ತಪ್ಪೊಂದನ್ನು ಮಾಡುತ್ತಿರುತ್ತೇವೆ. ಆದೆಂದರೆ, ನಾವು ದೊಡ್ಡವರು, ಸರ್ವಜ್ಞರು, ಮಕ್ಕಳು ದಡ್ಡರು, ಅವರಿಗೆ ಏನೂ ಗೊತ್ತಿಲ್ಲ, ಎಲ್ಲವನ್ನೂ ಅವರಿಗೆ ಹೇಳಿಕೊಡುತ್ತಾ ಅವರನ್ನು ಸರಿದಾರಿಗೆ ತರುವವರು ಹಿರಿಯರು. ಬಹುಶಃ ಇದಕ್ಕಿಂತಲೂ ದೊಡ್ಡದಾದ ಸುಳ್ಳು ಈ ಜಗತ್ತಿನಲ್ಲಿ ಮತ್ಯಾವುದೂ ಇಲ್ಲ. ಈ ಜಗತ್ತಿಗೆ ಕಾಲಿರಿಸುವ ಪ್ರತಿಯೊಂದು ಮಗುವೂ ಒಂದಲ್ಲಾ ಒಂದು ರೀತಿಯಲ್ಲಿ ಮೇಧಾವಿಗಳಾಗಿರುತ್ತದೆ. ಬುದ್ಧಿವಂತಿಕೆಯಲ್ಲೂ ಅವರು ದೊಡ್ಡವರನ್ನು ಹಿಂದಿಕ್ಕುತ್ತಾರೆ. ಎಷ್ಟೋ ಸಾರಿ ಹಿರಿಯರಿಗೆ ಹೊಳೆಯಲಾರದ್ದು ಎಳೆಯರಿಗೆ ಹೊಳೆದ ಉದಾಹರಣೆಗಳಿವೆ. ಅದಕ್ಕೆ ಬೆರಗಾಗಿದ್ದೇವೆ. ಅನೇಕ ಸಾರಿ ಮಕ್ಕಳಿಂದಲೇ ಅನೇಕ ವಿಚಾರಗಳನ್ನು ಕಲಿಯುತ್ತೇವೆ.
ವಿಪರ್ಯಾಸವೆಂದರೆ, ಯಾರೂ ಮಗುವನ್ನೂ ಒಂದು ಪುಟ್ಟವ್ಯಕ್ತಿ ಎಂದು ಭಾವಿಸುತ್ತಿಲ್ಲ. ಅವರಲ್ಲೂ ವಿಚಾರಗಳಿವೆ, ಭಾವನೆಗಳಿವೆ ಮತ್ತು ಅವರವೇ ಆದ ಕಲ್ಪನೆಗಳು ಇವೆ ಎಂದು ನಂಬಲು ನಾವು ಸಿದ್ಧರಿಲ್ಲ. ಮಗು ತನ್ನ ಸುತ್ತ ಮುತ್ತಲಿನ ಪರಿಸರ ಅವಲೋಕಿಸುತ್ತಾ, ಅದಕ್ಕೆ ಪೂರಕವಾಗಿ ತನ್ನದೇ ಆದ ಅಭಿಪ್ರಾಯದ ಮುಖಾಂತರ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅವರೊಳಗೂ ನೋವು, ಸಮಸ್ಯೆ, ದುಗುಡ, ತಳಮಳಗಳಿವೆ ಎಂಬುದರೆಡೆಗೆ ನಮಗೆ ಜಾಣ ಕುರುಡು ಮತ್ತು ಜಾಣ ಕಿವುಡು. ನಾವೂ ನಮ್ಮ ಭಾವನೆ, ಅಭಿಪ್ರಾಯಗಳನ್ನು, ನಮಗಿಷ್ಟವೆನಿಸಿದ್ದನ್ನು ಮಕ್ಕಳ ಮೇಲೆ ಸದಾ ಹೇರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ.
ನಮ್ಮ ಶಿಕ್ಷಣ ವ್ಯವಸ್ಥೆ ಇದಕ್ಕೆ ಪೂರಕವಾಗಿ ಕೋಲೆ ಬಸವನಂತೆ ತಲೆ ಯಾಡಿಸುತ್ತಿದೆ. ಮಕ್ಕಳಿಗೆ ಏನೂ ತಿಳಿದಿಲ್ಲ ಎಂಬ ನಿರ್ಣಯದೊಂದಿಗೆ ನಮ್ಮ ಶಿಕ್ಷಣದ ಬಹುತೇಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಅದರಲ್ಲೂ ವಿಶೇಷ ವೆಂದರೆ ಮಕ್ಕಳ ಶಿಕ್ಷಣದ ಎಲ್ಲಾವೂ ಹಿರಿಯರ ನೆಲೆಯಿಂದಲೇ ರೂಪಿಸಲ್ಪಡುತ್ತವೆ. ಅಲ್ಲಿ ಸಣ್ಣವರ ಆಲೋಚನೆಗಳಿಗಿಂತ ಹಿರಿಯೆ ಆಲೋಚನೆಗಳು, ಅಗತ್ಯಗಳು, ಆಶೆಗಳು, ಆಶೋತ್ತರಗಳು ಮಹತ್ವ ಪಡೆಯುತ್ತವೆ. ಮಕ್ಕಳ ಆಸಕ್ತಿ, ಅಭಿರುಚಿ, ಮನೋವಿಜ್ಞಾನವು ಮೂಲೆಗುಂಪಾಗಿರುತ್ತದೆ. ಚೈತನ್ಯದ ಚಿಲುಮೆಗಳಾಗಿರುವ ಮಕ್ಕಳು ಯಾವಾಗಲೂ ಒಂದೆಡೆ ಸುಮ್ಮನೆ ಕುಳಿತುಕೊಳ್ಳವ ಸ್ವಭಾವದವರಲ್ಲ. ಸದಾ ಅವರು ಒಂದು ಪ್ರಕ್ರಿಯೆ, ಚಟುವಟಿಕೆ, ಆಟಗಳಲ್ಲಿರಲು ಬಯಸುತ್ತಾರೆ. ಹಾಗಾಗಿ ಅವರ ಕಲಿಕೆ ಅಂತವುಗಳ ಮುಖಾಂತರವೇ ನಡೆಯುವುದು ಸೂಕ್ತ. ಅದನ್ನು ಗಮನಿಸಿ ಮಕ್ಕಳ ಪ್ರೀತಿಯ ಅಜ್ಜ‘ಕಾರಂತ’ರು ‘ಓದುವ ಆಟ’ ಎಂಬ ಪುಸ್ತಕದ ಮುಖಾಂತರ ಹೊಸ ಹಾದಿ ತುಳಿದರು. ಆದರೆ ಅದನ್ನು ನಾವು ಸ್ವೀಕರಿಸಿದ ಪರಿ ?.
