Saturday, 21 November 2015

ಓದುವೆ ನಾನು ; ಬೆಳೆಯುವೆ ನಾನು

ಕನ್ನಡವನ್ನೇ ಓದಲು ಬರದಿದ್ದರೆ ಉಳಿದ ವಿಷಯಗಳನ್ನು ಹೇಗೆ ಕಲಿಸುವುದು?
ಅದಕ್ಕೆಂದೇ ಓದುವಿಕೆಯ ಸಮಸ್ಯೆಯಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಓದುವೆ ನಾನು ಕಾರ್ಡ್ ಗಳನ್ನು ನೀಡಲಾಗುತ್ತಿದೆ. ಅಕ್ಷರ, ಪದ,ಪದಗುಚ್ಛ, ವಾಕ್ಯ ಎಂಬ 4 ತಂಡ ರಚಿಸಿ ಸೂಕ್ತ ಕಲಿಕೋಪಕರಣಗಳಿಂದ ಕಲಿಸಲಾಗುತ್ತಿದೆ. ಗೈರು ಹಾಜರಾತಿ ಸಮಸ್ಯೆಯಿರುವ ಕಾರಣ ಇದು ವೇಗ ಪಡೆದುಕೊಳ್ಳಲಾಗುತ್ತಿಲ್ಲವಾದರೂ ಕನಿಷ್ಠ ಬದಲಾವಣೆಯಾಗುತ್ತಿದೆ.ಶಿಕ್ಷಕರು ಸಾಕಷ್ಟು ಸಹಕರಿಸುತ್ತಿದ್ದಾರೆ

Friday, 20 November 2015

ನೀರೇಕೆ ಸಾರ್ವತ್ರಿಕ ದ್ರಾವಕ?

ನೀರು ಸಾರ್ವತ್ರಿಕ ದ್ರಾವಕ ಹೇಗೆ ಅಂತ ಇವತ್ತಿನ ತರಗತಿಯಲ್ಲಿ ಪ್ರಯೋಗಗಳ ಮೂಲಕ ತಿಳಿಸಲಾಯಿತು. ಸೀಮೆ ಎಣ್ಣೆ, ನೀರು ಹಾಗೂ ಕೊಬ್ಬರಿ ಎಣ್ಣೆಗಳನ್ನು ದ್ರಾವಕಗಳೆಂದೂ, ಉಪ್ಪು, ಸಕ್ಕರೆ ಮತ್ತು ತಾಮ್ರದ ಸಲ್ಫೇಟ್ ನ್ನು ದ್ರಾವ್ಯಗಳೆಂದೂ ಪರಿಚಯಿಸಿ ಯಾವ ದ್ರಾವಕವು ಹೆಚ್ಚು ದ್ರಾವ್ಯಗಳನ್ನು ಕರಗಿಸಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲು ತಿಳಿಸಲಾಯಿತು.
ವಿದ್ಯಾರ್ಥಿಗಳು ತಾವೇ ಕಂಡುಹಿಡಿದಂತೆ ಖುಷಿಪಟ್ಟರು.
ಬೆಳಕಿನ ಲಕ್ಷಣಗಳನ್ನೂ ತಿಳಿದುಕೊಳ್ಳಲಾಯಿತು

Wednesday, 18 November 2015

ವಾರದ ವಿಜ್ಞಾನ ಪ��ರಯೋಗಗಳು : ನೀರಿನ ಲಕ್ಷಣಗಳ

ನೀರು ಯಾವ ಧಾತುಗಳಿಂದಾಗಿದೆ? ಎಂದಾಗ ಹೈಡ್ರೋಜನ್ ಆಕ್ಸಿಜನ್ ಎಂದು ಹೇಳುವ ವಿದ್ಯಾರ್ಥಿಗಳು ಇಂದು ತಾವೇ ಪ್ರಯೋಗಗಳ ಮೂಲಕ ಪರೀಕ್ಷಿಸಿದರು. ಜತೆಗೆ ನೀರಿನ ಲಕ್ಷಣಗಳು, ಕುದಿಯುವ ಬಿಂದು ಕಂಡುಕೊಂಡರು. ಪ್ರಯೋಗಗಳು ವೈಜ್ಞಾನಿಕ ಸತ್ಯವನ್ನು ಪುಷ್ಠೀಕರಿಸಿ ಕಲಿಕೆಯನ್ನುಂಟು ಮಾಡಬಲ್ಲವು.

