Saturday 29 August 2015

ಆಮ್ಲಗಳ ಜತೆಗೊಂದಾಟ

"ಆಮ್ಲಗಳೆಂದರೆ ಗೊತ್ತಾ?"

"ಇಲ್ಲ ಸರ್"

"ಆಸಿಡ್ಸ್ ಅಂದ್ರೆ ಗೊತ್ತಾ?"

"ಗೊತ್ತು ಸರ್, ಅದೇ ಮೈ ಮೇಲೆ ಬಿದ್ರೆ ಸುಡುತ್ತದಲ್ಲ"

"ಹೌದು, ಅದೇ. ಆದ್ರೆ ಎಲ್ಲವೂ ಸುಡೋದಿಲ್ಲ"

ಹೀಗೆ ಮಾತಾಡುತ್ತ ಆಮ್ಲಗಳ ಬಗ್ಗೆ ಚರ್ಚಿಸುತ್ತಾ ನಡೆಯಿತು ನಂ ಪಾಠ. ಆಮ್ಲಗಳು ಲೋಹಗಳೊಂದಿಗೆ ಹೇಗೆ ವರ್ತಿಸುತ್ತವೆ ಎಂಬ ಪ್ರಯೋಗ ಮಾಡಿ ತೋರಿಸಿದಾಗ ವಿದ್ಯಾರ್ಥಿಗಳ ಆನಂದಕ್ಕೆ ಪಾರವೇ ಇರಲಿಲ್ಲ.
ಆಮ್ಲ+ಲೋಹ-->ಲವಣ+ಜಲಜನಕ

ಎಂಬ ರಾಸಾಯನಿಕ ಸಮೀಕರಣ ಸರಾಗವಾಗಿ ಹೇಳ್ತಾರೆ.

Wednesday 19 August 2015

Computer Lab; A Dream came true

I was very voracious to teach my students with computers. That is called as Computer Assisted Learning(CAL). 3years back We teachers thought of this idea. But it was highly impossible to villagers to donate such huge amount. But I asked INFOSYS foundation to pour its water to our dream plant. It agreed and made our dream true. The INFOSYS foundation donated 3computers on 31/7/2015. So we all teachers on behalf of all students and villagers thank the INFOSYS foundation.
Now we are making computer lab with all equipments so that all the students will be instructed with computers and also learn computer.
Dreaming good things will come true one or another day.What do you say?

Monday 17 August 2015

Celebration of 69th Independence day

This 69th Independence day was celebrated in Govt Higher Primary School Kodachi. Tq-Jewargi, Dist-Kalaburagi. Headmaster Mr.Harishchandra hoisted the national flag and all saluted with national anthem.
Few of our students delivered speech, cultural programmes were performed.
After that prizes sponcered bu Gram Panchayat Yalwar were distributed.
Then a heavy discussion on school needs began. All leaders of village,gram panchayat members said that they would get school playground for students as soon as possible.
Afterwards sweet and snacks were given

Friday 7 August 2015

ಹೀಗಿದೆ ನಮ್ಮ '' ಶಾಲಾ ಗ್ರಂಥಾಲಯ

ಶಾಲೆಗೊಂದು ಗ್ರಂಥಾಲಯ ಇದೆ ಆದರೆ ಅದು ವಿದ್ಯಾರ್ಥಿಗಳಿಗಾಗಿ ತೆರೆದಿರಲ್ಲ ಎಂಬ
ಅಪಸ್ವರ ಇದೆ. ಆದರೆ ನಮ್ಮ ಕೊಡಚಿ ಶಾಲೆಯಲ್ಲಿ ಹಾಗಿಲ್ಲ. ವಿದ್ಯಾರ್ಥಿಗಳು
ತಮಗ್ಯಾವುದಿಷ್ಟವೋ ಆ ಪುಸ್ತಕಗಳನ್ನು ಆರಿಸಿ ವಿತರಣಾ ವಹಿಯಲ್ಲಿ ನಮೂದಿಸಿ
ಪಡೆಯುತ್ತಾರೆ. ಒಂದುವಾರದ ಬಳಿಕ ಪುಸ್ತಕದ ಜತೆಗೆ ಅದರ ವಿಮರ್ಶೆ,ಇಷ್ಟವಾದ ಭಾಗ ಅಥವಾ
ಕೆಲವೊಮ್ಮೆ ಚಿತ್ರಗಳನ್ನೂ ಬರೆಯುತ್ತಾರೆ. ಅದಕ್ಕೂ ಮೊದಲು ಪ್ರತಿ ಬುಧವಾರ
ತರಗತಿಗೊಂದರಂತೆ ವಿಶಿಷ್ಟವಾದ ಕೃತಿಗಳನ್ನು ಪರಿಚಯಿಸಿ ಅದರ ಲೇಖಕರ ಕುರಿತು ಮಾಹಿತಿ
ನೀಡಲಾಗುತ್ತದೆ. ಶಿಕ್ಷಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳೇ ಗ್ರಂಥಾಲಯ ವಹಿ
ನಿರ್ವಹಿಸುತ್ತಾರೆ. ತರಗತಿ ಕೋಣೆಯಲ್ಲೂ ಸಹ ವಾಚನಾಲಯ ಮೂಲೆ ರಚಿಸಿ ಬಾಲ
ವಿಜ್ಞಾನ,ಶಿಕ್ಷಣ ಶಿಲ್ಪಿ, ವಿಜಯವಾಣಿ ಮುಂತಾದ ಪತ್ರಿಕೆಗಳನ್ನು ಇಡಲಾಗಿದೆ. ಬಿಡುವಿನ
ವೇಳೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ,
ಸ್ದಳದ ಅಭಾವವಿದ್ದರೂ ತಕ್ಕಮಟ್ಟಿಗೆಗ್ರಂಥಾಲಯ ನಮ್ಮ ಕೊಡಚಿ ಶಾಲೆಯಲ್ಲಿ ಸಜೀವವಾಗಿದೆ

ಕಲಿಕೆಯ ಭಾಗವಾಗಿ ಪರಿಸರ ಶಿಕ್ಷಣ

ಸುಮಾರು ಎರಡು ವರ್ಷಗಳ ಹಿಂದೆ ನಮ್ಮ ಕೊಡಚಿ ಶಾಲೆಯಲ್ಲಿ ಒಂದೇ ಒಂದು ಸಸಿ ಇರಲಿಲ್ಲ. ಸೂಕ್ತ ಕಾಂಪೌಂಡ್ ಹಾಗೂ ಸರಿಯಾದ ವ್ಯವಸ್ಥೆ ಇರದ ಕಾರಣ ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವುದು ಕನಸಿನ ಮಾತಾಗಿತ್ತು. ಆದರೆ ಛಲ ಬಿಡದೆ ಸಹೋದ್ಯೋಗಿಯಾದ ಶ್ರೀ ಗೋಣೆಪ್ಪ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸುಮಾರು70ವಿವಿಧ ಬಗೆಯ ಸಸಿಗಳನ್ನುಅರಣ್ಯ ಇಲಾಖೆಯಿಂದ ಪಡೆದು ಇದ್ದ ಸ್ವಲ್ಪ ಶಾಲಾವರಣದಲ್ಲಿಯೇ ನೆಟ್ಟರು. ಈಗ ಅವುಗಳಿಗೆ ಎರಡರ ಪ್ರಾಯ.

Thursday 6 August 2015

ಶಾಲಾ ಸಂಸತ್ತು ; ಒಂದು ಪ್ರಜಾತಾಂತ್ರಿಕ ಅರಿವ

"ಇಂದಿನ ಪ್ರಜೆಗಳೇ ನಾಳಿನ ನಾಗರಿಕರು"
ಎಂಬ ಮಾತಿನಂತೆ 2015-16ನೆಯ ಶೈಕ್ಷಣಿಕ ವರ್ಷದಾರಂಭದಲ್ಲಿ ಒಂದು ಉತ್ತಮ ಶಾಲಾಡಳಿತ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾತಂತ್ರ ಅರಿವು ಮೂಡಿಸಲು ದಿ6/6/2015 ರಂದು ನಮ್ಮ ಕೊಡಚಿ ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಲಾಯಿತು. ವಿವಿಧ ತರಗತಿಯಿಂದ ಅನೇಕ ಖಾತೆಗಳಿಗನುಸಾರ ಒಟ್ಟು 30 ವಿದ್ಯಾರ್ಥಿ ಉಮೇದುವಾರಗಳಲ್ಲಿ 16ವಿದ್ಯಾರ್ಥಿಗಳು ಜಯಶಾಲಿಯಾದರು. ಒಟ್ಟು 110ವಿದ್ಯಾರ್ಥಿಗಳು ಮತ ಚಲಾಯಿಸಿದರು.