ಕಲಿಕೆ ನಡೆಯುವುದೆಲ್ಲಾ ಶಾಲೆಯೊಳಗೆ ಮಾತ್ರ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಬಲವಾಗಿ ಬೇರೂರಿದೆ. ಮಗು ಹುಟ್ಟಿದಂದಿನಿಂದಲೇ ಸುತ್ತಲ ಪರಿಸರದಿಂದ ಕಲಿಯಲಾರಂಭಿಸುತ್ತದೆ. ನೋಡುವ, ಕೇಳುವ ಮತ್ತು ಮಾಡುವ ತಂತ್ರಗಳ ಮುಖಾಂತರ ಬದುಕಿಗೆ ಅಗತ್ಯವಾದ ಕೌಶಲಕ್ಕೆ ಶಾಲೆಯ ಒಂದು ಖಚಿತತೆ ನೀಡಬೇಕು. ಈ ಅಮೂರ್ತಗಳಿಗೆ ಒಂದು ಮೂರ್ತ ಸ್ವರೂಪ ಕೊಡುವ ಕೊಡುವ ಕೆಲಸ ಶಾಲೆಯಲ್ಲಾಗಬೇಕು. ಅಂದರೆ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಕಾರ‍್ಯ ಅಲ್ಲಿ ನಡೆಯಬೇಕಾಗಿಲ್ಲ. ಬದಲಾಗಿ ಮಗುವಿನಲ್ಲಿ ಪ್ರಶ್ನೆಗಳನ್ನು ಮೂಡುವಂತೆ ಮಾಡಿದರೆ ಸಾಕು. ಯಾಕೆಂದರೆ ಉತ್ತರ ಹುಡುಕುವ ಕಾಯಕವನ್ನು ಮಗುವೇ ಮಾಡಿಕೊಳ್ಳುತ್ತಾ ಮುಂದಡಿ ಇಡುತ್ತದೆ. ಪ್ರತೀ ಮಗುವಿನಲ್ಲಿ ಕುತೂಹಲವು ರಕ್ತಗತವಾಗಿ ಬಂದಿರುತ್ತದೆ. ಚಿಕ್ಕ ಮಗುವೂ ಎಲ್ಲವನ್ನೂ ಅತ್ಯಂತ ಕುತೂಹಲದಿಂದ ಪರಿಶೀಲಿಸುತ್ತಾ, ಅನುಭವಿಸುತ್ತಿರುತ್ತದೆ. ತನ್ನ ಕುತೂಹಲವನ್ನು ತಣಿಸಿಕೊಳ್ಳಲು ಶೋಧನೆಯತ್ತ ಮುಖ ಮಾಡುತ್ತದೆ. ಕುತೂಹಲ ಮತ್ತು ಸಂಶೋಧನೆಯ ಅಂಶಗಳು ಕಲಿಕೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುವುದರಿಂದ, ಅವನ್ನು ಪ್ರೇರೇಪಿಸುವತ್ತ ನಮ್ಮ ಗಮನ ಕೇಂದ್ರೀಕರಿಸಬೇಕಿದೆ.
ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯು ನೆನಪಿನ ಶಕ್ತಿ, ಪಠ್ಯದ ವಿಷಯ ಮತ್ತು ಅಂಕಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಅದರಲ್ಲಿ ಮಗುವಿಗೆ ಅಕ್ಷರಗಳನ್ನು ನೆನಪಿಡುವುದು ಸುಲಭವಲ್ಲ. ಅದರಲ್ಲೂ ಅರ್ಥವಾಗದ ವಿಷಯಗಳನ್ನು ನೆನಪಿಡುವುದು ಮಗುವಿಗೆ ಆಸಕ್ತಿಯ ವಿಷಯವೂ ಅಲ್ಲ. ಮಗುವಿಗೆ ಒಂದು ವಿಷಯ ನಿಧಾನವಾಗಿ ಸ್ಪಷ್ಟವಾಗುತ್ತದೆ. ಹೇಳಿದ್ದನ್ನು ನೆನಪಿನಲ್ಲಿಡಬೇಕು. ಅದನ್ನೇ ಪರೀಕ್ಷೆಯಲ್ಲಿ ಹೇಳಬೇಕು, ಇಲ್ಲವೇ ಬರೆಯಬೇಕು. ಅಂದರೆ ಹೆಚ್ಚು ಮಾರ್ಕು ಬರುತ್ತವೆ. ಆಗ ಅಮ್ಮ ಅಪ್ಪ ಸಂತೋಷ ಪಡುತ್ತಾರೆ. ತನಗೆ ಪೆಟ್ಟು ಬೀಳುವುದಿಲ್ಲ. ಹಾಗಾಗಿ ನಮ್ಮ ಮಕ್ಕಳು ಕುತೂಹಲ ಮತ್ತು ಸಂಶೋಧನೆಗಳತ್ತ ತೊಡಗಿಕೊಳ್ಳದೇ ಮಾರ್ಕ್ಸವಾದದ ಪ್ರಯತ್ನದಲ್ಲಿಯೇ ತೊಡಗಿಕೊಳ್ಳುತಾರೆ. ಅರ್ಥವಾಗದಿದ್ದರೂ ವಿಷಯಗಳನ್ನು ನೆನಪಿನಲ್ಲಿ ತುರುಕಿಕೊಳ್ಳಲು ಪ್ರಾರಂಭಿಸುತ್ತಾರೆ. ದೊಡ್ಡವರ ಮೆಚ್ಚುಗೆ ಸಿಕ್ಕಂತೆಲ್ಲ ಹೆಚ್ಚು ಹೆಚ್ಚು ಮಾರ್ಕು ಪಡಿಯುವ ಹವ್ಯಾಸದಲ್ಲಿ ಬೀಳುತ್ತದೆ, ಬರುಬರುತ್ತಾ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವುದೇ ಜೀವನದ ಸಾಧನೆ ಎಂಬ ಭ್ರಮೆಯಲ್ಲಿ ಬದುಕುತ್ತಾರೆ. ಒಂದು ಪುಸ್ತಕದಲ್ಲಿ ಓದಿದ ನೆನಪು “ನಮ್ಮ ಮಕ್ಕಳು ಹುಟ್ಟುತ್ತಲೇ ವಿಜ್ಞಾನಿಗಳಾಗಿರುತ್ತಾರೆ. ಆದರೆ ನಾವು ಶಾಲೆಗೆ ಸೇರಿಸಿ ಅವರನ್ನು ಇಡಿಯಟ್‌ಗಳನ್ನಾಗಿ ಮಾಡುತ್ತಿದ್ದೇವೆ” ಎಂಬ ಮಾತುಗಳು ಇಂದಿನ ಸ್ಥಿತಿಗೆ ಕನ್ನಡಿಯಂತಿವೆ.
ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಯುವ ವರ್ಷಗಳು ಬದುಕಿನುದ್ದಕ್ಕೂ ಆನಂದದ ನೆನಪಾಗಿ ಉಳಿಯಬೇಕು. ಇದು ಸಾಧ್ಯವಾಗಬೇಕಾದರೆ ಸ್ಪರ್ಧೆ ಇರಬಾರದು, ಅಧಿಕಾರಕೇಂದ್ರ ಇರಬಾರದು, ಶಿಕ್ಷಣ ಮತ್ತು ಕಲಿಕೆಗಳು ಅಖಂಡ ಪ್ರಕ್ರಿಯೆಗಳಾಗಬೇಕು. ಶಿಕ್ಷಣ ಪುಸ್ತಕಗಳಿಂದಷ್ಟೆ ಅಲ್ಲ, ನೆನಪಿನಂಗಳದಿಂದಷ್ಟೆ ಅಲ್ಲ, ನೋಡುವುದರಿಂದ, ಕೇಳುವುದರಿಂದ, ಪುಸ್ತಕಗಳು ಏನು ಹೇಳುತ್ತವೆ ಅವುಗಳಲ್ಲಿ ಸತ್ಯಾಂಶವೆಷ್ಟು, ಮಿಥ್ಯಾಂಶವೆಷ್ಟು ಎಂದೆಲ್ಲಾ ವಿವೇಚಿಸುವುದರಿಂದಲೂ ದೊರಕುತ್ತದೆ. ಶಾಲೆಯು ಮಕ್ಕಳ ದೃಷ್ಟಿಯಲ್ಲಿ ಹಿಂಸಾಲಯವಾಗಬಾರದು. ಹೂವಿನಂತ ಮಕ್ಕಳನ್ನು ಬಲವಂತದಿಂದ ಅರಳಿಸಬಾರದು. ಅವರು ಸಹಜವಾಗಿ ಅರಳಲು ಅವಕಾಶ ಕೊಡಬೇಕು. ಕಲಿಕೆ ಎನ್ನುವುದು ಅವರಿಗೆ ಆನಂದದಾಯಕ ಚಟುವಟಿಕೆಯಾಗಬೇಕು. ಅವರ ಮೆದುಳು ನಿರರ್ಥಕ, ನಿರುಪಯುಕ್ತ ಮಾಹಿತಿಗಳನ್ನು ಗುಡ್ಡೆ ಹಾಕುವ ಕಸದ ಬುಟ್ಟಿಯಲ್ಲ. ಯಾವುದು ಮಕ್ಕಳಿಗೆ ರುಚಿಸುವುದಿಲ್ಲವೋ, ಉಪಯುಕ್ತ ಎನಿಸುವುದಿಲ್ಲವೋ ಅವುಗಳ ಬಗ್ಗೆ ಅವರಿಗೆ ಆಸಕ್ತಿ ಇರುವುದಿಲ್ಲ. ಎಲ್ಲಿ ಆಸಕ್ತಿ ಇರುವುದಿಲ್ಲವೋ ಅಲ್ಲಿ ಕಲಿಕೆ ನಡೆಯುವುದಿಲ್ಲ ಎಂಬ ಅಂಶಗಳನ್ನು ಇನ್ನಾದರೂ ನಾವು ಅಥಮಾಡಿಕೊಳ್ಳಬೇಕಿದೆ.
ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಕುರಿತಾಗಿ ಅನೇಕರು ತಮ್ಮ ಜೀವನವನ್ನೆಲ್ಲಾ ಮುಡುಪಾಗಿಟ್ಟಿದ್ದಾರೆ. ಮನೋವಿಜ್ಞಾನಿಗಳಂತೂ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ರ, ಗೌರವ, ಕಾಳಜಿ, ಅವಕಾಶಗಳ ಕುರಿತು ಒತ್ತಿ ಒತ್ತಿ ಹೇಳಿದ್ದಾರೆ. ಆದರೆ ಅದನ್ನು ನಾವು ಯಾರು ಗಣನೆಗೆ ತೆಗೆದು ಕೊಳ್ಳದೇ, ಹಿರಿಯರು ಹೇಳಿದಂತೆ ಮಾಡುವವರು ಮಾತ್ರ ಒಳ್ಳೆಯ ಮಕ್ಕಳು ಎಂಬ ಆಶಾ ಗೋಪುರದಲ್ಲಿದ್ದೇವೆ. ಅದರಿಂದ ಅನೇಕ ಪ್ರತಿಭೆಗಳು ಅರಳುವ ಚಿಗುರುವ ಮೊದಲೇ ಕಮರುತ್ತಿವೆ.
ಇನ್ನೊಂದೆಡೆ ಮಕ್ಕಳ ಸಾಹಿತಿಗಳೆಂದು ನಾವು ರಾಜರತ್ನಂ, ಸಂಗಮೇಶ, ಕಂಚ್ಯಾಣಿ ಶರಣಪ್ಪ, ನಾಗರಾಜ ಶೆಟ್ಟಿ. . . . . ಮುಂತಾದ ದೊಡ್ಡವರ ಹೆಸರನ್ನು ಹೆಸರಿಸುತ್ತೇವೆ. ಆದರೆ ಇಲ್ಲಿ ಬರುವ ಪ್ರಶ್ನೆ ಎಂದರೆ ಮಕ್ಕಳ ಕುರಿತು ಮಕ್ಕಳೇ ಚಿಂತಿಸುವ ಸಾಹಿತಿಗಳು ನಮ್ಮ ನಡುವೆ ಇಲ್ಲವೇ ?. ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ಮಾಧ್ಯಮಗಳೂ ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿವಹಿಸುವ ಅಗತ್ಯತೆ ಇಂದು ಹೆಚ್ಚಾಗಿ ಕಂಡು ಬರುತ್ತದೆ.
ಮಕ್ಕಳ ಕುರಿತಂತೆ ಸದಾ ಚಿಂತನೆ ಮಾಡುತ್ತಾ, ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರುವ ಹಾಸನದ ರೂಪಕ್ಕ ಹೇಳುವುದೇನೆಂದರೆ “ಮಕ್ಕಳ ಕಲ್ಪನಾಶಕ್ತಿಯನ್ನು, ಜ್ಞಾನ, ಅನುಭವಗಳನ್ನು ವಿಸ್ತರಿಸುವಂತಹ, ಅವರ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ ರಂಜನೆ, ಮಾಹಿತಿ, ಸೃಜನಶೀಲ ಸಂತೋಷವನ್ನು ಹುಡುಕಿಕೊಳ್ಳುವ ಜೊತೆಗೇ ಶಿಕ್ಷಣ, ಮಕ್ಕಳ ಹಕ್ಕು ಹಾಗೂ ಸಮಸ್ಯೆಯ ಅರಿವಿನ ವಿಸ್ತರಣೆಗಾಗಿ ಪತ್ರಿಕೆಗಳು ಗಮನನೀಡಬೇಕಿರುವುದು ಇಂದಿನ ಅನಿವಾರ್ಯತೆ. ಆ ಕೆಲಸ ಆಗೊಮ್ಮೆ ಈಗೊಮ್ಮೆ ಮಾತ್ರವಾಗದೇ ನಿರಂತರವಾಗಿ ಇಂತಹ ವಿಷಯಗಳನ್ನು ಅತ್ಯಂತ ಶ್ರದ್ಧೆ, ಕಾಳಜಿ ಮತ್ತು ಮಕ್ಕಳ ಪರ ಸಂವೇದನೆಯಿಂದ ರೂಪುಗೊಳಿಸಬೇಕು. ಅದನ್ನು ಕೂಡ ಸಾಮಾನ್ಯವಾಗಿ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಮಾಡುವಂತೆ, ಬಲವಂತದಿಂದ, ಉಪದೇಶಾತ್ಮಕವಾಗಿ, ನೈತಿಕ ನೆಲೆಯ ಹೆದರಿಕೆಯನ್ನು ಬಿತ್ತುವಂತೆ ರೂಪಿಸದೇ ಮಕ್ಕಳ ಮನಸ್ಸನ್ನು ಅರಿತು ವಿಶೇಷ ಕಾಳಜಿಯಿಂದ ಮಾಡಬೇಕಿದೆ” ಎನ್ನುವುದು ಅಕ್ಷರ ಸಹ ಸತ್ಯ.