Saturday, 14 November 2015

ಮಕ್ಕಳ ದಿನಾಚರಣೆ 2015

ಇಂದು ನಂಮ ಕೊಡಚಿ ಶಾಲೆಯಲ್ಲಿ ಮಕ್ಕಳ ದಿನ(ನೆಹರು ಜಯಂತಿ) ಆಚರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳನ್ನು ಗೌರವಿಸಿ ಆಚರಣೆಯ ಮಹತ್ವವನ್ನು ತಿಳಿಸಲಾಯಿತು.
ವಿದ್ಯಾರ್ಥಿನಿ ಕು| ಅಮೃತಾ ಬಸವರಾಜ ಎಲ್ಲರನ್ನು ಸ್ವಾಗತಿಸಿದಳು. ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಕು| ಹಣಮಂತ ಜಗನ್ನಾಥ ನೆಹರು ಕುರಿತು ಮಾತನಾಡಿದ. ಮಕ್ಕಳಿಗೆ ಶುಭಾಶಯ ಕೋರಿ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

Thursday, 12 November 2015

'ರಾಷ್ಟ್ರೀಯ ಶಿಕ��ಷಣ ದಿನ' 11-11-2015

ಕೇಂದ್ರ ಶಿಕ್ಷಣ ಮಂತ್ರಿಗಳಾಗಿ ದೇಶದ ಶೈಕ್ಷಣಿಕ ರಂಗದಲ್ಲಿ ಮಹತ್ತರ ಬದಲಾವಣೆಯುಂಟು ಮಾಡಿದರು ಮೌಲಾನಾ ಅಬ್ದುಲ್ ಕಲಾಂ ಆಜಾದ್.
ಅವರ ಜನ್ಮದಿನ ಸ್ಮರಣಾರ್ಥ ದೇಶದೆಲ್ಲಡೆ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಮ್ಮ ಕೊಡಚಿ ಶಾಲೆಯಲ್ಲಿ ಮೌಲಾನಾರ ಜನ್ಮದಿನ ಆಚರಿಸಿ ಅವರ ಸ್ವಾತಂತ್ರ ಹೋರಾಟದ ಬದುಕು ಹಾಗೂ ಶಿಕ್ಷಣದಲ್ಲಿ ಉಂಟು ಮಾಡಿದ ಅಭಿವೃದ್ಧಿಯನ್ನು ಸ್ಮರಿಸಲಾಯಿತು.ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ನಮನ ಸಲ್ಲಿಸಿದರು

ಟಿಪ್ಪು ಜಯಂತಿ 10-11-2015

ದಿ.10-11-2015ರಂದು ನಮ್ಮ ಕೊಡಚಿ ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು. ಮಂಜುನಾಥ ಶಿಕ್ಷಕರು ಎಲ್ಲರನ್ನು ಸ್ವಾಗತಿಸಿದರು. ಮುಖ್ಯಶಿಕ್ಷಕರಾದ ಹರಿಶ್ಚಂದ್ರ ಅವರು ಟಿಪ್ಪು ಭಾವಚಿತ್ರಕ್ಕೆ ಪುಷ್ಪವಂದನೆ ಸಲ್ಲಿಸಿದರು. ಇನ್ನೋರ್ವ ಶಿಕ್ಷಕರಾದ ಗೋಣೆಪ್ಪ ಅವರು ಟಿಪ್ಪುವಿನ ಶೌರ್ಯ, ದೇಶಪ್ರೇಮ ಕುರಿತು ಮಾತನಾಡಿದರು.ಸಚಿನ್ ಕುಮಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು,ಗ್ರಾಮದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Thursday, 29 October 2015