ಮಕ್ಕಳಿಗಾಗಿ ರೂಪಿಸಲಾಗಿರುವ ಪತ್ರಿಕೆಗಳನ್ನು ಗಮನಿಸಿದರೆ, ಅವುಗಳ ಗುರಿ ಏನು?ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ. ಸಾಮಾನ್ಯವಾಗಿ ರಂಜನೆ, ಮಾಹಿತಿ, ಶಿಕ್ಷಣವೇ ಇವುಗಳ ಪ್ರಮುಖ ಉದ್ದೇಶ. ಸ್ವಲ್ಪ ಹಿರಿಯ ಮಕ್ಕಳ ಮನೋವಿಕಾಸಕ್ಕಾಗಿ, ಅವರ ಸಮಸ್ಯೆಗಳನ್ನು ಚರ್ಚಿಸುವಂತಾ, ವಾಸ್ತವ ಲೋಕದ ಗಂಭೀರ ವಿಷಯಗಳು ಇದರಲ್ಲಿ ಪ್ರವೇಶ ಪಡೆಯುವುದೇ ಇಲ್ಲ. ಮಕ್ಕಳಿಗೆ ಮಾಹಿತಿಯನ್ನು ರಂಜನೀಯವಾಗಿ ಕೊಡುವ ಪ್ರಯತ್ನಗಳು ಕಡಿಮೆ. ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿನ ವಿಚಾರಗಳನ್ನು ಮಕ್ಕಳ ಮಟ್ಟಕ್ಕೆ ಇಳಿದು ನೀಡುವಂತಾ ಪ್ರಯತ್ನಗಳು ತುಂಬಾ ಕಡಿಮೆ ಮಟ್ಟದಲ್ಲಾಗಿವೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ತಜ್ಞರಿಂದ ಉತ್ತರ, ಮಕ್ಕಳ ವಿಶೇಷ ಅನುಭವಗಳಿಗೆ ಜಾಗ, ಒಂದು ವಿಷಯ ನೀಡಿ ಮಕ್ಕಳ ಅಭಿಪ್ರಾಯ ಆಹ್ವಾನಿಸುವುದನ್ನು ಮಾಡಿದಾಗ ಮಕ್ಕಳಿಗೆ ತಾವೇ ತಮ್ಮದೊಂದು ಅನನ್ಯತೆಯನ್ನು, ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳನ್ನು ಸಂದರ್ಶಿಸಿ, ಸಮೀಕ್ಷೆ ನಡೆಸಿ ಅವರ ಇಷ್ಟಾನಿಷ್ಟಗಳನ್ನು ಕೇಂದ್ರೀಕರಿಸಿಯೇ ಮಕ್ಕಳ ಪತ್ರಿಕೆ ರೂಪುಗೊಳ್ಳಬೇಕು ಮತ್ತು ದೊಡ್ಡವರ ಪತ್ರಿಕೆಗಳಲ್ಲಿ ಚರ್ಚಿಸುವ ಮಕ್ಕಳ ವಿಷಯಗಳಿಗೆ ಅವರ ಸ್ವ ಅನುಭವ, ಅಭಿಪ್ರಾಯಗಳು, ಅವರೇ ಸೂಚಿಸುವ ಪರಿಹಾರೋಪಾಯಗಳು ಅತ್ಯಂತ ಅವಶ್ಯವಾದುವು.
          ಮಕ್ಕಳಿಗೆ ಇಂದು ಏನೆಲ್ಲಾ ಅಗತ್ಯವಿದೆ? ಅವರಿಗೆ ವಿಭಿನ್ನವೂ, ವಿಶೇಷವೂ ಆದ ಹೊಸತೇನನ್ನು ಕೊಡಬಹುದು? ಅವರನ್ನು ಒಳಗೊಳ್ಳುವುದು ಹೇಗೆ? ಶೋಷಣೆಗೆ, ಅವಗಣನೆಗೊಳಗಾದ ಮಕ್ಕಳ ಸಮಸ್ಯೆಯ ಆಳ, ಅಗಲ, ವಿಸ್ತಾರಗಳೇನು? ಎಂಬುದರ ಕುರಿತು ಈಗಲಾದರೂ ನಾವು ಸರಿಯಾದ ದಿಕ್ಕಿನಲ್ಲಿ ಯೋಚಿಸದಿದ್ದರೆ ಮುಂದೆ ಅಪಾಯ ಕಾದಿದೆ. ಸಾಮಾನ್ಯವಾಗಿ ಪೋಷಕರು ತಮಗೆ ಸಾಧಿಸಲಾಗದ ಕನಸುಗಳನ್ನು ಮಕ್ಕಳ ಮೂಲಕ ಸಾಧಿಸಲು ಬಯಸುತ್ತಾರೆ. ತಮ್ಮ ಮಕ್ಕಳ ಸಾಧನೆಯ ಮೂಲಕ ಸಮಾಜದಲ್ಲಿ ಪುರಸ್ಕಾರ ಗೌರವಗಳನ್ನು ಪಡೆಯುವ ಆಸೆ ಹೊಂದಿರುತ್ತಾರೆ. ಆದರೆ ತಮ್ಮ ಅಗತ್ಯಗಳಿಗಾಗಿ, ತಮ್ಮ ಸಮಯದ ಚೌಕಟ್ಟಿನಲ್ಲಿ, ತಮಗೆ ಬೇಕಾಗ ಮಟ್ಟದಲ್ಲಿ, ಮಕ್ಕಳಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಆತುರದ ಪ್ರಯತ್ನದಲ್ಲಿ, ಮಕ್ಕಳ ವಿಕಾಸದ ಮೇಲೆ ಆಗುತ್ತಿರುವ ಪರಿಣಾಮಗಳತ್ತ ಕಣ್ಣು ಹಾಯಿಸಿದರೆ ದೊಡ್ಡ ಆತಂಕ ಎದ್ದು ಕಾಣುತ್ತದೆ. ಅದು ಹೀಗೆಯೇ ಮುಂದುವರೆದರೆ ಮುಂದಿನ ಸಮಾಜ, ಪ್ರಜೆಗಳು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಇನ್ನಾದರೂ ನಾವು ಜಾಗೃತರಾಗೋಣ.

                                                       - 

ಮೇಧಾವಿ ಮಕ್ಕಳ ಶಿಕ್ಷಣ ಹೇಗೆ?


ಶಾಲೆಯಲ್ಲಿನ ಒತ್ತಡದ ಕಲಿಕೆಯಿಂದ ನನಗೆ ದುಃಖವಾಗಿದೆ. ಅದಕ್ಕೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಏಕೆಂದರೆ ಶಾಲೆಯಲ್ಲಿ ಕಲಿಸುವ ಎಲ್ಲಾ ವಿಷಯಗಳು ನನಗೆ ತಿಳಿದಿವೆ. ನನಗೆ ಅವೆಲ್ಲಾ ಗೊತ್ತಿರುವುದರಿಂದ ಮುಂದೆ ಮುಂದೆ ಮಾತನಾಡುತ್ತೇನೆ. ಆದರೆ ಇದು ನನ್ನ ಸಹಪಾಠಿಗಳಿಗೆ ಸ್ವಲ್ಪನೂ ಇಷ್ಟವಾಗುತ್ತಿಲ್ಲ.
ಶಿಕ್ಷಕರೂ ಸಹಿಸುವುದಿಲ್ಲ. ನನಗಂತೂ ಶಾಲೆಗೆ ಹೋಗುವುದೇ ಬೇಡ ಎನಿಸುತ್ತಿದೆ` ಎಂದು 8ನೇ ತರಗತಿ ವಿದ್ಯಾರ್ಥಿನಿ ಕುಸುಮ ಹೇಳುವುದನ್ನು ಕೇಳಿದರೆ, ಆಕೆಯಲ್ಲಿನ ಪ್ರತಿಭೆಯನ್ನು ಹತ್ತಿಕ್ಕಲಾಗುತ್ತಿದೆಯೇ ಎನಿಸುತ್ತದೆ.
ಈ ತರಹದ ಸಮಸ್ಯೆಗಳನ್ನು ಪ್ರತಿಭಾನ್ವಿತರಿರುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಆ ಮಕ್ಕಳು ತಮ್ಮ ವಯಸ್ಸಿನಲ್ಲಿ ಇತರೆ ಮಕ್ಕಳಿಗಿಂತ ಹೆಚ್ಚಿನ ಬುದ್ಧಿಮಟ್ಟವನ್ನು ತೋರಿಸುತ್ತಿರುತ್ತಾರೆ. ಈ ಪ್ರತಿಭೆಗಳು ಹೆಚ್ಚಿನ ರೀತಿಯಲ್ಲಿ ಅರಳದಿರಲು ಪಾಲಕರಲ್ಲಿನ ಎರಡು ಮುಖ್ಯ ಕೊರತೆಗಳು ಕಾರಣ ಎಂದು ಹೇಳಬಹುದು.
ಮೊದಲನೆಯದಾಗಿ ಪ್ರತಿಭಾನ್ವಿತ ಮಗುವಿನ ಬೆಳವಣಿಗೆಯನ್ನು ಅರಿಯುವ ಜ್ಞಾನ ಅವರಲ್ಲಿ ಇಲ್ಲದಿರುವುದು ಹಾಗೂ ಮಗು ಆ ನಿಟ್ಟಿನಲ್ಲಿ ಬೆಳೆಯುತ್ತಿದೆ ಎಂಬುದನ್ನು ಅರಿಯಲು ವಿಫಲರಾಗುವುದು. ಕೆಲವು ಸರಳವಾದ ಹಂತಗಳ ಮೂಲಕ ಹಾಗೂ ಕೆಲ ಗುಣಾತ್ಮಕ ಅಂಶಗಳ ಗಮನಿಸುವಿಕೆಯಿಂದ ಈ ಪ್ರಯತ್ನ ಮಾಡಬಹುದು. ಪೋಷಕರು ಮಾಡಬೇಕಾದ ಮಹತ್ವದ ಎರಡು ಕೆಲಸವೆಂದರೆ ಆ ತರಹದ ಮಕ್ಕಳನ್ನು ಗುರುತಿಸುವುದು ಮತ್ತು ಅದಕ್ಕೆ ಪೂರಕವಾದ ಪೋಷಣೆ ನೀಡುವುದು.

ಪ್ರತಿಭೆ ಗುರುತಿಸುವಿಕೆ   
ವಿಶೇಷ ಸಾಮರ್ಥ್ಯದ ಮಕ್ಕಳನ್ನು ಒಂದೇ ವಿಧಾನದಿಂದ ಗುರುತಿಸಲು ಸಾಧ್ಯವಿಲ್ಲ. ಅವರಲ್ಲಿ ವೈವಿಧ್ಯಮಯ ಪ್ರತಿಭೆಗಳು ಅಡಗಿರುತ್ತವೆ.
ಚಿಕ್ಕವರಿದ್ದಾಗಿನಿಂದ ಅವರ ಬೆಳವಣಿಗೆಯ ಮೇಲೆ ಗಮನ ಕೊಡಬೇಕು. ಪ್ರತಿಭಾನ್ವಿತ ಮಕ್ಕಳು ದೈಹಿಕ ವಯಸ್ಸಿಗಿಂತ ಮಾನಸಿಕವಾಗಿ ಸಾಕಷ್ಟು ಮುಂದಿರುತ್ತಾರೆ. ಹಾಗಾಗಿ ಈ ವಿಶೇಷ ಮಕ್ಕಳು ಎಲ್ಲಾ ರಂಗದಲ್ಲೂ ನಿರೀಕ್ಷಿತ ಮಟ್ಟಕ್ಕಿಂತ ಮುಂದೆ ಹೋಗಿರುತ್ತಾರೆ.
ಶಿಶುವಾಗಿದ್ದಾಗ ಅವರ ದೈಹಿಕ ಬೆಳವಣಿಗೆಯನ್ನು ಗಮನಿಸುವುದು (ಬೇಗನೆ ಕುಳಿತುಕೊಳ್ಳುವುದು, ತಲೆ ನಿಲ್ಲುವುದು, ಎದ್ದು ಓಡಾಡುವುದು ಇತ್ಯಾದಿ). ಆ ಮಕ್ಕಳಲ್ಲಿ ಗ್ರಹಿಸುವಿಕೆಯೂ ವೇಗವಾಗಿರುತ್ತದೆ.
ಸಾಮಾಜಿಕ- ಭಾವನಾತ್ಮಕ ಬೆಳವಣಿಗೆಗಳನ್ನು ನೋಡುವುದು ಭಾಷಾ ಕಲಿಕೆಯನ್ನು ಆಲಿಸುವುದು (ಕೂಗುವಿಕೆ, ತೊದಲುನುಡಿ, ವಸ್ತುಗಳ ಹೆಸರನ್ನು ತಕ್ಷಣ ಗುರುತಿಸುವಿಕೆ) ಮೇಧಾವಿ ಮಕ್ಕಳು ವಯಸ್ಸಿಗೆ ಮೀರಿದ ಆಸಕ್ತಿ ಹೊಂದಿರುತ್ತಾರೆ. ಅವರ ಪ್ರತಿಭೆ ಅರಳಲು ಸರಿಯಾದ ಪೋಷಣೆ ಅಗತ್ಯ. ಮೇಧಾವಿ ಮಕ್ಕಳ ಪಾಲನೆಯು ಅತ್ಯಂತ ಸೂಕ್ಷ್ಮವಾದ ಗಮನ ಮತ್ತು ದಾಖಲೆಯನ್ನು ಬಯಸುತ್ತದೆ. ಅನೇಕ ಪಾಲಕರು ಸ್ವತಃ ತಾವೇ ಮಕ್ಕಳ ಬೆಳವಣಿಗೆಗಳ ಚಟುವಟಿಕೆಗಳನ್ನು ದಿನಚರಿ, ಆತ್ಮ ಚರಿತ್ರೆ, ವಿಡಿಯೋ ಚಿತ್ರೀಕರಣ ಮುಂತಾದವುಗಳಲ್ಲಿ ದಾಖಲಿಸಬಹುದು.