ಮಕ್ಕಳ ಹಕ್ಕು-ಧ್ಯೇಯ ಗೀತೆ

ಮಕ್ಕಳ ಹಕ್ಕು ಧ್ಯೇಯ ಗೀತೆಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ,
ಕೃಪೆ:ಯೂ ಟೂಬ್

https://m.youtube.com/watch?v=h_vyk1XEYVE&feature=youtu.be

Wednesday, 7 October 2015

ಕಂಪ್ಯೂಟರ್ ಪರಿಚಯಾತ್ಮಕ ಪಾಠ

ಇಂದು ಮಧ್ಯಾಹ್ನದ ಅವಧಿಯಲ್ಲಿ 6 ಮತ್ತು 7ನೆಯ ತರಗತಿಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನ ಅರ್ಥ,ಕಂಪ್ಯೂಟರ್ ಹಿನ್ನೆಲೆ ಪೀಳಿಗೆಗಳು,ಕಂಪ್ಯೂಟರ್ ನ ಭಾಗಗಳು ಮುಂತಾದವುಗಳನ್ನು ಪರಿಚಯ ಮಾಡಿಕೊಡಲಾಯಿತು.
ಬಳಿಕ ಕಂಪ್ಯೂಟರ್ ಆನ್ ಆಫ್ ಹಾಗೂ ವರ್ಡ್ ಪ್ಯಾಡ್ ಪರಿಚಯಿಸಿ ಅಭ್ಯಾಸ ಮಾಡಿಸಲಾಯಿತು. ಮೊದಲ ಬಾರಿ ಕಂಪ್ಯೂಟರ್ ಮುಂದೆ ಕುಳಿತ ಚಿಣ್ಣರ ಖುಷಿ ಮೊದಲ ಮಳೆಯಲ್ಲಿ ನೆನದಂತಿತ್ತು.

Thursday, 1 October 2015

ಕಂಪ್ಯೂಟರ್ ಲ್ಯಾಬ್ : ಇಂದಿನಿಂದ ಶುರು

ಎರಡು ವರ್ಷಗಳಿಂದ ಕನಸಾಗಿದ್ದ ಕಂಪ್ಯೂಟರ್ ಲ್ಯಾಬ್ ನನಸಾಗಿದ್ದು ಜುಲೈ 31,2015ರಂದು. ನಮ್ಮ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ನಮ್ಮ ಕೊಡಚಿ ಶಾಲೆಗೆ 3 ಕಂಪ್ಯೂಟರ್ಗಳನ್ನು ನೀಡಿತು. ಇಂದು ಶಾಲೆಯಲ್ಲಿ ಅಧಿಕೃತವಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ನ್ನು ಉದ್ಘಾಟಿಸಲಾಯಿತು. ಮುಂದಿನ ಸೆಮ್ ದಿಂದ ಕಂ ಕಲಿಕೆ ಶುರು. ಸಂತಸದ ಕ್ಷಣಗಳ ಒಂದೆರಟು ಸ್ನಾಪ್ಸ್ ನೋಡಿ

Saturday, 5 September 2015

ಹನಿಗವನಗಳಲ್ಲಿ ರಕ್ಷಾಬಂಧನ

ಮೊನ್ನೆ ಮುಗಿದ ರಕ್ಷಾಬಂಧನ ಇನ್ನೂ ಕಾಡುತ್ತಿದೆ. ಕಾರಣ ಅಂದ ಆರು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಕುರಿತು ಹನಿಗವಿತೆಯ ಥರ ಬರೀರಿ ಅಂತ ಹೇಳಿದ್ದೆ. ಎದುರಿಗಿದ್ದ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಶಾಮಂತಿ4 ನ್ನು ಮೊದಲೇ ಪರಿಚಯಿಸಿದ್ದೆ. ಹೀಗಾಗಿ ಹಿಗ್ಗಿನಿಂದಲೇ ಚಿಣ್ಣರು ಹನಿಗವಿತೆ ಬರೆದ್ರು. ಆಯ್ದ ನಾಲ್ಕು ಕವಿತೆಗಳ ಫೋಟೊ. ಹೇಗಿವೆ ಅಂತ ನೀವೇ ಹೇಳಿ