ವಿಶೇಷ ಪಠ್ಯಪ್ರಸ್ತುತ ಮಕ್ಕಳ ಕಲಿಕೆಗಿರುವ ಪಠ್ಯಕ್ರಮದ ಹಲವು ಕ್ಷೇತ್ರಗಳು ಮೇಧಾವಿ ಮಕ್ಕಳ ಬೆಳವಣಿಗೆಗೆ ಅಡ್ಡಿಪಡಿಸುತ್ತಲಿವೆ ಎಂದೇ ಹೇಳಬಹುದು. ಹಾಗಾಗಿ ಅಂತಹ ಮಕ್ಕಳಿಗೆ ಶಿಕ್ಷಕರು ಮತ್ತು ತಜ್ಞರು ವಿಶೇಷ ಪಠ್ಯವನ್ನು ಅವರ ಮುಂದಿನ ಕಲಿಕೆಗೆ ನೆರವಾಗುವಂತೆ ರೂಪಿಸಬೇಕಿದೆ.
ಈ ಮಕ್ಕಳು ಹೆಚ್ಚು ಹೆಚ್ಚು ಜ್ಞಾನದ ಹಸಿವನ್ನು ಹೊಂದಿರುತ್ತಾರೆ. ಹಾಗಾಗಿ ಶಾಲೆಯ ಹೊರಗೂ ಕಲಿಕೆಯ ಮುಂದಿನ ಹಂತಗಳ ಬಗ್ಗೆ ಪಾಲಕರು ಕೈಜೋಡಿಸಬೇಕು.
ಸಾಧ್ಯವಾದಷ್ಟು ಹೆಚ್ಚಿನ ಸಮಯ ಆ ಮಗುವಿನ ಜೊತೆಯಲ್ಲಿ ಕಳೆಯಬೇಕು. ಮಕ್ಕಳ ವೈಯಕ್ತಿಕ ಕೆಲಸದಲ್ಲಿ, ಯೋಜನೆಗಳನ್ನು ರೂಪಿಸುವಾಗ ಪೋಷಕರು ಸಾಥ್ ನೀಡಬೇಕು. ತಜ್ಞರು ಅಥವಾ ಆ ಕ್ಷೇತ್ರದ ಹಿರಿಯರನ್ನು ಸಂಪರ್ಕಿಸಿ ಮಗುವಿನ ಯೋಚನೆ, ಚಟುವಟಿಕೆ, ಆಸಕ್ತಿಗಳನ್ನು ಚಿಕ್ಕ ಟಿಪ್ಪಣಿ ರೂಪದಲ್ಲಿ ಬರೆದುಕೊಳ್ಳಬೇಕು. ನಂತರ ಅದನ್ನು ಮಾರ್ಗದರ್ಶಕರ ಮುಂದಿಡಬಹುದು. ಅದು ಮಗುವನ್ನು ಸರಿಯಾದ ಹಾದಿಯಲ್ಲಿ ನಡೆಸಲು ಸಹಾಯಕವಾಗುತ್ತದೆ.
ಪೋಷಣೆಯೆಂದರೆ ಕೇವಲ ಗಮನಕೊಡುವುದಲ್ಲ. ಬದಲಾಗಿ ಮಗು ಇನ್ನು ಯಾವ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ ಎಂಬುದು ಇಲ್ಲಿ ಮಹತ್ವವಾಗುತ್ತದೆ. ಹಲವು ಮಕ್ಕಳು ತಮ್ಮ ಪ್ರತಿಭೆಗೆ ಒಗ್ಗಿಕೊಂಡು ಪ್ರದರ್ಶಿಸಲು ಸದಾ ಸಿದ್ಧರಿರುತ್ತಾರೆ. ಆದರೆ ಕೆಲವು ಮಕ್ಕಳಲ್ಲಿ ಹಿಂಜರಿಕೆ ಮನೋಭಾವವಿರುತ್ತದೆ. ಅಂದರೆ ಅವರಲ್ಲಿ ತಾವು ಪರಿಪೂರ್ಣರಲ್ಲ ಎಂಬ ಭಾವನೆ, ಸಂಕೋಚ, ಅಹಂಕಾರಗಳಿಂದ ಸಹಜವಾಗಿ ಬೆರೆಯುವುದಿಲ್ಲ. ಮಕ್ಕಳು ತಮ್ಮ ಸಮಸ್ಯೆಗಳನ್ನು ಅರಿತುಕೊಂಡು ಅವಕ್ಕೆ ಅಂಜದೆ ದೃಢವಾಗಿ ಎದುರಿಸಲು ಬೇಕಾದ ಬೆಂಬಲವನ್ನು ಪಾಲಕರು ನೀಡಬೇಕು.

ಎಚ್ಚರಿಕೆಗಳೂ ಇವೆ...
ಪ್ರತಿಭಾನ್ವಿತ ಮಕ್ಕಳ ಪೋಷಣೆ ಮಾಡಬೇಕಾದರೆ ಮುಖ್ಯವಾಗಿ ಮೂರು ಅಂಶಗಳನ್ನು ಪಾಲಿಸಬೇಕು. 
ಮಗುವಿನ ಆಸಕ್ತಿ ಹಾಗೂ ಕೌಶಲಗಳ ಬಗ್ಗೆ ಸೂಕ್ಷ್ಮಸಂವೇದನೆ ಹೊಂದಬೇಕು. ಉನ್ನತ ಜ್ಞಾನವನ್ನು ಸರಿಯಾಗಿ ಪೋಷಿಸಿ ಮುನ್ನಡೆಸಬೇಕು. ಮಗುವಿನ ಅಸಾಧಾರಣ ಬೆಳವಣಿಗೆಯನ್ನು ಗುರುತಿಸಿ, ಗುರಿಸಾಧನೆಯತ್ತ ಮುಂದುವರೆಯಲು ಸಂಪೂರ್ಣ ಬೆಂಬಲ ನೀಡಬೇಕು. ಮಕ್ಕಳನ್ನು ಯಾವುದೇ ಚೌಕಟ್ಟಿನಡಿಯಲ್ಲಿ ಬಂಧಿಸಿಡುವುದು ಹಾಗೂ ಅವರ ಮೇಲೆ ಒತ್ತಡ ಹಾಕಿ, ಅವರ ಹಾದಿಯಿಂದ ದೂರ ಸರಿಸುವುದು ತರವಲ್ಲ.  ಶಾಲಾ ಶಿಕ್ಷಣದಲ್ಲಿ ಮಗು ಸಹಪಾಠಿಗಳಿಗಿಂತ ಹೆಚ್ಚು ಮುಂದಿರಬೇಕು ಎಂದು ಬಯಸುವುದು, ಮಗುವನ್ನು ಪ್ರದರ್ಶನ ಗೊಂಬೆತರಹ ಮಾಡುವುದು ಸರಿಯಾದ ಕ್ರಮಗಳಲ್ಲ.
ಮಗುವಿನ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತಾ, ಸಾಮಾನ್ಯ ಮತ್ತು ಒತ್ತಡರಹಿತ ಬಾಲ್ಯವನ್ನು ಅನುಭವಿಸುವಂತೆ ಮಾಡಿದರೆ ಮಗುವಿನ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಕೆಲವು ಸಾರಿ ಮಗು ದೊಡ್ಡದಾದಂತೆ ಬಾಲ್ಯದಲ್ಲಿನ ಬೆಳವಣಿಗೆ ಕ್ಷೀಣಿಸಬಹುದು. ಅದನ್ನು ಹಾಗೆಯೇ ಸ್ವೀಕರಿಸುವುದು ಅತ್ಯಂತ ಮುಖ್ಯ ಎಂದು ಮಕ್ಕಳ ಮನಶಾಸ್ತ್ರ ಒತ್ತಿ ಹೇಳುತ್ತದೆ

                                                               -  ಪರಮೇಶ್ವರಯ್ಯ ಸೊಪ್ಪಿಮಠ
  • 1


Saturday, 11 May 2013

ಲೇಖನಗಳಿಗೆ ಆಹ್ವಾನ

ಶೈಕ್ಷಣಿಕ ಲೇಖನಗಳನ್ನು ನಮ್ಮ ಕೊಡಚಿ ಶಾಲೆ ಬ್ಲಾಗ್ ಗೆ ಕಳಿಸಿಕೊಡಿ


Mail sent by naveenkumarbhiremath@gmail.com

Tuesday, 7 May 2013

Making our classes Smart

I often discuss with my one of friends about smartclass.Smartclass is a
class with Digital Teaching Syste followed by Class Transformation
System.In this teacher teaches with a smartboard or white screen headed by
projector and a greenboard aside.If you are a science teacher teaching
about human digestive system,then pre installed video explains all about
it.All 3D animated video clearly explains.All students observe clearly that
video and their concentration never deflects.Students never sleep in
classroom.Most of teachers read out lessons and explain with the help of
black board.Though they tried the best students dont grasp the
meaning.Smartclass provides the students such friendly environment in which
they understand the best and succed to break off their confusions.
Teacher becomes only a facilitator.Its good and child friendly
system.Presently installation of Smartclass in govt schools is too
costly,but nearly 8000 school adopted this.Educomp smartclass born in 2003
and providing smartclass installation India.
- Sachinkumar Hiremath


Mail sent by naveenkumarbhiremath@gmail.com

Friday, 26 April 2013

ಸೋಲದು ಸೋಲಲ್ಲ...

-ಪರಮೇಶ್ವರಯ್ಯ ಸೊಪ್ಪಿಮಠ


ಬೇಸಿಗೆ ಶಿಬಿರದ ಬೇಸಿಕ್ ಕುರಿತಾದ ಲೇಖನ ಈ ದಿನದ ವಿಜಯವಾಣಿಯಲ್ಲಿ (13/4/2013)

-


(ಶ್ರೀ ಪರಮೇಶ್ವರಯ್ಯ ಸೊಪ್ಪಿಮಠ ಅವರು ಬರೆದ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Thursday, 25 April 2013

Learning difficulties

Every teacher experiences the above mentioned problem in his class.If not
so,there are such action plans like Action Research,Remedial teaching
etc.Let us know what is learning disability?
It is a situation or disability in which learner can't learn easily or
looses his mind catch what we intend to teach.As I experienced in my class
of 5,some learnin disabilities(LDs) r as follows:
1.Not reading languages properly
2.Some of student not know basic mathematic operations and multiplication
tables
3.Writing skills
These are very severe LDs that I worried lot about.I went through these and
I listed the following reasons.
1.Pupils dont know the language parts and grammar
2.They dont know basic maths operations
3.Lot of writing skills not taught
4.Teacher's way of teaching or student's irregularity may be the reason.
By all knowing this I'm now thinking to do action research.Still i'm
thinking that is there another way than AR, to make my pupils to outcome
this LDs?If you have any, share with me..
-Sachinkumar Hiremath


Mail sent by naveenkumarbhiremath@gmail.com